ಕರಾಚಿ: ಉಗ್ರರನ್ನ ಪೋಷಣೆ ಮಾಡುತ್ತಿರುವ ಪಾಕಿಸ್ತಾನ ಕೊನೆಗೂ ತಲೆಮರೆಸಿಕೊಂಡಿರುವ ಉಗ್ರ ದಾವೂದ್ ಇಬ್ರಾಹಿಂ ವಿಚಾರದಲ್ಲಿ ತನ್ನ ಮುಖವಾಡನ್ನ ಕಳಚಿ ಸತ್ಯವನ್ನ ಹೇಳಿದೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇದ್ದಾನೆ ಅಂತಾ ಸಾರಿ ಸಾರಿ ಹೇಳಿತ್ತು. ಆದರೆ ಪಾಕಿಸ್ತಾನ ಇದುವರೆಗೂ ದಾವೂದ್ ಇಬ್ರಾಹಿಂ ತಮ್ಮ ದೇಶದಲ್ಲಿ ಇರೋದನ್ನ ಒಪ್ಪಿಕೊಂಡಿರಲಿಲ್ಲ. ಇದೀಗ ತಾನಾಗೇ ಉಗ್ರ ಪಾಕ್ನಲ್ಲಿ ಅಡಗಿ ಕೂತಿದ್ದಾನೆ ಅನ್ನೋದನ್ನ ತಿಳಿಸಿದೆ.
ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಘಟನೆಗಳ ಎಚ್ಚರಿಕೆ ನಡುವೆಯೂ ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡಿ, ಹಣಕಾಸು ಸಹಾಯವನ್ನೂ ಮಾಡುತ್ತಿರೋದು ಸಾಬೀತಾಗುತ್ತಿತ್ತು. ಇದೇ ಕಾರಣಕ್ಕೆ ಹಣಕಾಸು ಕ್ರಿಯಾ ಕಾರ್ಯಪಡೆ (ಫೈನಾನ್ಷಿಯಲ್ ಆಯಕ್ಷನ್ ಟಾಸ್ಕ್ ಫೋರ್ಸ್-ಎಫ್‍ಎಟಿಎಫ್) ಪಾಕಿಸ್ತಾನವನ್ನ ಗ್ರೇ ಲಿಸ್ಟ್ಗೆ ಹಾಕಿತ್ತು.
ಅಲ್ಲದೇ ಪಾಕಿಸ್ತಾನ ಮತ್ತೆ ತನ್ನ ಚಾಳಿಯನ್ನ ಮುಂದುವರಿಸಿದ್ರೆ, ಬ್ಲ್ಯಾಕ್ ಲಿಸ್ಟ್ಗೆ ಹಾಕೋದಾಗಿ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೆ ಗಾಬರಿಗೊಂಡಿರುವ ಪಾಕಿಸ್ತಾನ 88 ಉಗ್ರರ ಲಿಸ್ಟ್ ಅನ್ನ ಬಿಡುಗಡೆ ಮಾಡಿದೆ. ಅದರಲ್ಲಿ ದಾವೂದ್ ಇಬ್ರಾಹಿಂ ಹೆಸರು ಕೂಡ ಇದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News