
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಕೆನಡಾ ಬ್ಯಾಂಕ್ ನಲ್ಲಿ ಕಳೆದ ೨ ವರ್ಷಗಳಿಂದ ಸಿಬ್ಬಂದಿ ಇಲ್ಲ ಅಮೀನಗಡ ನಗರದಲ್ಲಿ ಇರುವ ಕೆನಡಾ ಬ್ಯಾಂಕ್ ವ್ಯೆವಹಾರ ಗಿಂತ ಹೆಚ್ಚಿನ ವ್ಯವಹಾರ ಇದ್ದರು ಸಹ ಜೆ,ಎಮ್ ಅವರು ಉಡಾಫೆ ಉತ್ತರ ನೀಡುತ್ತಿದ್ದಾರೆ ಹಲವಾರು ಸಲ ಮನವಿ ಮಾಡಿ ಮಾಡಿಕೊಂಡುರು ಸಹ ಇದಕ್ಕೆ ಸ್ಪಂದನೆ ಮಾಡುತ್ತಿಲ್ಲ ಎಂದು ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇವರಾಜ್ ಕಮತಗಿ ಅವರು ಬೇಸರ ವ್ಯಕ್ತಪಡಿಸಿದರು. ಮನವಿ ಸಲ್ಲಿಸಿ ಮಾತನಾಡಿದ ಹುನಗುಂದ ತಾಲೂಕಿನ OPC ಘಟಕದ ಅಧ್ಯಕ್ಷ ನಾಗೇಶ ಗಂಜಿಹಾಳ ಅವರು ಶೂಲೇಭಾವಿ ಗ್ರಾಮದಲ್ಲಿ ಉತ್ತಮ ಹಣಕಾಸಿನ ವ್ಯವಹಾರ ಇದ್ದರು ಸಹ ಜನತೆ ನಿತ್ಯ ತೊಂದರೆ ಅನುಭವಿಸುತ್ತಾರೆ, ಈ ಹಿಂದೆ ಇದ್ದಂತಹ ಅನೇಕ ಬ್ಯಾಂಕ್ ವ್ಯವಸ್ಥಾಪಕರು ಹಿಂದೆ ಭಾಷೆಯಲ್ಲಿ ಮಾತನಾಡುವುದರಿಂದ ಅನೇಕ ಸಮಸ್ಯೆಗಳನ್ನು ಹೇದರಿಸಿದ್ದರು ಈಗ ಉತ್ತಮ ವ್ಯವಸ್ಥಾಪಕರು ಇದ್ದರು ಸಹ ಇಲ್ಲಿ ಸಿಬ್ಬಂದಿ ಇಲ್ಲ ಕಳೆದ ೪- ೫ ವರ್ಷಗಳಿಂದ ಇಲ್ಲಿ ಸಿಬ್ಬಂದಿ ಕೊರತೆ ಇದೆ ಇನ್ನೂ ಇದನ ಸಹಿಸಲು ಸಾಧ್ಯವಿಲ್ಲ ಉಗ್ರ ಹೋರಾಟ ಮಾಡಲು ತಾವು ಅನುವು ಮಾಡಿ ಕೊಡಬಾರದು ಎಂದರು.

ಜುಲೈ ೦೧ ರ ವರೆಗೆ ತಮಗೆ ಗಡುವು ನೀಡುತ್ತೇವೆ, ತಾವು ತಕ್ಷಣ ಸಿಬ್ಬಂದಿ ನೇಮಕ ಮಾಡಿ ಸ್ಪಂದನೆ ಮಾಡಬೇಕು.ಇಲ್ಲವಾದರೆ ಗ್ರಾಮ ಹಿತರಕ್ಷಣಾ ಸಮಿತಿ ,ರಾಜ್ಯ ರೈತ ಸಂಘ, ಮತ್ತು ಸಾರ್ವಜನಿಕರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ,ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ದೇವರಾಜ ಕಮತಗಿ OBC ಘಟಕದ ತಾಲೂಕು ಅಧ್ಯಕ್ಷೆ ನಾಗೇಶ ಗಂಜಿಹಾಳ ಗ್ರಾಮ ಪಂಚಾಯತಿ ಸದಸ್ಯ ಗ್ಯಾನಪ್ಪ ಗೋನಾಳ, ದೇವರಾಜ ಮೇಟಿ ,ವೇಂಕಣ್ಣ ಪಾಟೀಲ,ಅಬ್ದುಲ್ ಸೀಖರ್ ದೊಡಮನಿ,ಸೇರಿ ಮನವಿ ಸಲ್ಲಿಸಿದರು.