Breaking News

ನಾನು ರೆಬಲ್ ಅಲ್ಲಾ, ಲಾಯರ್: ಸಿ.ಎಂ ವಿರುದ್ಧ ಮತ್ತೆ ಗುಡುಗಿದ ಸಚಿವ ಈಶ್ವರಪ್ಪ

ನಾನು ರೆಬಲ್ అల్ల ಲಾಯರ್, నిಯಮಗಳ ಪಾಲನೆಗಾಗಿ ಇಂತಹ ಪತ್ರವನ್ನು ಬರೆದಿದ್ದೇನೆ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಾನುಸಾರ ಅನುದಾನ ಬಿಡುಗಡೆ ಮಾಡಿದ್ದರೇ ನನ್ನ ಆಕ್ಷೇಪವಿರುತ್ತಿರಲಿಲ್ಲ.

ಬಜೆಟ್ ನಲ್ಲಿ ಘೋಷಣೆಯಾಗಿರುವಂತ ಹಣವನ್ನು ಆರ್ಥಿಕ ಇಲಾಖೆ ಆಯಾ ಇಲಾಖೆಗೆ ಬಿಡುಗಡೆ ಮಾಡಲಿದೆ. ಆದ್ರೆ ಈ ನಿಯಮವನ್ನು ಮೀರಿ ಸಿಎಂ ಯಡಿಯೂರಪ್ಪ ಅವರು ಮಧ್ಯಪ್ರವೇಶಿಸಿ, ಕಾನೂನು ನಿಯಮ ಉಲ್ಲಂಘಿಸಿ ಅನುದಾನ ಬಿಡುಗಡೆಗೆ ಪತ್ರದ ಮೂಲಕ ತಿಳಿಸಿದ್ದಾರೆ. ಇದನ್ನು ನಾನು ಆಕ್ಷೇಪಿಸಿದ್ದೇನೆ ಎಂದರು.

ಕೆಲವು ಶಾಸಕರಿಗೆ ಕೊಟ್ಟಿರುವ ಅನುದಾನವನ್ನು ಸ್ವಾಗತಿಸುತ್ತೇನೆ ಆದರೆ ಅದನ್ನು ರೂಲ್ಸ್ ಪ್ರಕಾರ ಕಾನೂನುಬದ್ಧವಾಗಿ ನೀಡಲಿ. ಕೆಲವು ವಿಚಾರಗಳಲ್ಲಿ ಯಡಿಯೂರಪ್ಪಗೂ ನನಗೂ ದೂರ ದೂರಾನೇ ಸಂಘಟನೆ ಮತ್ತು ಪಕ್ಷದ ಹಿತದೃಷ್ಟಿಯಿಂದ ಹೊಂದಿಕೊಂಡು ಹೋಗುತ್ತಿದ್ದೇವೆ. ಅವರಿಗೂ ನನಗೂ ಸಂರ್ಘಷ್ರ ಆಗಿಲ್ಲ ಅಂತೇನಿಲ್ಲ ಆಗಿದೆ ಆದರೆ, ನಾನು ರೆಬೆಲ್ ಆಗಿಲ್ಲ, ನನ್ನ ಪಕ್ಷನಿಷ್ಠೆ ಎಂದಿಗೂ ಹೋಗಿಲ್ಲ. ನನ್ನ ಗಮನಕ್ಕೆ ಬಾರದೇ ಸಿಎಂ ನೇರವಾಗಿ ಹಣ ಹಂಚಿಕೆ ಮಾಡಿದ್ದಾರೆ.

ಕಾನೂನಿನ ಪ್ರಕಾರ ಇದು ಸರಿಯಲ್ಲ. ಮುಖ್ಯಮಂತ್ರಿಗೆ ಮರಮಾಧಿಕಾರ ಇದೆ ಎಂದು ಜಡ್ಜ್ ಹೇಳಿದ್ದಾರೆ ಆದರೆ ಇಲಾಖೆಗೆ ಹಣ ಹಂಚುವುದು ಸಚಿವರ ಕೆಲಸ. ಹೀಗಾಗಿ ಯಡಿಯೂರಪ್ಪ ಮಾಡಿರುವುದು ಸರಿಯಲ್ಲ. ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ. ಚುನಾವಣೆ ಬಳಿಕ ಈ ಸಂಬಂಧ ಚರ್ಚಿಸಿ ಬಗೆಹರಿಸಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.