ಅಲಿಗಢ (ಉತ್ತರ ಪ್ರದೇಶ): ಚಿನ್ನಾಭರಣ ಅಂಗಡಿಗೆ ಬಂದ ಗುಂಪೊಂದು ಮಾಸ್ಕ್ ಧರಿಸಿ, ಅಲ್ಲಿಯೇ ಇದ್ದ ಸ್ಯಾನಿಟೈಸರ್ ಅನ್ನೂ ಚೆನ್ನಾಗಿ ಹಚ್ಚಿಕೊಂಡರು. ನಂತರ ಮಾಡಿದ್ದೇನು ಗೊತ್ತಾ?
ಸೀದಾ ಅಂಗಡಿಯೊಳಕ್ಕೆ ನುಗ್ಗಿ ಗನ್ ತೋರಿಸಿ 40 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 40 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದಾರೆ!
ಈ ಘಟನೆ ಘಟನೆ ಉತ್ತರ ಪ್ರದೇಶದ ಅಲಿಗಢನನಲ್ಲಿ ನಡೆದಿದೆ. ಅಲಿಗಢ ನಗರದ ಬನ್ನಾದೇವಿ ಇಲಾಖೆಯಲ್ಲಿ ಸುಂದರ್ ಜ್ಯುವೆಲೆಸ್ರ್ನಲ್ಲಿ ನಡೆದಿರುವ ಈ ಸಂಪೂರ್ಣ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಾಸ್ಕ್ ಧರಿಸಿ ಬಂದ ದರೋಡೆಕೋರರು ಮೊದಲಿಗೆ ಕೋವಿಡ್ ನಿಯಮಗಳನ್ನ ಪಾಲಿಸಿದ್ದಾರೆ. ಅಂಗಡಿಯವರಿಂದ ಸ್ಯಾನಿಟೈಸರ್ ಪಡೆದು ಹಾಕಿಕೊಂಡಿದ್ದಾರೆ. ಮಳಿಗೆ ಒಳಗೆ ಬರುತ್ತಿದ್ದಂತೆ ಬ್ಯಾಗ್ ನಲ್ಲಿದ್ದ ಗನ್ ಹೊರಗೆ ತೆಗದು ಬೆದರಿಸಿ ದರೋಡೆ ಮಾಡಿದ್ದು, ಇದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಒಳಗೆ ಬರುತ್ತಿದ್ದಂತೆ ಮಾಲೀಕನ ಮಗನ ಹಣೆಗೆ ಗನ್ ಹಿಡಿದು ಚಿನ್ನಾಭರಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಇದನ್ನು ನೋಡುತ್ತಿದ್ದಂತೆಯೇ ಅಂಗಡಿಯಲ್ಲಿ ಕೆಲಸಕ್ಕಿದ್ದವರು ಮಹಡಿ ಮೇಲೆ ಹೋಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇವರು ಕಿರುಚಾಡುತ್ತಿದ್ದಂತೆಯೇ ದರೋಡೆಕೋರರು ಕೈಗೆ ಸಿಕ್ಕ ಚಿನ್ನಾಭರಣ ಮತ್ತು ನಗದು ತೆಗೆದುಕೊಂಡು ಪರಿರಾರಿಯಾಗಿದ್ದಾರೆ.
ದರೋಡೆಕೋರರು 700 ಗ್ರಾಂ ಚಿನ್ನಾಭರಣ ಮತ್ತು ಅಂದಾಜು 40 ಸಾವಿರ ರೂ. ನಗದು ದರೋಡೆ ಮಾಡಿದ್ದಾರೆ. ಮಳಿಗೆ ಮತ್ತು ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಗಳಲ್ಲಿ ದರೋಡೆಕೋರರ ಚಲನಾವಳಿ ಪತ್ತೆಯಾಗಿದೆ. ಶೀಘ್ರದಲ್ಲೇ ದರೋಡೆಕೋರರನ್ನ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.