
ಮುದ್ದೇಬಿಹಾಳ : ಜನರಿಂದ ಜನರ ಬಾಯಿಂದ ಬಾಯಿಗೆ ಹರಡಿ ಹಾಡುವ ಪ್ರತಿಯೊಂದು ಪದಗಳು ಅವು ನಮ್ಮ ಒಊರ್ವಜರು ಕೊಟ್ಟ ಜನಪದ ಸಂಭ್ರಮದ ಗೀತೆಗಳು, ಇಂದು ನಮ್ಮ ಜನಪದ ಹಾಡು,ನೃತ್ಯ, ಪರಂಪರೆ,ದಾಸ ಸಾಹಿತ್ಯ, ಆಯಾ ಜಾತಿಗಳ ಸಂಭ್ರಮಗಳು ನಮ್ಮ ಪೂರ್ವಜರು ಕೊಟ್ಟು ಹೋದ ಆಸ್ತಿ, ಇಂದಿನ ಆಧುನಿಕ ಯುಗದಲ್ಲಿ ಜನಪದ ಸಾಹಿತ್ಯ ಬಹಳ ಶ್ರೀಮಂತವಾಗಿದೆ. ಆದರೆ ನಾವು ನಮ್ಮ ಜನಪದ ಸಂಸ್ಕ್ರತಿಯನ್ನು ಮರೆತು ಆಧುನಿಕ ಬದುಕಿಗೆ ಹವನಿಸುತ್ತಿದ್ದೇವೆ.

ನಮ್ಮ ಮಕ್ಕಳಲ್ಲಿ ಕನ್ನಡದ ಬಗ್ಗೆ ಕನ್ನಡ ಜನಪದ ಸಾಹಿತ್ಯದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ನಗರದ
ಡಾ!! ಸೋ,ಪೀ,ಒ,ಸರಕಾರಿ ಪ್ರಥಮ ದರ್ಜಿ ಕಾಲೇಜಿನಲ್ಲಿ ಇಂದು ಕರ್ನಾಟಕ ರಾಜ್ಯ ಯುವ ಸಂಘಗಳ ಜಿಲ್ಲಾ/ ತಾಲೂಕ ಒಕ್ಕೂಟದಿಂದ ಕನ್ನಡ ಜನಪದ ಪರಿಷತ್ತಿನ ಸಹಯೋಗದೊಂದಿಗೆ ” ಕನ್ನಡ ಜಾನಪದ ರಾಜ್ಯೋತ್ಸವ ಸಂಭ್ರಮ ,, ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಅವರು ಜನಪದ ಸಾಹಿತ್ಯ ಹಾಗೂ ಕಲೆ ಉಳಿಸಿಕೊಳ್ಳುವಲ್ಲಿ ನಾವು ಇಂತಹ ವೇದಿಕೆಗಳನ್ನು ಕಲಾವಿದರು ಬಳಸಿಕೊಳ್ಳಬೇಕು, ಪುಂಡಲೀಕ ಮುರಾಳ ಅವರು ಜಿಲ್ಲೆಯಲ್ಲಿ ಸಾವಿರಾಯ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕಲೆಯನ್ನು ಉಳಿಸಿ,ಬೆಳೆಸಲು ಶ್ರಮಿಸುತ್ತಿದ್ದಾರೆ.

ಇವರೊಂದಿಗೆ ಈ ಸಂಘಟನೆ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.
ಉಪನ್ಯಾಸಕರಾಗಿ ಮಾತನಾಡಿದ ಮಡಿಕೇಶ್ವರ ಸರಕಾರಿ ಪ್ರೌಢ ಶಾಲೆಯ ಬಸವರಾಜ್ ಹಂಚಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಜನಪದ ಸಾಹಿತ್ಯ ಎಷ್ಟು ಶ್ರೀಮಂತ ಎಂದರೆ ಗೃಹನೀಯರು ಮನೆಯ ಪ್ರತಿ ಕೆಲಸದಲ್ಲೂ ಹಾಡುಗಳನ್ನು ಹಾಡುತ್ತಾ ಕಾಯಕ ಮಾಡುತ್ತಿದ್ದರು.

ಇಂದಿನ ಯುವಕರಿಗೆ ನಮ್ಮ ಹಳ್ಳಿ ಸೊಗಡಿನ ಆಟಗಳು ,ಹಬ್ಬಗಳ ಪರಿಚಯ ಬಹಳ ಕಮ್ನಿ, ಯಾಕೆಂದರೆ ಅವರೆಲ್ಲ ಈಗ ವಾಟ್ಸ್ ಆ್ಯಾಫ್, ಪೇಸಬುಕ್ಕ್ ,ಇನ್ಸ್ಟಾಗ್ರಾಮ್ , ಪಬ್ಜಿ, ಹೀಗೆ ತಮ್ಮ ಜೀವನದ ಅರ್ಧ ಭಾಗವನ್ನು ಇದರಲ್ಲೆ ಕಳೆಯುತ್ತಿದ್ದಾರೆ. ಹೀಗಿರುವಾಗ ನಮ್ಮ ಜನಪದ ಸಾಹಿತ್ಯದ ಆಚಾರ,ವಿಚಾರಗಳ ಪರಿಚಯವನ್ನು ಇಂದಿನ ಯುವ ಪೀಳಿಗೆ ತಿಳಿದುಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯಗಳನ್ನು ನಾವು ನೀವು ಮಾಡಬೇಕಾಗಿದೆ.

ಆಧುನಿಕ ಜಗತ್ತಲ್ಲಿ ನಮ್ಮ ಜನಪದ ಸಂಸ್ಕೃತಿ ಬಹಳ ಶ್ರೀಮಂತವಾಗಿದೆ. ಆದರೆ ಅವುಗಳ ಆಚಾರ ನಸಿಸುತ್ತಿದೆ. ಇದರ ಉಳಿವಿಗಾಗಿ ಈ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನಮ್ಮ ಪುಂಡಲೀಕ ಮುರಾಳ ಅವರ ಕಾರ್ಯ ಶ್ಲಾಘನೀಯ, ಇಂತಹ ವೇದಿಕೆಗಳು ಈ ಸಮಾಜವನ್ನು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ,ಬೆಳೆಸುವಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸಿಕೊಂಡಿದೆ

. ಆ ಎಲ್ಲಾ ಸಂಘಟಕರಿಗೆ ನನ್ನ ಧನ್ಯವಾದ ಇದೊಂದು ಉತ್ತಮ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಎಂದರು. ಮುಖ್ಯ ಅಥಿತಿಗಳಾಗಿ ಮಾತನಾಡಿದ ವೃತ್ತ ನೀರಿಕ್ಷಕ CPI , ಮೋ ,ಇದೊಂದು ಬಹಳ ಅರ್ಥಪೂರ್ಣ ವೇದಿಕೆ ಕಾಲೇಜು ಎಲ್ಲಾ ವಿಧ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ತಮ್ಮ ಕಲೆ ಪ್ರದರ್ಶನ ಮಾಡುವ ಮೂಲಕ ಈ ಜನಪದ ಸಾಹಿತ್ಯವನ್ನು ಈ ಕನ್ನಡ ಜನಪದ ರಾಜ್ಯೋತ್ಸವ ಸಂಭ್ರಮಕ್ಕೆ ನಾವು ನೀವು ಸಾಕ್ಷಿಯಾಗಿ

ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ನಾವು ಮಾಡಲೇ ಬೇಕು ಆ ನಿಟ್ಟಿನಲ್ಲಿ ಪುಂಡಲೀಕ ಮುರಾಳ ಅವರ ಪ್ರಯತ್ನ ವ್ಯರ್ಥ ಆಗಬಾರದು ಎಂದರು.

ನಂತರ ಬಾಗಲಕೋಟೆ ಕ,ಪ,ಸಂ, ಜಿಲ್ಲಾ ಅಧ್ಯಕ್ಷ ಡಿ ಬಿ ವಿಜಯಶಂಕರ್ , ಹಾಗೂ ಶ್ರೀಮತಿ ಕಾಶಿಬಾಯಿ ರಾಂಪೂರ, ಮಾತನಾಡಿ ಜನಪದ ಉಳಿವಿಗಾಗಿ ಈ ಸಂಘವು ಜಿಲ್ಲೆಯಾಧ್ಯಾಂತಹ ಸಾವಿರಾರು ಕಲಾವಿದರಿಗೆ ವೇದಿಕೆ ಕಲ್ಪಿಸಿದ ಕೀರ್ತಿ ಈ ಸಂಘಕ್ಕೆ ಸಲ್ಲುತ್ತದೆ, ಎಂದರು.

ಕಾಲೇಜು ಹಲವು ವಿಧ್ಯಾರ್ಥಿಗಳು ನೃತ್ಯ ಮಾಡುವ ಮೂಲಕ ಗಮನ ಸೇಳೆದರು, ಹಾಗೆ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡಿದರು. ಕೆಲವು ಸಾಧಕರನ್ನು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಪುಂಡಲೀಕ ಮುರಾಳ, ಶ್ರೀ ನೀಲಕಂಠರಾವ್ ನಾಡಗೌಡ, ಶ್ರೀ ಸತೀಶ ಓಸ್ಟಾಲ್ ,ಶ್ರೀ ಸಂಗನಗೌಡ ಬಿರಾದರ ಶ್ರೀ ಸದ್ದಾಂ ಕುಂಟೋಜಿ , ಶ್ರೀ ಸಂಗಣ್ಣ ಕಂಚಾಣಿ, ಶ್ರೀ ಟಿ, ವಿಜಯಭಾಸ್ಕರ್ ಶ್ರೀ ಮಹಾಂತೇಶ ಬೂದಿಹಾಳಮಠ, ಶ್ರೀ ವಿರೇಶ ಗುರುಮಠ

ಶ್ರೀ ಭೀಮಸಿಂಗ್ ರಾಠೋಡ ಸೇರಿದಂತೆ ಅನೇಕ ಕಲಾವಿದರು, ಕಾಲೇಜಿನ ಶಿಕ್ಷಕ,ವೃಂದ, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.










ವರದಿ : ಕಿರಣರಾಜ್ ಎಂ ಕಾಳಗಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News