Breaking News

ಗೋವಾ- ಕರ್ನಾಟಕ ನಡುವಿನ ಘಾಟಿಯಲ್ಲಿ ಭೂ ಕುಸಿತ: ರೈಲು ಸಂಚಾರ ವ್ಯತ್ಯಯ

ಪಣಜಿ: ಭಾರಿ ಮಳೆಯಿಂದಾಗಿ ಗೋವಾ- ಕರ್ನಾಟಕ ನಡುವಿನ ಘಾಟಿಯಲ್ಲಿ ಎರಡು ಪ್ರತ್ಯೇಕ ಭೂ ಕುಸಿತ ಸಂಭವಿಸಿದ್ದು, ರೈಲು ಮತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಭೂಕುಸಿತದಿಂದಾಗಿ, ಬುಧವಾರ ಮುಂಜಾನೆ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣವನ್ನು ತಲುಪಬೇಕಿದ್ದ ಹಜ್ರತ್‌ ನಿಜಾಮುದ್ದೀನ್‌ ರೈಲು ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣಕ್ಕೆ ತೆರಳಿದೆ. ಅಲ್ಲಿಂದ ನಿಗದಿತ ಪ್ರದೇಶಗಳಿಗೆ ತೆರಳಲು ಪ್ರಯಾಣಿಕರಿಗೆ ವಿಶೇಷ ಬಸ್‌ ಸೌಕರ್ಯ ಕಲ್ಪಿಸಲಾಗಿತ್ತು.

ಚೋರ್ಲಾ ಘಾಟ್ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತವು ಗೋವಾ ಮತ್ತು ಕರ್ನಾಟಕ ನಡುವಿನ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿತು.

‘ಚೋರ್ಲಾ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಮಣ್ಣು ತೆರವು ಕಾರ್ಯ ಮುಗಿಯುವವರೆಗೂ, ಈ ರಸ್ತೆಯ ಮೂಲಕ ಪ್ರಯಾಣಿಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ’ ಎಂದು ಗೋವಾದ ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

About vijay_shankar

Check Also

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ  ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ  ಪ್ರದಾನ

ಕರ್ನಾಟಕ ಪತ್ರಕರ್ತಕ ಸಂಘ ದಿಂದ ರಾಷ್ಟೀಯ ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ

ಅಮೀನಗಡ : ನಗರದ ಪ್ರವಾಸಿ ಮಂದಿರಲ್ಲಿ ಇಂದು ಕರ್ನಾಟಕ ಪತ್ರಕರ್ತರ ಸಂಘವು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಿತು. ಕಾರ್ಯಕ್ರಮ ಉದ್ಘಾಟನೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.