
ಹುನಗುಂದ ತಾಲೂಕಿನ ಅಮೀನಗಡ ನಗರದ ವಾರ್ಡ ನಂ,೧೬ ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದೇನೆ, ಎಲ್ಲಾ ಗೌರವಾನ್ವಿತ ಮತ ಬಾಂಧವರು ತಮ್ಮ ಅಮೂಲ್ಯವಾದ ಮತ ನೀಡಿ ಆರ್ಶಿವದಿಸಲು ವಿನಂತಿ ಸುತ್ತೇನೆ. ತಮ್ಮ ಸಹಕಾರ ಕರುಣೆ ಇರಲಿ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ವಿಜಯಕು ಮಾರ್ ಎಸ್ ಕನ್ನೂರು ಅವರು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ & ಪಕ್ಷದ ಅಭ್ಯರ್ಥಿಯಾಗಿ ವಾರ್ಡ ನಂಬರ ೧೬ ರಿಂದ ಕಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ಸುಮಾ ರು ವರ್ಷಗಳಿಂದ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಮಾಡಿ ಅತೀ ಹೆಚ್ಚಿನ ಮತ ಲೀಡ್ ಕೊಟ್ಟು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಅಮೀನಗಡ ನಗರದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಕೇಂದ್ರ ಬಿಂದುವಾಗಿ ಇಡೀ ಯುವ ಸಮೂಹವನ್ನು ಒಗ್ಗೂಡಿಸಿ ಅಮೀನಗಡ ನಗರಕ್ಕೆ ಈಗಾಗಲೇ ಲಕ್ಷಾಂತರ ರೂಪಾಯಿ ಅನುದಾನ ತಂದು ವಿವಿಧ ರಸ್ತೆ,ಸಮೂದಾಯ ಭವಣ,ಹಲವಾರು ಕೆಲಸಗಳನ್ನು ತಂದ ಕೀರ್ತಿ ವಿಜಯ ಅವರಿಗೆ ಸಲ್ಲುತ್ತದೆ. ಅಲ್ಲದೆ ಸಮಾಜಕ್ಕೆ ಬೆಳಕು ಚಲ್ಲುವಂತ ಹಲವಾರು ಜನಪರ ವಿಶೇಷ ಕಾರ್ಯಕ್ರಮಗಳ ಮೂಲಕ ಬಡವರಿಗೆ ನೇರವಾದವರು. ಈಗ BJP ಪಕ್ಷದಿಂದ ಅಮೀನಗಡದ ಪಟ್ಟಣ ಪಂಚಾಯತ ಚುನಾವಣೆ ಗೆಲುವಿನ ಉತ್ಸಾಹದ ಮೂಲಕ ಜನಸೇವೆ ಮಾಡಲು ನಿಂತಿದ್ದಾರೆ,

ಇವರ ಪ್ರಣಾಳಿಕೆ ನೋಡಿದ ಯುವ ಸಮೂಹ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ, ಪಕ್ಷಾತೀತವಾಗಿ ಎಲ್ಲಡೆ ಬೆಂಬಲ ವ್ಯಕ್ತವಾಗುತ್ತಿದೆ ಸ್ವತಹ ಸಂಸದ ಶ್ರೀ ಪಿ,ಸಿ ಗದ್ದೆಗೌಡರು ಶಾಸಕ ಶ್ರೀ ವೀರಣ್ಣ ಚರಂತಿಮಠ ಅವರು ಪ್ರಚಾರದಲ್ಲಿ ತೋಡಗಿ ಪಕ್ಷದ ೧೬ ಅಭ್ಯರ್ಥಿಗಳನ್ನು ಗೆಲ್ಲಿಸಲು ಮತ ಯಾಚಿಸಿದರು. ವಿಜಯಕುಮಾರ ಅವರ ಸಾಮಾಜಿಕ ಸೇವೆ ಹಾಗೂ ಬಡವರ ಬಗ್ಗೆ ಅವರಿಗೆ ಅಪಾರ ಖಾಳಜಿ ಇದೆ,೧೬ ನೇ ವಾರ್ಡಿನ ಎಲ್ಲಾ ಅಲ್ಪ ಸಂಖ್ಯಾತರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಮುಂದಿನ ದಿನಮಾನದಲ್ಲಿ ಸರಕಾರದ ಅನೇಕ ಸಾಲ ಸೌಲಭ್ಯಗಳನ್ನು ,ಮನೆಗಳನ್ನು ಬಡವರಿಗೆ ಗುರುತಿಸಿ ಮನೆ ಹಾಕಿಸಿ ಕೂಲಿ ಕಾರ್ಮಿಕರ ಕಾರ್ಡ ಹೀಗೆ ಅವರ ಬದುಕಿಗೆ ಹಲವಾರು ಸೌಲಭ್ಯಗಳನ್ನು ನೀಡಿ ನೇರಳಾಗುವ ಆಶಾ ಭಾವಣೆ ವ್ಯಕ್ತಪಡಿಸಿದರು, ವಿಜಯಕುಮಾರ್ ಕನ್ನೂರು ಅವರಂತಹ ನಿಷ್ಟಾವಂತ ಪಕ್ಷದ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಅವಶ್ಯಕ ಹಾಗೂ ಈ ಸಮಾಜಕ್ಕೂ ಕೂಡ ಸಮಗ್ರ ಅಭಿವೃದ್ಧಿಗಾಗಿ ಇಂತಹ ಸಾಮಾಜಿಕ ಚಿಂತಕರ ಅವಶ್ಯಕತೆ ಇದೆ,

ವಿಜಯಕುಮಾರ್ ಅವರು ಜನಸೇವೆ ಮಾಡುತ್ತಾ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡವರು,ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ವಿಜಯಕುಮಾರ್ ಕನ್ನೂರು ಅವರನ್ನು ಇಂದು ವಾರ್ಡ ನಂಬರ್ ೧೬ರಲ್ಲಿ BJP ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕಣದಲ್ಲಿದ್ದಾರೆ,ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಇವರನ್ನು ತಾವೇ ಗುರುತಿಸಿ BJP ಗುರುತಿನ ಕಮಲಕ್ಕೆ ಅಮೂಲ್ಯವಾದ ಮತ ನೀಡಬೇಕೆಂದು ಸಂತೋಷ ಕಂಗಳ ಅವರು ವಿನಂತಿಸಿದರು. ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ BJP ಸರಕಾರ ಇರುವುದರಿಂದ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆರ್ಶಿವದಿಸಬೇಕೆಂದು ಮಾನ್ಯ ಸಂಸದರಾದ ಶ್ರೀ ಪಿ,ಸಿ,ಗದ್ದೆಗೌಡರು ಹಾಗೂ ಶಾಸಕ ಶ್ರೀ ವೀರಣ್ಣ ಚರಂತಿಮಠ ಅವರು ಅಭ್ಯರ್ಥಿಗಳ ಪರವಾಗಿ ವಿನಂತಿಸಿದರು.ಇಂತಹ ಸಮಾಜಿಕ ಚಿಂತನೆಯುಳ್ಳ ವ್ಯಕ್ತಿಗಳು ಸಮಾಜದಲ್ಲಿ ಸಿಗುವುದು ಅಪರೂಪ ಈ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರೀ ವಿಜಯಕುಮಾರ್ ಅವರಂತಹ ದಿಟ್ಟ ಸಾಮಾಜಿಕ ಹೋರಾಟಗಾರರ ಅವಶ್ಯಕತೆ ಇದೆ,

ಇಂತಹ ಅವಕಾಶವನ್ನು ಮಾನ್ಯ ಶಾಸಕರು ನೀಡಿ ಗೆಲವು ಸಾಧಿಸಿದ್ದೆ ಆದರೆ ನಮ್ಮ ವಿಶೇಷ ಅನುದಾನ ದ ಮೂಲಕ ಕೆಲಸ ನೀಡಿ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ,ಮತದಾರರು ಈ ಚುನಾವಣೆಯಲ್ಲಿ ನನಗೆ ಆರ್ಶಿವಾದ ಮಾಡಬೇಕೆಂದು ವಿಜಯಕುಮಾರ್ ಅವರು ವಿನಂತಿಸಿದರು,ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನ ಕೋರುತ್ತಾ ಹೊಸ ಭರವಸೆಯೊಂದಿಗೆ ಈ ಹೊಸ ವರ್ಷಕ್ಕೆ ಅಧಿಕಾರ ನೀಡಿ ನಗರದ ಸಮಗ್ರ ಅಭಿವೃದ್ಧಿಗೆ ಸೇವೆ ಮಾಡಲು ಅವಕಾಶ ಕೊಡಿ ಎಂದು ವಿನಂತಿಸಿದರು.

ಭಾರತೀಯ ಜನತಾ ಪಕ್ಷದ ಈ ಕಮಲದ ಚಿನ್ನೆಗೆ ಮತದಾರ ಪ್ರಭುಗಳು ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಕೇಳಿಕೊಳ್ಳುತ್ತೇನೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News