ಬೆಂಗಳೂರು: ನ್ಯಾಯಾಲಯದಲ್ಲಿ ಯುವತಿಯನ್ನು ಹಾಜರುಪಡಿಸಿದ ವೇಳೆ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಇರುವುದು ಬೆಳಕಿಗೆ ಬಂದಿದೆ. ಯುವತಿ ಕಾರು ಹತ್ತುವ ಸಂದರ್ಭದಲ್ಲಿ ಮುಕುಂದರಾಜ್ ಯುವತಿ ಕಾರು ಹತ್ತುವಾಗ ಕಾರಿನ ಬಾಗಿಲ ಬಳಿಗೆ ಬರುವುದು ವಿಡಿಯೊವೊಂದರಲ್ಲಿ ಸೆರೆಯಾಗಿದೆ.
ಇದನ್ನು ಬಿಜೆಪಿ ಕರ್ನಾಟಕ ಪ್ರಶ್ನಿಸಿ ದ್ವೀಟ್ ಮಾಡಿದೆ. ಬಿಜೆಪಿ ಕರ್ನಾಟಕ ಟೈಟ್: ‘ಸಿ.ಡಿ ಪ್ರಕರಣ ಕರ್ನಾಟಕ ಕಾಂಗ್ರೆಸ್ ಪ್ರಾಯೋಜಿತ ಎಂದು ಸಾಬೀತಾಗುತ್ತಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಯುವತಿ ಹೇಳಿಕೆ ದಾಖಲು ಮಾಡುವ ಸಂದರ್ಭದಲ್ಲಿ ಹಾಜರಿದ್ದು ಸಹಾಯ ಮಾಡುತ್ತಾರೆ ಎಂದರೆ ಏನರ್ಥ? ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ? ಎಂದು ಬಿಜೆಪಿ ಟೈಟ್ ಮಾಡಿದೆ.