
ಅಮೀನಗಡ:
ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಇಂದು ಸಾಯಂಕಾಲ ೦೫ ಗಂಟೆಗೆ ವಿಜಯ ಮಹಾಂತೇಶ ಮಠದಲ್ಲಿ ಕರೋನ ಜಾಗೃತಿ ಹಾಗೂ ಕರೋನ ನಿಯಂತ್ರಣದ ಬಗ್ಗೆ ಗ್ರಾಮದ ಪ್ರತಿ ವಾಡ್೯ ನಲ್ಲಿ ಹೇಗೆ ಜಾಗೃತಿ ಮೂಡಿಸಬೇಕು ಅದನ ಕಟ್ಟಿ ಹಾಕುವ ಹತ್ತು ಹಲವಾರು ಮಾರ್ಗಗಳ ಕುರಿತು ಸ್ಥಳೀಯ BHEO ಶ್ರೀಮತಿ ಎನ್ ಎನ್ ನಾಯಕ ಅವರ ಹತ್ತಿರ ಸುಧೀರ್ಘ ಚರ್ಚೆ ಮಾಡಲಾಯಿತು, ಗ್ರಾಮ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ಮಾತನಾಡಿ ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ವೈಧ್ಯಕೀಯ ಸೇವೆ ಮಾಡುತ್ತಿರುವ ಡಾಕ್ಟರ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕರೆದು ಕರೋನ ರೋಗಿಗಳ ಮಾಹಿತಿಯನ್ನು ಗೌಪ್ಯವಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದಾಗ ಸಾಧ್ಯವಾದಷ್ಟು ಅವರನ್ನು ಮನ ಒಲಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಇದನ ಸ್ಪಲ್ಪ ಮಟ್ಟಿಗೆ ತಡೆ ಹಿಡಿಯಬಹುದು ಎಂದು ಸಲಹೆ ನೀಡಿದರು.

ಅಲ್ಲದೆ ಈಗಾಗಲೇ ಗ್ರಾಮದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪ್ರತಿ ದಿನಕ್ಕೆ ೪೦ ಜನರಿಗೆ ಮಾತ್ರ ಅವಕಾಶ ಇದ್ದು ಇದರಿಂದ ಜನರಿಗೆ ತುಂಬಾ ಅನಾನೂಕುಲ ಆಗಲಿದೆ ಇದನ ೧೦೦ ರಿಂದ ೨೦೦ ಜನಕ್ಕೆ ಲಸಿಕೆ ವ್ಯವಸ್ಥೆ ಹಾಕಿಸಿಕೊಳ್ಳಲು ಅವಕಾಶ ಮಾಡಿ ಕೊಡಬೇಕೆಂದು ತಾಲೂಕು TDH ಶ್ರೀ ಪ್ರಶಾಂತ ತುಂಬಗಿ ಹಾಗೂ DHO ದೇಸಾಯಿ ಅವರೊಂದಿಗೆ ದೂರವಾಣಿ ಮೂಲಕ ಸಭೆಯಲ್ಲಿ ಶಂಕರ್ ಭಜಂತ್ರಿ ಮಾತನಾಡಿದರು, ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಲಸಿಕೆ ಕೋಡುವ ಭರವಸೆ ನೀಡಿದರು. ನಂತರ ಸ್ಥಳೀಯ ಔಷದ ಅಂಗಡಿ ಮಾಲೀಕರನ್ನು ಕರೆದು ಯಾವುದೇ ವೈದ್ಯಕೀಯ ಪರೀಕ್ಷೆ ಇಲ್ಲದೇ ಜ್ವರ,ನೇಗಡಿ ಕೆಮ್ಮು ಇವುಗಳ ಮಾತ್ರೆ ತೆಗೆದುಕೊಳ್ಳುವ ಅಥವಾ ಕರೋನ ಲಕ್ಷಣ ತಮ್ಮ ಗಮನಕ್ಕೆ ಬಂದರೆ ಅಂತಹ ವ್ಯಕ್ತಿಗಳ ಮಾಹಿತಿಯನ್ನು ವೈಧ್ಯರಿಗೆ ನೀಡುವ ಸಲುವಾಗಿ ನಾಳೆ ಇದೇ ವಿಜಯ ಮಹಾಂತೇಶ ಮಠದಲ್ಲಿ ಸಭೆ ಕರೆದು ಮಾಹಿತಿ ನೀಡಬೇಕು ಎಂದು SDMC ಅಧ್ಯಕ್ಷರು ಜಗದೇಶ ಪಾಟೀಲ ಸಲಹೇ ನೀಡಿದರು. ಕೋವ್ಯಾಕ್ಸೀನ್ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮದಲ್ಲಿ ಲಸಿಕೆ ಹಾಕಿಸಲು ಶಾಸಕರ ಗಮನಕ್ಕೆ ತಂದು ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಬಿಜೆಪಿ ಯುವ ನಾಯಕ ನಾಗೇಶ ಗಂಜಿಹಾಳ ಹೇಳಿದರು, ಈ ವಿಚಾರವಾಗಿ ಈ ಸಭೆಯ ಪಾಲ್ಗೊಂಡ ಆಶಾ ಕಾರ್ಯಕರ್ತೆಯರು ಜನ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಮಾಸ್ಕ್ ಹಾಕಿಸಿಕೊಳ್ಳಿ ಎಂದರೆ ಎದುರು ವಾದಿಸುತ್ತಾರೆ,ಲಸಿಕೆ ಹಾಕಿಸಿಕೊಳ್ಳಿ ಎಂದು ಎಷ್ಟು ಸಲ ಮನೆ ಮನೆಗೆ ಮಾಹಿತಿ ನೀಡಿದರು ಆಗ ಸ್ಪಂದನೆ ಮಾಡಲಿಲ್ಲ ಇನ್ನಾದರು ಈ ಬಗ್ಗೆ ಜಾಗೃತಿ ಮಾಡಲು ತಾವು ಕೈ ಜೋಡಿಸಿದ್ದು ತುಂಬಾ ಧನ್ಯವಾದ ಎಂದರು.

ಸ್ಥಳೀಯ BHEO ಶ್ರೀಮತಿ N,N ನಾಯಕ ಅವರು ಕರೋನ ಈಗ ನಿಯಂತ್ರಣ ಬರುತ್ತಿದೆ ಆದರೆ ಜನ ಎಚ್ಚರಿಕೆ ,ಹಾಗೂ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಹೀಗಾಗಿ ನಮ್ಮ ಕರ್ತವ್ಯವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ, ಇದಕ್ಕೆ ಇನ್ನೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ನಾಳೆ ಈ ಬಗ್ಗೆ ಸುಧೀರ್ಘ ಚರ್ಚೆ ಮಾಡಿ ಕರೋನ ಕಟ್ಟಿಹಾಕಲು ಎಲ್ಲಾ ರೀತಿಯ ಆಯಾಮಗಳನ್ನು ಹುಡುಕುವ ಪ್ರಯತ್ನ ಮಾಡಲು ಎಲ್ಲರೂ ಸಹಕಾರ ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಸದರಿ ಈ ಸಭೆಯಲ್ಲಿ ವೈಧ್ಯಕೀಯ ನಿಬ್ಬಂದಿ ಸೇರಿದಂತೆ ಮಹಾಂತೇಶ ಭದ್ರಣ್ಣವರ, ದೇವರಾಜ ಕಮತಗಿ,ನಾಗೇಶ ಗಂಜಿಹಾಳ, ಗ್ಯಾನಪ್ಪ ಗೋನಾಳ,ಜಗದೇಶ ಪಾಟೀಲ,ಹನಮಂತ ಮಿಣಜಗಿ,ಶಂಕರ್ ಭಜಂತ್ರಿ ಚನ್ನಪ್ಪ ಭದ್ರಣ್ಣವರ, ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿ ಮಹಾಂತೇಶ ಭೋಳರೆಡ್ಡಿ, ಹಾಗೂ ಹನಮಂತ ಆಡಗಲ್ಲ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತಿ ಇದ್ದರು.ನಾಳೆ ಬೆಳಗ್ಗೆ ೧೦,ಗಂಟೆಗೆ ಗ್ರಾಮದ ಎಲ್ಲಾ ಸಮಾಜ ಹಿತ ಚಿಂತಕರು ಸಭೆಗೆ ಬರಲು ದೇವರಾಜ ಕಮತಗಿ ಅವರು ವಿನಂತಿಸಿದರು.