

ಸನ್ಮಾನ್ಯ ಶ್ರೀಮತಿ ಫಾತೀಮಾ ದವಲಸಾಬ ಅತ್ತಾರ ನೂತನ ಪಟ್ಟಣ ಪಂಚಾಯತ ಸದಸ್ಯರು ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ೭ನೇ ವಾರ್ಡಿನ ಸಮಸ್ತ ಮತದಾರ ಪ್ರಭುಗಳಿಗೆ ಹಿರಿಯರಿಗೆ,ಕಾರ್ಯಕರ್ತರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,

ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಾರ್ಡ ನಂಬರ್ ೭ ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿ ಚುನಾಯಿತ ರಾಗಿದ್ದಾರೆ.ಇವರ ಪತಿಯಾದ ಶ್ರೀ ದಾವಲಸಾಬ ಫೀರಸಾಬ ಅತ್ತಾರ ಅವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ೩೦ ವರ್ಷಗಳಿಂದ ಪಕ್ಷದ ಬಲವರ್ಧನೆಗಾಗಿ ಹಾಗೂ ಸಮಾಜಿಕ ರಂಗದಲ್ಲಿ ಸದಾ ಜನಪರ ಕಾರ್ಯಗಳನ್ನು ಮಾಡಿದವರು ಪ್ರಸಕ್ತ ೨೦೧೦ರಲ್ಲಿ ಗ್ರಾಮ ಪಂಚಾಯತಿ ಸದಸ್ಯರಾಗಿ ಜನ ಸೇವೆ ಮಾಡಿ ಇದೆ ಮಾಡಿನ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಮಾಡಿ ಸೈ ಎನ್ನಿಸಿಕೊಂಡವರು,ಇದರ ಫಲವಟಗಿ ಇಂದು ಅವರ ಧರ್ಮಪತ್ನಿ ಶ್ರೀಮತಿ ಫಾತೀಮಾ ಅವರು ವಿಜಯದ ನಗೆ ಬಿರಿದ್ದಾರೆ, ಜನರ ಉತ್ತಮ ವಿಶ್ವಾಸ ಹಾಗೂ ಇವರ ಸರಳತೆ,ನೋಡಿ ಇಂತಹ ಸಾಮಾಜೀಕ ಚಿಂತಕರ ಅವಶ್ಯಕತೆ ಇದೆ ಎಂದು ಇವರು ಪಕ್ಷೇತರರಾಗಿ ನಿಂತರೂ ಸಹ ಜನ ಆರಿಸಿ ತಂದಿದ್ದಾರೆ, ಜನರ ಕಲ್ಯಾಣ ಹಾಗೂ ಅಭಿವೃದ್ಧಿಗಾಗಿ ದಾವಲಸಾಬ ಅವರು ಅವರ ಶ್ರೀಮತಿ ಅವರೊಂದಿಗೆ ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಸೇವೆ ಮಾಡುವುದಾಗಿ ತಿಳಿಸಿದರು.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News