Breaking News
ಹುನಗುಂದ KSRTC ಡಿಪೂ ವ್ಯವಸ್ಥಾಪಕ ಶ್ರೀ ಅರವಿಂದ ಭಜಂತ್ರಿ ಅವರಿಗೆ ಅಮೀನಗಡ  ಗೃಹರಕ್ಷಕ ದಳ ಸಿಬ್ಬಂದಿ ಇಂದ ಸನ್ಮಾನ

ಹುನಗುಂದ KSRTC ಡಿಪೂ ವ್ಯವಸ್ಥಾಪಕ ಶ್ರೀ ಅರವಿಂದ ಭಜಂತ್ರಿ ಅವರಿಗೆ ಅಮೀನಗಡ ಗೃಹರಕ್ಷಕ ದಳ ಸಿಬ್ಬಂದಿ ಇಂದ ಸನ್ಮಾನ

ಹುನಗುಂದ: ಅಮೀನಗಡ ನಗರದ ಗೃಹ ರಕ್ಷಕ ದಳ ಘಟಕಾಧಿಕಾರಿ ಶ್ರೀ ಯಮನಪ್ಪ ಭೋಜಪ್ಪ ಭಜಂತ್ರಿ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಗಳಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುನಗುಂದ ಡಿಪೂ ಘಟಕದ ವ್ಯವಸ್ಥಾಪಕಾರದ ಶ್ರೀ ಅರವಿಂದ ಭಜಂತ್ರಿ ಅವರಿಗೆ ಗೌರವ ಸನ್ಮಾನ ಮಾಡಿ ಅಭಿನಂದಿಸಿದರು.


ಈ ತಿಂಗಳು ನೀರಂತರವಾಗಿ ಕಬ್ಬು ಬೆಳೆಗಾರ ಹೋರಾಟ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಕಡೆ ಬಂದುಬಸ್ತು ನೀಡುವ ಸಮಯದಲ್ಲಿ ನಮ್ಮ ಗೃಹ ರಕ್ಷಕದಳ ಸಿಬ್ಬಂದಿಗೆ ಸಕಾಲಕ್ಕೆ ನಮಗೆ ಪ್ರತ್ಯೆಕವಾಗಿ ೬೦ ಜನ ಸಿಬ್ಬಂದಿಗಳಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿದ ಘಟಕ ವ್ಯವಸ್ಥಾಪರಾದ ಅರವಿಂದ ಭಜಂತ್ರಿ ಅವರಿಗೆ ಅಮೀನಗಡ ಗೃಹರಕ್ಷಕ ದಳ ಸಿಬ್ಬಂದಿಗಳ ಪರವಾಗಿ ಶ್ರೀ ಯಮನಪ್ಪ ಭಜಂತ್ರಿ ಅವರು ಅಭಿನಂದನೆ ಸಲ್ಲಿಸಿ ಸನ್ಮಾನಿಸಿ

ಮಾತನಾಡಿದ ಅವರು
ತುರ್ತು ಸಂದರ್ಭದಲ್ಲಿ ನಾವು ಬೇಗನೆ ಡ್ಯೂವುಟಿಗೆ ಹಾಜರಾಗಲು ಬಸ್ ವಿಳಂಬದಿಂದ ಹಾಗೂ ಎರಡು ಮೂರು ದಿನ ವಾಸ್ತವ್ಯ ಇರುವುದರಿಂದ ಭಾರಿ ಲಗೆಜ್ ನಿಂದ ಸಾರ್ವಜನಿಕವಾಗಿ ಜನರ ಮಧ್ಯ ಬಸ್ ಸಂಚಾರ ನಮಗೆ ಬಹಳ ತೊಂದರೆ ಆಗುತ್ತಿತ್ತು ,ಅಲ್ಲದೆ ಒಂದೆ ಸಮಯಕ್ಕೆ ನಾವು ಅಲ್ಲಿ ಡ್ಯುವುಟಿಗೆ ಹಾಜರಾಗುತ್ತಿರಲಿಲ್ಲ ,ಬಸ್ ಸಂಚಾರ ವಿಳಂಬದಿಂದ ನಾವೆಲ್ಲ ಬೇರೆ ಬೇರೆ ಬಸ್ ಹತ್ತಿ

ಹೋಗಬೇಕಾಗುತ್ತಿತ್ತು. ಇದರಿಂದ ಎಲ್ಲರಿಗೂ ಕಿರಿ ಕಿರಿ ಇಂತಹ ಸಮಸ್ಯೆಯಿಂದ ನಮ್ಮ ಹುನಗುಂದ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರಾದ ಶ್ರೀ ಅರವಿಂದ ಭಜಂತ್ರಿ ಅವರು ನಮ್ಮ ವಾಸ್ತವಿಕ ಪರಿಸ್ಥಿತಿಗೆ ಸ್ಪಂದನೆ ಮಾಡಿ ನಮಗೆ ಪ್ರತ್ಯೇಕವಾಗಿ ಎಲ್ಲಾ ಗೃಹ ರಕ್ಷಕ ದಳ ಸಿಬ್ಬಂದಿಗಳಿಗೆ ಪ್ರತ್ಯೇಕ ಬಸ್ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.ಹೀಗಾಗಿ ಅರವಿಂದ ಭಜಂತ್ರಿ ಅವರಿಗೆ ಗೃಹ ರಕ್ಷಕ ದಳದ ಅಮೀನಗಡ ಘಟಕಾಧಿಕಾರಿ ಶ್ರೀ ಯಮನಪ್ಪ ಭಜಂತ್ರಿ ಅವರು ಇವರ ಈ ಸಹಕಾರ ಹಾಗೂ ಸಾಮಾಜಿಕ ಕಳಕಳಿ ಮೆಚ್ಚಿ ಅಮೀನಗಡ ಘಟಕದ ಪರವಾಗಿ ಅಭಿನಂದಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅರವಿಂದ ಭಜಂತ್ರಿ ಅವರು ಸರಕಾರ ಮಹಿಳೆಯರಿಗೆ ಉಚಿತ ಬಸ್ ಸಂಚಾರ ಮಾಡಿರುವುದರಿಂದ ಬಸ್ ಸಂಚಾರದಲ್ಲಿ ಒಮ್ಮೊಮ್ಮೆ ಗದ್ದಲ ಹಾಗೂ ಒಟ್ಟಿಗೆ ತಾವು 50-60, ನೂರಾರು ಜನ ಸಿಬ್ಬಂದಿಗಳು ಒಟ್ಟಿಗೆ ಬಸ್ ಹತ್ತುವುದರಿಂದ ಇತರೆ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಮತ್ತು ತಮಗೂ ಸಿಟ್ ಸಿಗುವುದಿಲ್ಲ, ಹೀಗಾಗಿ ನಿಮ್ಮ ಕರ್ತವ್ಯದ ಬಗ್ಗೆ ನಮಗೂ ಹೆಮ್ಮೆ ಇದೆ. ನಮ್ಮ ತಂದೆಯವರೂ ಕೂಡ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಿದ್ದಾರೆ. ಹೀಗಾಗಿ ನಾವು ನಿಮಗೆ ಸಹಕಾರ ಕೊಟ್ಟಿದ್ದನ್ನು ಸಮರ್ಪಕವಾಗಿ ಬಳಸಿಕೊಂಡು ನಮಗೂ ಅಗೌರವ ಬರದ ಹಾಗೆ ನಡೆದುಕೊಂಡಿದ್ದರಿ ನಮ್ಮ ಸಾರಿಗೆ ಇಲಾಖೆಯೊಂದಿಗೆ ನಿಮ್ಮ – ನಮ್ಮ ಬಾಂಧವ್ಯ ಹೀಗೆ ಇರ್ಲಿ, ಇಲಾಖೆ ಪರವಾಗಿ ನನ್ನನ್ನು ಅಭಿನಂದಿಸಿದ ನಿಮಗೂ ಕೂಡ ಧನ್ಯವಾದಗಳು ಎಂದರು ಈ ಸಂದರ್ಭದಲ್ಲಿ ಇ,ಎಸ್,ಎಲ್, ಶ್ರೀ ಐ,ಎಸ್ ಬಸರಕೋಡ, ಇಎಸ್,ಎಲ್,ಶ್ರೀ ಬಿ,ಎಸ್ ಬಸರಕೋಡ, ಎಸ್,ಎಲ್,ಶ್ರೀ ರಾಘವೇಂದ್ರ ಹಡಪದ,

ಶ್ರೀ ಜಿ,ಸಿ,ಮೂಲಿಮನಿ,ಶ್ರೀವ್ಹಿ,ಎಚ್,ಭಜಂತ್ರಿ, ಶ್ರೀ ಎಮ್,ಎಚ್ ತಳಗಿನಮನಿ, ಶ್ರೀ ಎಚ್ ಎನ್ ಹುನಗುಂದ, ಶ್ರೀ ಎನ್ ಆರ್ ಭಜಂತ್ರಿ, ಶ್ರೀ ಎಸ್,ಎಸ್,ಡವಳಗಿ, ಶ್ರೀಮತಿ ನಿರ್ಮಲಾ ಗೋಡಿ, ಶ್ರೀಮತಿ ವಿಧ್ತಾ ಗೋಡಿ, ಶ್ರೀಮತಿ ತುಳಸಿ ಯರಗಟ್ಟಿ, ಶ್ರೀಮತಿ ಶ್ರೀದೇವಿ ತಳವಾರ, ಶ್ರೀಮತಿ ಶೋಭಾ ಕೊಂತ ಹಾಗೂ ಅಮೀನಗಡ ಸಿಬ್ಬಂದಿ ಮುಂತಾದವರು ಉಪಸ್ಥಿತಿ ಇದ್ದರು.

ವರದಿ : ಕಿರಣರಾಜ್ ಎಮ್ ಕಾಳಗಿ

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.