Breaking News

ಯಾವುದೋ ಕಾರಣಕ್ಕೆ ಮೃತಪಟೂ ಕೊರೊನಾ ಹಣೆಪಟ್ಟಿ: ಕೊರೊನಾ ಹಣ ಮಾಡಲು ಹಬ್ಬಿಸಿದ ಭೂತ

ಕಾರವಾರ: ನೆರೆಮನೆಯವರು, ನಮ್ಮವರಿಗೂ ಕೊರೊನಾ ಬಂದರೆ ಹೆದರಬೇಕಿಲ್ಲ. ಕೊರೊನಾಗೆ ನಮ್ಮ ದೇಶದ ಔಷಧ ಸೂಕ್ತವಾದ ಮದ್ದು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಔಷಧ ಕಂಪನಿಗಳು ಲಾಬಿ ಮಾಡಿ ಹಣ ಗಳಿಸಲು ಕೊರೊನಾ ಭೂತ ಎಬ್ಬಿಸುತ್ತಿದ್ದಾರೆ. ಕೊರೊನಾದಿಂದ ಒಂದು ಪರ್ಸೆಂಟ್ ನಷ್ಟು ಜನರು ಸತ್ತಿಲ್ಲ. ಯಾವುದೋ ಕಾರಣದಿಂದ ಸತ್ತವರಿಗೆ ಕೊರೊನಾ ಹಣೆಪಟ್ಟಿ ಕಟ್ಟಲಾಗಿದೆ. ಕೊರೊನಾದಿಂದಲೇ ಸಾವನ್ನಪ್ಪಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ. ಸಾಮಾಜಿಕ ಸ್ವಾಸ್ಥ್ಯ, ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ದಿನನಿತ್ಯದ ಜೀವನದಲ್ಲಿ ನಾವು ಕೊರೊನಾ ಎದುರಿಸಬೇಕು ಎಂದು ತಿಳಿಸಿದ್ದಾರೆ.

ಜ್ವರ, ಶೀತವಾದ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಕೊರೊನಾ ಪಾಸಿಟಿವ್ ಎಂದೇ ಬರುತ್ತೆ. ಗಂಟಲು ದ್ರವ ಮಾದರಿ ಸಂಗ್ರಹಿಸಿ ಕೊರೊನಾ ವೈರಸ್ ಪತ್ತೆ ಹಚ್ಚುತ್ತೇವೆ ಎನ್ನುವುದು ಯಾವ ದೇಶಕ್ಕೂ ಸಾಧ್ಯವಾಗಿಲ್ಲ.

ಕೊರೊನಾ ಕಾರಣದಿಂದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಜನರ ಕಾಳಜಿಯಿಂದ ಸರ್ಕಾರ ಲಾಕ್ಡೌನ್ ಜಾರಿಮಾಡಿತು. ಔಷಧ ಕಂಪನಿಗಳು ಲಾಬಿ ಮಾಡಿ ಹಣಗಳಿಸಲು ಕೊರೊನಾ ಭೂತ ಎಬ್ಬಿಸುತ್ತಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಅನಂತ್ ಕುಮಾರ್ ಹೇಳಿದ್ದಾರೆನ್ನಲಾಗಿದೆ.

About vijay_shankar

Check Also

BJP ತೋರೆದು ಕಾಂಗ್ರೆಸ್ ಕೈ ಹಿಡಿದ ರಂಗಪ್ಪ ಸುರಪೂರ

ಇಲಕಲ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ:- ಕೆಪಿಸಿಸಿ ಸದಸ್ಯರಾದ ಶಾಂತಕುಮಾರ್ ಸುರಪುರ ಅವರ ನೇತೃತ್ವದಲ್ಲಿ ಯುವ ಮುಖಂಡರಾದ ರಂಗಪ್ಪ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.