ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಇಂದು ನೂತನ ,PSI ಶ್ರೀ ಎಮ್,ಜಿ ಕುಲಕರ್ಣಿ ಅವರು ಇಂದು ಚಾಜ್೯ ತೆಗೆದುಕೊಂಡರು, ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕುಮಾರಕೊಪ್ಪ ಗ್ರಾಮದವರಾದ ಕುಲಕರ್ಣಿ ಅವರು ಪ್ರಸಕ್ತ ೨೦೧೦ PSI ಹುದ್ದೆ ಅಲಂಕರಿಸಿದವರು.

ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣಿಯಲ್ಲಿ ಸೇವೆ ಮಾಡಿ ಇಡಿ ಹುಬ್ಬಳ್ಳಿ ನಗರದ ಸಿಗಂ ಎಂದೇ ಖ್ಯಾತರಾದ ಕುಲಕರ್ಣಿ ಅವರ ಕಾರ್ಯ ವೈಖರಿ ಅಲ್ಲಿಂದ ಜನಮಾನಸದಲ್ಲಿ ಉಳಿದು ಮುಂದೆ ಅಥನಿ,ಕಿತ್ತೂರು, ಗದಗ ನಲ್ಲಿ ಉತ್ತಮ ಕಾರ್ಯನಿರ್ವಹಿ ಸಿ, ಸೈ ಎನ್ನಿಸಿಕೊಂಡ ಕುಲಕರ್ಣಿ ಅವರು ಕಳೆದ ಒಂದು ತಿಂಗಳ ಹಿಂದೆಯೇ ಬರುತ್ತಾರೆ ಎಂದ ಸುದ್ದಿ ಇತ್ತು ಅವರ ಬಗ್ಗೆ ಅನೇಕರು ಮಾಹಿತಿ ತಿಳಿದುಕೊಂಡು ಅಂತಹ ಖಡಕ್ ಅಧಿಕಾರಿಗಳ ಅವಶ್ಯಕತೆ ಈ ನಗರಕ್ಕೆ ಬಹಳ ಇದೆ ಅವರೇ ಬರಲಿ ಎಂದು ಅನೇಕರ ಅಭಿಪ್ರಾಯ ಕೂಡ ಇತ್ತು. ಅದರಂತೆ ಇಂದು ಅನೇಕರ ಮಾತು ಸತ್ಯವಾಗಿದೆ ಕುಲಕರ್ಣಿ ಅವರ ಮುಂದೆ ಅಮೀನಗಡ ನಗರದಲ್ಲಿ ಸಾಲು ಸಲು ಸಮಸ್ಯೆಗಳು ತಾಂಡವಾ ಆಡುತ್ತಿವೆ ಅವನ್ನೆಲ್ಲ ಎಷ್ಟರಮಟ್ಟಿಗೆ ಮಟ್ಟ ಹಾಕುತ್ತಾರೆ ಎಂಬ ಅನೇಕರ ವಾದ ,ನೂತನ psi ಕುಲಕರ್ಣಿ ಅವರ ಮುಂದೆ ಇರುವ ಜ್ವಲಂತ ಸವಾಲುಗಳು ನಗರ ಸೇರಿಯ ಪ್ರತಿ ಹಳ್ಳಿ ಹಳ್ಳಿಯಲ್ಲಿ ಒಂದು ಸಣ್ಣ ಪಾನ್ ಶಾಫ್,ಕಿರಾಣಿ,ಅಂಗಡಿಗಳಲಿ ಮಧ್ಯ ಸಿಗುತ್ತಿದೆ, ಅಭಕಾರಿ ಇಲಾಖೆ ಸಂಪೂರ್ಣ ವಿಫಲ.

ನಗರದಲ್ಲಿ ತುಂಬಾ ಟ್ರಾಫಿಕ್ ಸಮಸ್ಯೆ :
ಆಟೊ ಚಾಲಕರಿಗೆ ಸೂಕ್ತ ತಂಗುದಾನ ಇಲ್ಲದೆ ಕ್ರಾಸ್ ನಲ್ಲಿ ಪ್ರತಿ ಶನಿವಾರ, ರವಿವಾರ ಟ್ರಾಫಿಕ್ ಜಾಮ್, ಕಂಠ ಪೊರ್ತಿ ಕುಡಿದು ಆಟೊ ರಿಕ್ಷಾ ಚಾಲನೆ, ಪ್ರತಿ ಹಳ್ಳಿ, ಓನಿಯಲ್ಲಿ ಮಟಕಾ ಹಾವಳಿ ,ವಯಸ್ಸಿನ ಮಿತಿ ಮೀರಿ ಯುವಕರು ಮಟಕಾ ಆಡುತ್ತಿದ್ದಾರೆ , ಅಕ್ರಮ ಕಡಿ,ಮರಳು,ಸಾಗಾಣಿಕೆ, ಕುರಿ,ಆಡು,ಧನದ ಸಂತೆಗೆ ಬರುವ ವಿವಿಧ ರಾಜ್ಯದ ವ್ಯಾಪಾರಿಗಳಿಂದ ಗಾಂಜಾ ಸಾಗಾಣಿಕೆ,ಈ ಬಗ್ಗೆ ಮಾನ್ಯ ಕುಲಕರ್ಣಿ ಅವರು ಆಧ್ಯ ಗಮನ ಹರಿಸಿ ಯಾವುದೇ ರಾಜಕೀಯ ಮುಂಖಡರ ಒತ್ತಾಯಕ್ಕೆ ಮನೆ ಹಾಕದೇ ತಪ್ಪಿಸ್ತರ ಮೇಲೆ ಸೂಕ್ತ ಕ್ರಮ ಕೈಗೊಂಡು ನಗರದ ಶಾಂತಿ ಮತ್ತು ಕಾನೂನು ಅವ್ಯವಸ್ಥೆ ಕಾಪಾಡುತ್ತಾರೆ ಎಂಬ ಅನೇಕರ ಆಶಯವಾಗಿದೆ ,ದೊಡ್ಡ ದೊಡ್ಡ ನಗರದಲ್ಲಿ ಇಂತಹ ಎಷ್ಟೋ ಸಮಸ್ಯೆಗಳನ್ನು ಮಟ್ಟ ಹಾಕಿದ ನಿಮಗೆ ಕೇವಲ ೪೨ ಹಳ್ಳಿಗಳನ್ನು ಕಾಪಾಡುವುದು ಕಷ್ಟವಲ್ಲ ,ಮಾನ್ಯ ಎಮ್ ಜಿ ಕುಲಕರ್ಣಿ ಅವರನ್ನು ಈ ಅಮೀನಗಡ ನಗರದ ಜನತೆಯ ಪರವಾಗಿ ಹಾಗೂ ಸೊಳೇಭಾವಿ ಗ್ರಾಮದ ಜನತೆಯ ಪರವಾಗಿ ತಮಗೆ ನಮ್ಮ ಹೆಮ್ಮೆಯ ಪೊಲೀಸ್ ಠಾಣೆಗೆ ಹೃದಯ ಪೊರ್ವಕ ಸ್ವಾಗತ,ಕೋರಿದ
ಪತ್ರಕರ್ತ ಹನಮಂತ ಹಿರೇಮನಿ,ಸಂಪಾದಕ ಡಿ,ಬಿ,ವಿಜಯಶಂಕರ್ ,ಡಾ: ಪ್ರಶಾಂತ್ ನಾಯಕ, ಮುಸ್ತಫಾ ಮಾಸಾಪತಿ ಉಪಸ್ಥಿತಿ ಇದ್ದು ಸ್ವಾಗತ ಕೋರಿದರು , ನೂತನ ಸಿಗಂ, ಕುಲಕರ್ಣಿ ಕಾರ್ಯ ದಕ್ಷತೆ ಈ ನಗರದಲ್ಲಿ ನೊಂದವರಿಗೆ ರಕ್ಷಾ ಕವಚವಾಗಲ್ಲಿ ಎಂದು ನಮ್ಮ ಪತ್ರಿಕೆ ಶುಭ ಹಾರೈಸುತ್ತದೆ.