ಅಮೀನಗಡ : ರಾಷ್ಟ್ರಾದ್ಯಂತ ಎರಡನೆ ಅಲೇ ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಮಾಸ್ಕ್ ಮತ್ತು ಸಾಮಾಜಿಕ ಅಂತರವಿರದೆ ನಿರ್ಲಕ್ಷ್ಯ ವಹಿಸಬೇಡಿ.
ಮಾರ್ಕೆಟ್ ಪ್ರದೇಶದಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.
ಮಾಸ್ಕ್ ಹಾಕಿ, ಸೋಷಿಯಲ್ ಡಿಸ್ಟೆನ್ಸ್ ಪಾಲಿಸಿ ಎಂದು ಸಾರ್ವಜನಿಕರಿಗೆ ಎರಡನೇಯ ಅಲೇ ಕರೋನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರ ಬಗ್ಗೆ ಜನರು ಗಮನ ಹರಿಸಬೇಕು ಎಂದು ಅಮೀನಗಡ ಪಿ ಎಸ್ ಐ ಎಮ್, ಜಿ ಕುಲಕರ್ಣಿ ಅವರು ತಿಳಿಸಿದರು.

ಇಂದಿನಿಂದ ವ್ಯಾಪಾರ ಮಾಡುವ ಹಾಗೆ ಇರಲ್ಲ ಹೀಗಾಗಿ ಎಲ್ಲಾ ಗ್ರಾಹಕರಿಗೆ ಪಾರ್ಸಲ್ ಮುಖಾಂತರ ವಿತರಣೆ ಮಾಡಬೇಕು ಇಂದಿನಿಂದ ರಾತ್ರಿ 8 ಘಂಟೆಯಿಂದ ಬೆಳ್ಳಗೆ 6 ಘಂಟೆಯವರೆಗೆ ದಿನಾಂಕ 4 ನೇ ತಾರೀಖಿನ ವರೆಗೂ ಕರ್ಪ್ಯೂ ಜಾರಿಯಲ್ಲಿ ಇರುತ್ತದೆ. ಎಂದರು ಸಭೆಯಲ್ಲಿ ನಗದ ಎಲ್ಲ ವ್ಯಾಪಾರಸ್ಥರನ್ನು ಹಾಗೂ ನಗರದ ಮುಖಂಡರನ್ನು ಪಟ್ಟಣ ಪಂಚಾಯತ್ ಸಿಬ್ಬಂದಿ ವರ್ಗದವರು ಸೇರಿದಂತೆ ಅಮೀನಗಡ ಪಟ್ಟಣದ ಸಮಸ್ತ ನಾಗರಿಕರನ್ನ ಸೇರಿಸಿ ಸರ್ಕಾರದ ಆದೇಶದಂತೆ ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು,
ಎಲ್ಲರಿಗೂ ಒಳ್ಳೆಯದು ಆಗುತ್ತೆ ಅಂತ ಎಲ್ಲರಿಗೂ ತಿಳಿಸಿ ಹೇಳಿದರು ಯಾರು ಸರಿಯಾಗಿ ಪಾಲನೆ ಮಾಡದಿದ್ದರೆ ಅವರ ಮೇಲೆ ನಿರ್ದಾಕ್ಷನ್ಯವಾಗಿ ಕ್ರಮ ಕೈ ಗೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಿದ್ದರು. ಈ ಸಭೆಯಲ್ಲಿ ಅಜಮೀರ ಮುಲ್ಲಾ,ಅಮರೇಶ ಮಡ್ಡಿಕಟ್ಟಿ, ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಬಾಸ್ಕರ್, ಖಾದ್ರಿ, ಬಾಗೇವಾಡಿ, ಹಾಗೂ ನಗರದ ಎಲ್ಲಾ ಅಂಗಡಿ ವರ್ತಕರು ಉಪಸ್ಥಿತಿ ಇದ್ದರು.
ವರದಿ : ಮುಸ್ತಾಪ್ ಮಾಸಾಪತಿ