ಬಾಗಲಕೋಟೆ: ಬೆಳಗಾವಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದರಿಂದ ಮುಧೋಳ ತಾಲ್ಲೂಕಿನ ಮಿರ್ಜಿ- ಮಹಲಿಂಗಪುರ ನಡುವಿನ ಘಟಪ್ರಭಾ ನದಿಯ ಹಳೆ ರಸ್ತೆಯ ಸೇತುವೆ ಜಲಾವೃತವಾಗಿದೆ. ಮಿರ್ಜಿ, ಚನಾಳ, ಮಲ್ಲಾಪುರ ಒಂಟಗೋಡಿ ಗ್ರಾಮಗಳಿಂದ ಮಹಾಲಿಂಗಪುರ ಪಟ್ಟಣಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಸೇತುವೆ ಮೇಲೆ ಐದು ಅಡಿಯಷ್ಟು ನೀರು ಹರಿಯುತ್ತಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News