
ನವದೆಹಲಿ: ಕೊರೋನಾದಿಂದ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಆಡಳಿತಾರೂಢ ಕೇಂದ್ರ ಸರ್ಕಾರ ಮತ್ತೆ ಗಾಯದ ಮೇಲೆ ಬರೆ ಎಳೆದಿದ್ದು, ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ಸಹಿತ ಎಲ್‌ಪಿಜಿಯ ಬೆಲೆ ಒಂದು ಸಿಲಿಂಡರ್‌ಗೆ ೨೫.೫೦ ರೂ. ಹೆಚ್ಚಳ ಮಾಡಲಾಗಿದೆ.

ಪ್ರಸ್ತುತ ೧೪.೨ ಕೆಜಿ ತೂಕದ ಗೃಹಬಳಕೆ ಸಿಲಿಂಡರ್‌ಗಳಿಗೆ ದೆಹಲಿಯಲ್ಲಿ ೮೩೪.೫೦ ರೂ. ಇದೆ.
ಇನ್ನು ೧೯ ಕೆಜಿ ಸಿಲಿಂಡರ್‌ನ ಬೆಲೆಯನ್ನು ಸಹ ೭೬ ರೂ. ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ೧,೫೫೦ ರೂ. ನಿಗದಿಯಾಗಿದೆ ಎಂದು ವರದಿಯಾಗಿದೆ.
ಈಗಾಗಲೇ ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಿಂದ ಹೈರಾನಾಗಿರುವ ವಾಹನ ಸವಾರರು ಕರೋನ ಲಾಕ್ ಡೌನ್ ನಿಂದ ದೇಶದಲ್ಲಿ ಈಗಾಗಲೇ ನಿರುಧ್ಯೋಗ ಸಮಸ್ಯೆ ಹೆಚ್ಚುತ್ತಿದ್ದು ಕೇಂದ್ರ ಸರಕಾರದ ಈ ನಡೆಗೆ ಜನತೆ ಹೈರಾನಾಗಿದ್ದಾರೆ.