ಈಗಂತೂ ಎಲ್ಲದಕ್ಕೂ ಪಾಸ್ವರ್ಡ್ಗಳು, ಆನ್ಲೈನ್ ಶಾಪಿಂಗ್ನಿಂದ ಹಿಡಿದೂ ಎಟಿಎಂಗೂ ಪಾಸ್ವರ್ಡ್ ಬೇಕು. ನೀವೇ ಯೋಚಿಸಿ, ಫೇಸ್ಬುಕ್,ಇನ್ಸ್ಟಾಗ್ರಾಮ್, ಜಿ ಮೇಲ್, ಫೋನ್, ವಾಟ್ಸಾಪ್ ಹೀಗೆ ಪ್ರತಿಯೊಂದಕ್ಕೂ ಪಾಸ್ವರ್ಡ್ ಇದೆ. ಇವೆಲ್ಲವನ್ನೂ ನೆನಪಿಡುಕೊಳ್ಳುವುದು ಕಷ್ಟ. ಇದೆಲ್ಲ ಒಂದು ಬಾರಿ ಲಾಗಿನ್ ಆದರೆ ಮತ್ತೇನು ಚಿಂತೆ ಇಲ್ಲ. ಆದರೆ ಜಿಮೇಲ್ ಅಥವಾ ಫೋನ್ ಪೆ, ಗೂಗಲ್ ಪೆ ಹ್ಯಾಕ್ ಆದರೆ? ನಿಮ್ಮ ಹಣ ಇನ್ಫಾರ್ಮೇಶನ್ ಎಲ್ಲವೂ ಹೋಗುತ್ತದೆ. ಹೀಗಿರುವಾಗ ಪಾಸ್ವರ್ಡ್ ಯಾವ ರೀತಿ ಇರಬೇಕು? ಯಾವ ರೀತಿ ಹಾಕಬಾರದು ನೋಡಿ..
ಅಪ್ಪರ್ಕೇಸ್,ಲೋವರ್ ಕೇಸ್: ಅಪ್ಪರ್ ಕೇಸ್ ಲೋವರ್ ಕೇಸ್ ಎರಡೂ ನಿಮ್ಮ ಪಾಸ್ವರ್ಡ್ನಲ್ಲಿ ಇರಲಿ. ಕೇವಲ i love my mother ಇದೂ ಬೇಡ, I LOVE MY MOTHER ಇದೂ ಕೂಡ ಬೇಡ.. i Love My moTher ಈ ರೀತಿ ಇರಲಿ
ಕಾಮನ್ ಪಾಸ್ವರ್ಡ್ ಬೇಡ:111111 ಅಥವಾ abcde , ನಿಮ್ಮ ಬರ್ಥ್ ಡೇಟ್, ನಿಮ್ಮ ಪ್ರೀತಿ ಪಾತ್ರರ ಬರ್ಥ್ ಡೇಟ್ ಬಳಸಬೇಡಿ. ಇದನ್ನು ಗೆಸ್ ಮಾಡುವುದು ತುಂಬಾ ಸುಲಭ.
ಎಂಟಂಕಿಗಿಂತ ಹೆಚ್ಚು ಸಂಖ್ಯೆ ಇರಲಿ: ಎಲ್ಲ ಕಡೆಯೂ ಎಂಟಂಕಿಯ ಪಾಸ್ವರ್ಡ್ ಬಳಸಿ ಎಂದು ಕೇಳುತ್ತಾರೆ. ಇನ್ನೂ ಹೆಚ್ಚು ಕ್ಯಾರೆಕ್ಟರ್ಗಳ ಪಾಸ್ವರ್ಡ್ ಬಳಸಿ. ಉದ್ದ ಪಾಸ್ವರ್ಡ್ ಕ್ರಾಕ್ ಮಾಡಲು ಕಷ್ಟ.
ಡಿಕ್ಷನರಿ ಪದಬಳಕೆ ಬೇಡ: ಡಿಕ್ಷನರಿ ಪದಗಳನ್ನು ಈಸಿಯಾಗಿ ಹ್ಯಾಕ್ ಮಾಡುತ್ತಾರೆ. ಆದ್ದರಿಂದ ನಿಮ್ಮದೇ ಭಾಷೆಯ ಪದಗಳನ್ನು ಬಳಸಿ, ಉದಾಹರನೆಗೆ I love chocolateನ್ನು ಈ ರೀತಿ ಬರೆಯಿರಿ @1L0v3CH0c0L4t3!
ಫೋನ್ ನಂಬರ್ ಬೇಡ: ನಿಮ್ಮ ಫ್ಯಾಮಿಲಿ ಮೆಂಬರ್ಗಳ ಹೆಸರು, ನಿಮ್ಮ ಮನೆ ಹೆಸರು ಅಥವಾ ಫೋನ್ ನಂಬರ್ ಪಾಸ್ವರ್ಡ್ ಆಗಿ ಬಳಸಬೇಡಿ. ಇದರಿಂದ ನಿಮ್ಮ ಇನ್ಪಾರ್ಮೇಶನ್ ಲೀಕ್ ಆಗುವುದರ ಜೊತೆಗೆ ಹ್ಯಾಕ್ ಮಾಡಲು ಸುಲಭ.
ಒಂದೇ ಪಾಸ್ವರ್ಡ್ ಬೇಡ: ನೆನಪಿಟ್ಟುಕೊಳ್ಳಲು ಸುಲಭವಾಗಲಿ ಎಂದು ಒಂದೇ ಪಾಸ್ವರ್ಡ್ ಬಳಸಬೇಡಿ. ಒಂದು ವೆಬ್ಸೈಟ್ ಹ್ಯಾಕ್ ಆದರೆ ಇನ್ನೆಲ್ಲ ವೆಬ್ಸೈಟ್ ತಾನಾಗೇ ಸಿಗುತ್ತದೆ. ಹೀಗೆ ಮಾಡಿದರೆ ನೀವೇ ಹ್ಯಾಕರ್ಸ್ ಕೆಲಸ ಈಸಿ ಮಾಡಿಕೊಟ್ಟ ಹಾಗಾಗುತ್ತದೆ.
ಸಿಂಬಲ್ ಮಿಕ್ಸ್ ಮಾಡಿ: ಹಳೇ ಮೆಸೇಜ್ ಪ್ಯಾಟರ್ನ್ ನೆನಪಿದೆಯಾ? ಪದಗಳ ಜೊತೆ ನಂಬರ್ ಹಾಗೂ ಸಿಂಬಲ್ಗಳನ್ನು ಬಳಸಿ ಮೆಸೇಜ್ ಮಾಡುತ್ತಿದ್ದೆವು.ಪಾಸ್ವರ್ಡ್ಗಳನ್ನು ಹೀಗೆ ಹಾಕಿ ಉದಾಹರಣೆಗೆ god is greatನ್ನು ಈ ರೀತಿ ಬರೆಯಿರಿ God iS grEa8 ಯಾರಿಗೂ ಕೊಡಬೇಡಿ: ಪಾಸ್ವರ್ಡ್ಗಳನ್ನು ಯಾರಿಗೂ ಕೊಡಬೇಡಿ. ಯಾರಿಗೂ ಕಾಣುವ ರೀತಿಯಲ್ಲಿಯೂ ಇಟ್ಟುಕೊಳ್ಳಬೇಡಿ. ಗೊತ್ತಿರುವವರೇ ನಿಮ್ಮ ಖಾತೆ ಹ್ಯಾಕ್ ಮಾಡಬಹುದು. ಪಾಸ್ವರ್ಡ್ ಬದಲಾಯಿಸಿ: ವರ್ಷಾನುಗಟ್ಟಲೆ ಒಂದೇ ಪಾಸ್ವರ್ಡ್ನಲ್ಲಿ ಇರಬೇಡಿ. ಆಗಾಗ ಪಾಸ್ವರ್ಡ್ ಬದಲಾಯಿಸಿ.
ಲಾಗ್ಔಟ್ ಆಗಿ: ನಾನೇನು ಸೆಲೆಬ್ರಿಟಿ ಅಲ್ಲ, ನನ್ನ ಅಕೌಂಟ್ ಹ್ಯಾಕ್ ಆಗುವುದಿಲ್ಲ ಎಂದುಕೊಳ್ಳುವವರು ಗಮನಿಸಿ, ನಿಮ್ಮ ಬಳಿ ಹಣ ಇದ್ದರೆ ಸಾಕು, ಯಾರಾದರೂ ಹ್ಯಾಕ್ ಮಾಡುವ ಚಾನ್ಸ್ ಇದೆ. ಯಾವುದೇ ಕಂಪ್ಯೂಟರ್, ಮೊಬೈಲ್ನಿಂದ ಆಪ್ ಬಳಸಿದಮೇಲೆ ಲಾಗ್ಔಟ್ ಆಗುವುದನ್ನು ಮರೆಯಬೇಡಿ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News