
ಇಂದು ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಗಳಾದ ಶ್ರೀ ಅಮರನಾಥ ರೆಡ್ಡಿರವರ ನೇತೃತ್ವದ ತಂಡ ಸುಮಾರು ರೂ ೪.೫ ಕೋಟಿ ವೆಚ್ಚದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರರಿಗೆ ಕನಿಷ್ಠ ದರದಲ್ಲಿ ಕಲ್ಯಾಣ ಮಂಟಪ ಹಾಗೂ ಅತಿಥಿ ಗೃಹ ನಿರ್ಮಾಣ ಮಾಡಿದ್ದು, ದಿನಾಂಕ ೨೩, ರಂದು ಮಾನ್ಯ ಗೃಹ ಸಚಿವರು ಉದ್ಘಾಟಿಸಿ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳ ಕಾರ್ಯವನ್ನು ಅತ್ಯಂತ ಹೃದಯ ತುಂಬಿ ಶ್ಲಾಘಿಸಿದರು.

ಈ ರೀತಿಯಾಗಿ ಮಾದರಿಯ ಕಾರ್ಯ ನೆರವೇರಿಸಿದ ಅಧಿಕಾರಿಗಳನ್ನು ಬಾಗಲಕೋಟೆ ನಾಗರಿಕರಾಗಿ ಅಭಿನಂದಿಸಬೇಕಾದದ್ದು ನಮ್ಮ ಕರ್ತವ್ಯ.
ಇಂದು ಬಾಗಲಕೋಟೆ ನಾಗರಿಕರ ಪರವಾಗಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಗಳಾದ ಶ್ರೀ ಅಮರನಾಥ ರೆಡ್ಡಿ ಅವರನ್ನು, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ 1 ಶ್ರೀ ಪ್ರಸನ್ನ ದೇಸಾಯರನ್ನು ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ 2 ಶ್ರೀ ಮಹಾಂತೇಶ ಜಿದ್ದಿಯವರನ್ನು, ಉಪ ಪೋಲಿಸ್ ಅಧಿಕ್ಷಕರಾದ ಸುತಾರ, ಪ್ರಭುಗೌಡ ಪಾಟೀಲ್,ಸಿಪಿಐ ರಾಮಣ್ಣ ಬಿರಾದಾರವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಚಂದ್ರಶೇಖರ ರಾಠೋಡ್, ಕಾಂಗ್ರೆಸ್ ಪಕ್ಷದ ಮುಖಂಡರಾದ ನಾಗರಾಜ್ ಹದ್ಲಿ, ಕರವೇ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲು ಕಟ್ಟಿಮನಿ, ನ್ಯಾಯವಾದಿ ಸುನೀಲ್ ಕೀರಸೂರ , ಜಯತೀರ್ಥ ಕುಲ್ಕರ್ಣಿ, ಮೊಹಮದ್ ಕೈಮ್ ಉದ್ಯಮಿ ಬಸವರಾಜ್ ಬಿರಾದಾರ, ವೆಂಕಟೇಶ್ ಪಾಟೀಲ್ ಉಪಸ್ಥಿತರಿದ್ದರು.
