Breaking News

ಇಡೀ ರಾಜ್ಯಕ್ಕೇ ಪ್ರವಾಹ, ಮಳೆ ಇದ್ದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಬರಗಾಲ!

ಇಡೀ ರಾಜ್ಯದಲ್ಲಿ ಯಥೇಚ್ಛ ಮಳೆಯಿಂದಾಗಿ ಅತಿವೃಷ್ಟಿಯಾಗುತ್ತಿದೆ. ಇದರಿಂದ ಕೃಷಿ ಚಟುವಟಕೆಗಳಿಗೆ ಕಷ್ಟವಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಮಳೆ ಇಲ್ಲದೆ ಕೃಷಿ ಕುಂಠಿತವಾಗಿದೆ.

ಚಿಕ್ಕಬಳ್ಳಾಪುರ: ರಾಜ್ಯದ ಹಲವು ಭಾಗದಲ್ಲಿ ಯಥೇಚ್ಛ ಮಳೆಯಿಂದಾಗಿ ಅತಿವೃಷ್ಟಿಯಾಗುತ್ತಿದೆ. ಅತಿಯಾದ ಮಳೆ ಹಾಗೂ ಪ್ರವಾಹದಿಂದ ಜನಜೀವನ ತತ್ತರಿಸಿರುವ ಜತೆಗೆ ಕೃಷಿಗೂ ನಷ್ಟ ಉಂಟಾಗುತ್ತಿದೆ. ಆದರೆ ಇತ್ತ ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಅನಾವೃಷ್ಟಿ ಉಂಟಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಮಳೆ ಕಣ್ಮರೆಯಾಗಿದೆ. ಒಂದು ವಾರದಿಂದ ದೊಡ್ಡ ಮಟ್ಟದಲ್ಲಿಮೋಡಗಳು ಬರುತ್ತಿಯೆಯಾದರೂ, ಅಲ್ಲಲ್ಲಿ ತುಂತುರು ಹನಿ ಬಿಟ್ಟರೆ ಮಳೆ ಧರೆಯನ್ನು ಸೋಕುತ್ತಿಲ್ಲ. ಇದರಿಂದ ಇಲ್ಲಿನ ಖುಷ್ಕಿ ಜಮೀನಿನಲ್ಲಿಬೆಳೆದ ಬೆಳೆಗಳು ಬಾಡುವ ಹಂತಕ್ಕೆ ಬಂದಿವೆ. ಅದರಲ್ಲೂಈ ಭಾಗದ ಪ್ರಮುಖ ಬೆಳೆಯಾದ ಮುಸುಕಿನ ಜೋಳ, ನೆಲಗಡಲೆ ಬೆಳೆಗಳು ಒಂದೆರಡು ಅಡಿಗಳಷ್ಟು ಬೆಳೆದು ನಿಂತಿವೆ. ಈ ಸಮಯದಲ್ಲಿ ಮಳೆ ಅತ್ಯವಶ್ಯವಾಗಿದೆ. ಆದರೆ, ಅಂತರ್ಜಲದ ಮಟ್ಟದ 1500ರಿಂದ 1800 ಅಡಿ ಆಳಕ್ಕೆ ಕುಸಿದಿರುವ ಜಿಲ್ಲೆಯಲ್ಲಿಇದೀಗ ತೇವಾಂಶದ ಕೊರತೆಯಿಂದ ಬೆಳೆ ಒಣಗುವ ಹಂತಕ್ಕೆ ಬಂದು ತಲುಪಿದ್ದು, ರೈತರು ಮಳೆಗಾಗಿ ಎದುರು ನೋಡುವಂತೆ ಮಾಡಿದೆ.

ಉತ್ತಮ ಬಿತ್ತನೆ
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 48,000 ಹೆಕ್ಟೇರ್‌ ಪ್ರದೇಶದಲ್ಲಿಮುಸುಕಿನ ಜೋಳ ಬೆಳೆ ಬಿತ್ತನೆ ಗುರಿ ಹೊಂದಲಾಗಿದೆ. ಆರಂಭದಲ್ಲಿ ಉತ್ತಮ ಮಳೆಯಾದ್ದರಿಂದ ಈಗಾಗಲೇ 40,852 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿ ಶೇ.85.11 ಸಾಧನೆ ಮಾಡಲಾಗಿದೆ. ಒಟ್ಟು 26,000 ಹೆಕ್ಟೇರ್‌ ಪ್ರದೇಶದಲ್ಲಿನೆಲಗಡಲೆ ಬೆಳೆಯುವ ಗುರಿ ಹೊಂದಿದ್ದರೆ ಈ ಪೈಕಿ 24,858 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಉಳಿದಂತೆ 42,500 ಹೆಕ್ಟೇರ್‌ ಪ್ರದೇಶದಲ್ಲಿರಾಗಿ ಬೆಳೆಯುವ ಗುರಿ ಹೊಂದಲಾಗಿದ್ದು,ಈಗಾಗಲೇ 35,121 ಹೆಕ್ಟೇರ್‌ ಬಿತ್ತನೆಯಾಗಿದೆ.

ಕೃಷಿ ಭೂಮಿ ನೋಂದಣಿ ಸರಕಾರಿ ಆದೇಶ ಸ್ಥಗಿತಕ್ಕೆ ಆಗ್ರಹ

ಮಳೆಯೇ ಆಧಾರ
ಜಿಲ್ಲೆಯ ಪ್ರಮುಖ 3 ಬೆಳೆಗಳ ಪೈಕಿ ಹೆಚ್ಚು ಬಿತ್ತನೆಯಾಗಿರುವ ಮುಸುಕಿನ ಜೋಳ ಬೆಳೆಯು ನೀರಾವರಿಗಿಂತ ಖುಷ್ಕಿ ಜಮೀನು ವ್ಯಾಪ್ತಿಯೇ ಹೆಚ್ಚಾಗಿದೆ. ಪ್ರಸಕ್ತ ಮುಂಗಾರಿನಲ್ಲಿ(ಈವರೆಗೆ) 34,842 ಹೆಕ್ಟೇರ್‌ ಖುಷ್ಕಿ ಪ್ರದೇಶದಲ್ಲಿಬೆಳೆ ಬೆಳೆಯಲಾಗಿದೆ. ಅದೇ ರೀತಿ 24,841 ಹೆಕ್ಟೇರ್‌(ಖುಷ್ಕಿ) ಪ್ರದೇಶದಲ್ಲಿನೆಲಗಡಲೆ ಬೆಳೆ ಬೆಳೆಯಲಾಗಿದೆ. ಯಾವುದೇ ನೀರಿನ ಮೂಲ ಇಲ್ಲದ ಈ ಒಟ್ಟಾರೆ ಪ್ರದೇಶ ಮಳೆಯಾಶ್ರಿತವೇ ಆಗಿದೆ. ಆದರೆ, ಕಳೆದ ಆ.1ರಂದು ಬಿದ್ದು, ಕಣ್ಮರೆಯಾದ ಜೋರು ಮಳೆ, ಮತ್ತೆ ಈವರೆಗೆ ಆಗಿಲ್ಲ. ಹೀಗಾಗಿ ರೈತ ಬೆಳೆ ನಷ್ಟದ ಆತಂಕ ಎದುರಿಸುತ್ತಿದ್ದಾನೆ.

ಬಿಜೆಪಿ ಸರ್ಕಾರ ರೈತರನ್ನು ಭೂ ರಹಿತರನ್ನಾಗಿಸುವ ಹುನ್ನಾರ ನಡೆಸಿದೆ: ಯು.ಆರ್‌. ಸಭಾಪತಿ

ಕೆಲವು ಬಾಗಗಳಲ್ಲಿ ತೇವಾಂಶ ಕೊರತೆಯಿಂದ ಬೆಳೆಗಳು ಬಾಡುತ್ತಿರುವುದು ಕಂಡು ಬಂದಿದೆ. ಒಂದು ವಾರದೊಳಗೆ ಜೋರು ಮಳೆಯಾದರೆ ಮಾತ್ರ ಆ ಬೆಳೆಗಳು ಉಳಿಯಲು ಸಾಧ್ಯ.
-ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ದಾಖಲೆಗೆ ಹೆಣಗಾಡುತ್ತಿರುವ ವಿಜಯಪುರ ರೈತರು!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಈ ವರ್ಷ ಕೃಷಿ ಚಟುವಟಿಕೆ ಉತ್ತಮವಾಗಿವೆ. ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿಹಾಗೂ ಚಿಂತಾಮಣಿಯಲ್ಲಿಮುಸುಕಿನ ಜೋಳ, ನೆಲಗಡಲೆ ಹೆಚ್ಚಾಗಿ ಬೆಳೆಯಲಾಗಿದೆ. ಕೆಲ ದಿನಗಳ ಮಟ್ಟಿಗೆ ಮಳೆಯ ಅಭಾವ ತಡೆದುಕೊಳ್ಳಬಹುದು.
-ಎಲ್‌. ರೂಪಾ, ಜಂಟಿ ಕೃಷಿ ನಿರ್ದೇಶಕರು

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.