
ಕುಷ್ಟಗಿ :
ತಾಲೂಕಿನ ಹುಚನೂರು ಗ್ರಾಮದ ಭಾರತೀಯ ಜನತಾ ಪಕ್ಷದ ಯುವ ನಾಯಕರಾದ ರಾಮನಗೌಡ ಉಫ್೯ ರಮೇಶ ತುರಮರಿ ಅವರು ಸಮಾಜ ಸೇವೆ ಜೊತೆಯಲ್ಲಿ ಪಕ್ಷದ ಬಲಾಢ್ಯ ಸಂಘಟನೆ ಯನ್ನು ,ಗ್ರಾಮದಲ್ಲಿ ಕಟ್ಟಿದ ಯುವ ನಾಯಕ, ಕಳೆದ ಗ್ರಾಮ ಪಂಚಾಯತಿ ೨೦೨೧ನೇ ಸಾಲಿನ ಚುನಾವಣೆಯಲ್ಲಿ ಗ್ರಾಮದ ಕಾಂಗ್ರೆಸ್ ಭದ್ರ ಕೋಟಿಯನ್ನು ಬೇದಿಸಿ ಕಮಲ ಅರಳಿಸಿದ ಕಿರ್ತಿ ರಮೇಶ ಅವರಿಗೆ ಸಲ್ಲುತ್ತದೆ. ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇವರ ಧರ್ಮಪತ್ನಿ ಶ್ರೀಮತಿ ಚೈತ್ರಾ ಅವರನ್ನು ನಿಲ್ಲಿಸಿ ಗೆಲುವಿನ ನಗೆ ಬೀರಿದರು. ಇವರ ಜೊತೆ ಇನ್ನೂರ್ವ ಅಭ್ಯರ್ಥಿ ಶ್ರೀಮತಿ ಲಕ್ಷೀಬಾಯಿ ಬಸವರಾಜ್ ಹುಲ್ಲೂರ ಅವರನ್ನು ಗೆಲ್ಲಿಸಿ ಗ್ರಾಮದಲ್ಲಿ ಮತ್ತೆ BJPಪಕ್ಷದ ಸಂಘಟನೆಗೆ ಆನೆ ಬಲ ತಂದು ಕೊಟ್ಟವರು, ಬಾಲ್ಯದಲ್ಲೇ ಸದಾ ಕ್ರಿಯಾಶೀಲ ವ್ಯಕ್ತಿಯಾದ ರಮೇಶ ಅವರು ರಾಜಕೀಯ ದಿಗ್ಗಜ ನಾಯಕ ರೊಂದಿಗೆ ಸರಳವಾಗಿ ಗುರುಸಿಕೊಂಡ ಇವರು ಯಾವಾಗಲೂ ಸರಳ ಜೀವಿ, ಮತ್ತು ಸ್ನೇಹ ಜೀವಿ ಸದಾ ಅವರ ಪಾರದರ್ಶಕ ಮಾತುಗಳಿಂದಲೇ ಸಕ್ರೀಯ ಯುವ ನಾಯಕರಾಗಿ ಗುರಿತಿಸಿ ಕೊಂಡವರು. ಇಂದು ಹುಚನೂರು ಗ್ರಾಮದಲ್ಲಿ ಸ್ವತಃ ಅವರ ಶ್ರೀಮತಿ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುಸುದಾಗಿ ಪಣ ತೊಟ್ಟಿದ್ದಾರೆ. ನೂತನ ಅಂಟರತಾನಿ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದು ಪಕ್ಷದ ಕಾರ್ಯಕರ್ತರಿಗೆ ಹೊಸ ಭರವಸೆಯ ಬೇಳಕು ಚಲ್ಲಿದಂತಾಗಿದೆ.

**ಮಾನ್ಯ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಜೊತೆಗೆ ಗ್ರಾಮದ ಹಲವಾರು ಸಮಸ್ಯೆಗಳನ್ನು ಹಂಚಿಕೊಂಡು ತಮ್ಮ ಪಂಚಾಯತಿ ಹಾಗೂ ಗ್ರಾಮಕ್ಕೆ ವಿಶೇಷ ಅನುದಾನ ನೀಡಲು ಮನವಿ ಮಾಡಿಕೊಂಡು ಗ್ರಾಮಕ್ಕೆ ಬೇಟಿ ನೀಡಲು ಒತ್ತಾಯ ಮಾಡಿದ ರಾಮನಗೌಡ ತುರಮರಿ.**

“ಮಾಜಿ ಶಾಸಕ ಸನ್ಮಾನ್ಯ ದೊಡ್ಡನಗೌಡ ಪಾಟೀಲ ಅವರೊಂದಿಗೆ ಗೆಲುವಿನ ಸಂಭ್ರಮ ಆಚರಿಸಿದ ರಾಮನಗೌಡ ಹಾಗೂ ಕಾರ್ಯಕರ್ತರು.**

ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಲು ಈಗಾಗಲೇ ನಾನು ಯೋಜನೆ ರೂಪಿಸಿದ್ದು ನೀರಂತರ ಶುದ್ದ ಕುಡಿಯುವ ನೀರು ಉಚಿತವಾಗಿ ಎಲ್ಲರಿಗೂ ಸಿಗಬೇಕು, ೨೬೮ ಮನೆಗೆ ಕನಿಷ್ಟ ಎರಡು ಘಟಕಗಳನ್ನು ಸ್ಥಾಪಿಸಲು ನಾನು ನಮ್ಮ ಶ್ರೀಮತಿ ಅವರ ಮೂಲಕ ಪ್ರಥಮ ಗ್ರಾಮ ಪಂಚಾಯತಿ ಮೀಟಿಂಗ್ ನಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಕೇವಲ ಮೂರು ತಿಂಗಳಲ್ಲಿ ಇದಕ್ಕೆ ಒಂದು ಕಾಯಕಲ್ಪ ನೀಡಲು, ನಾನು ಹೆಚ್ಚಿನ ಶ್ರಮ ವಹಿಸುತ್ತೇನೆ. ಇದಕ್ಕಾಗಿ ನಮ್ಮೂರಿನ ಪ್ರತಿ ಸಮಾಜದಿಂದ ಇಬ್ಬರರಿಂದ, ಮೂರು ಜನರನ್ನು ಆಯ್ಕೆ ಮಾಡಿ, ಕನಿಷ್ಟ ೧೧ ಜನ ಹಿರಿಯರು ಹಾಗೂ ೧೧ ಜನ ಯುವಕರ ಪಡೆ ಕಟ್ಟಿಕೊಂಡು ನಮ್ಮ ಹುಚನೂರು ಗ್ರಾಮದ ಇವರನ್ನು ನಾನು ಗ್ರಾಮದ ಸಮಗ್ರ ಅಭಿವೃದ್ಧಿ ಸಲುವಾಗಿ ಇವರನ್ನೆಲ್ಲ ನಮ್ಮ ಗ್ರಾಮ ಪಂಚಾಯತಿ ಪರವಾಗಿ ಗ್ರಾಮ ಸಲಹಾ ಸಮಿತಿ ಮಾಡಿ, ಅತೀ ಹೆಚ್ಚಿನ ಅನುದಾನವನ್ನು ತಂದು ರಸ್ತೆ, ಹೈಟೆಕ್ ವಿದ್ಯುತ್ ಬೀದಿ ದೀಪ ,ಉತ್ತಮ ಸಿಸಿ ರಸ್ತೆ, ಹಾಗೂ ನಮ್ಮ ಊರಿಗೆ ಸ್ಮಶಾನ ಇಲ್ಲ ಇದಕ್ಕಾಗಿ ನಾವು ಜಾತ್ಯಾತೀತ ವಾಗಿ, ಪಕ್ಷಾ ತೀತವಾಗಿ ಹೋರಾಟ ಮಾಡಬೇಕಾಗಿದೆ. ಇದಕ್ಕೆ ಗ್ರಾಮದ ಸಮಸ್ತ ಯುವಕರು, ಹಿರಿಯರು ತಮ್ಮ ಸಲಹೆ- ಸೂಚನೆಗಳನ್ನು ನೀಡಿ ಸಮಗ್ರ ಅಭಿವೃದ್ಧಿ ಅಭಿಯಾನಕ್ಕೆ ಸಹಕಾರ ನೀಡಲು ವಿನಂತಿಸಿದರು. ಅಲ್ಲದೆ ಈಗಾಲೇ ನಾನು ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಶ್ರೀ ಲಕ್ಷ್ಮಣ್ ಸವದಿ ಅವರೊಂದಿಗೆ ಮನವಿ ಮಾಡಿಕೊಂಡಿದ್ದು ಕರೋನ ಹಾವಳಿ ಸ್ವಲ್ಪ ನಿಯಂತ್ರಣ ಬಂದ ತಕ್ಷಣ ಗ್ರಾಮಕ್ಕೆ ಬೇಟಿ ನೀಡುವುದಾಗಿ ಹೇಳಿದ್ದಾರೆ, ಎಂದರು. ಇಂತಹ ಜನ ನಾಯಕರಾದ ರಾಮನಗೌಡ ಗೌಡರ ಅವರ ಈ ಸಮಾಜ ಸೇವೆಯನ್ನು ಅವರ ಸಾಮಾಜೀಕ ಕಾಳಜಿಯನ್ನು ಇಂದು ನಾವು ನಿವೆಲ್ಲರೂ ಬೆಂಬಲಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಲು BB News ವಿನಂತಿಸುತ್ತದೆ. ವರದಿ: ಎಮ್,ಡಿ,ಮುಸ್ತಫಾ.

ನಮ್ಮ ಶ್ರೀಮತಿ ಚೈತ್ರಾ ಅವರನ್ನು ತಾವೆಲ್ಲರೂ ಮತ ಹಾಕಿ ಆಯ್ಕೆ ಮಾಡಿದ್ದಿರಿ ಅದಕ್ಕೆ ನಾನು ನಮ್ಮ ಕುಟುಂಬದ ಪರವಾಗಿ ಹೃದಯ ಪೂರ್ವಕ ಧನ್ಯವಾದ ಹೇಳುತ್ತೇನೆ.

ಸನ್ಮಾನ್ಯ ಶ್ರೀಮತಿ ಚೈತ್ರಾ ರಾಮನಗೌಡ ತುರಮರಿ ನೂತನ ಗ್ರಾಮ ಪಂಚಾಯತಿ ಸದಸ್ಯರು ಅಂಟರತಾನ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಚನೂರು ಗ್ರಾಮದವರು

ಹಾಗೆ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮೂರಿನ ಗುರು ಹಿರಿಯರಿಗೆ ಎಲ್ಲಾ ಮತಬಾಂಧವರಿಗೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News