Breaking News
ಅಮೀನಗಡದ ಸಾಹಿತಿ/ಶಿಕ್ಷಕ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡದ ಸಾಹಿತಿ/ಶಿಕ್ಷಕ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮಾಚರಣೆ

ಅಮೀನಗಡ: ನಗರದ ಗೆಳೆಯರ ಬಳಗದಿಂದ ಇಂದು ಶಿಕ್ಷಕರು,ಸಾಹಿತಿಗಳಾದ ಶ್ರೀ ಯೋಗೇಶ ಜಿ ಲಮಾಣಿ ಅವರ ೫೫ ನೇ ಹುಟ್ಟುದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು, ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದ ಶ್ರೀ ಆದರ್ಶ ಸಂಯುಕ್ತ ಪ,ಪೂ, ಪ್ರೌಢ ಶಾಲೆಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಇಂದಿಗೆ ಸುಧೀರ್ಘ ೨೭ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿ ಇದರೊಂದಿಗೆ ೫ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

೧) ” ಮೌನ ದನಿ, ೨) ವಿಜ್ಞಾನ ವಿದ್ಯಮಾನ, ೩) ಅಮೀನಗಡ ಬಂಜಾರ ಅಧ್ಯಯನ, ೪) ಅಂತರಾಳದ ಅರ್ಥಬಾದೆ, ಹಾಗೂ ಹಿರಿಯ ಸಾಹಿತಿ ನಂತರ ಶಂಕರ ಲಮಾಣಿ ಅವರ ” ಬದುಕು ಬರಹ , ಕೃತಿ ಸರ ರಚಿಸಿದ್ದಾರೆ, ಇದರೊಂದಿಗೆ ಮೌನ ದನಿ ಕೃತಿಗೆ ಬೆಂಗಳೂರಿನ ಪ್ರತಿಷ್ಠಿತ ಹೆಬ್ಬಗೊಡಿ ಗೋಪಾಲ ದತ್ತಿ ಪ್ರಶಸ್ತಿ ಲಭಿಸಿದೆ. ಎಂದು ಹೇಳಲು ಸಂತಸವಾಗಿದೆ.

ಬಡತನದಲ್ಲಿ ಬದುಕು ಕಟ್ಟಿಕೊಂಡು ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಯೋಗೇಶ ಅವರ ಸಾಧನೆ ನಾವು ಮೆಚ್ಚುವಂತದ್ದು. ಇಂದು ಅವರು ೫೪ ವಸಂತಗಳನ್ನು ಪೂರೈಸಿ ೫೫ನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಅವರ ಬದುಕಿನ ಪ್ರತಿ ಕ್ಷಣ ಸುಖ,ಶಾಂತಿ,ನೆಮ್ಮದಿಯಿಂದ ಕೂಡಿರಲಿ ಎಂದು ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಡಿ ಬಿ ವಿಜಯಶಂಕರ್ ಈ ಹುಟ್ಟು ಹಬ್ಬದ ಸಂಭ್ರಮಾಚರಣೆ ಉದ್ದೇಶಿಸಿ ಮಾತನಾಡಿದರು.


ನಂತರ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀ ಆರ್ ನರಸಿಂಹಮೂರ್ತಿ ಅವರು ಯೋಗೇಶ ಅವರ ಬಗ್ಗೆ ಗಂಟೆಗಟ್ಟಲೇ ಮಾತನಾಡಿದರು ಅವರ ಬಗ್ಗೆ ಪೂರ್ಣ ಹೇಳಲು ಪದಗಳು ಸಾಲಲ್ಲ, ನಮ್ಮ ಮುಂದೆ ಬೆಳೆದ ಅದ್ಬುತ ವ್ಯಕ್ತಿ, ವೃತ್ತಿಯಲ್ಲಿ ವಿಜ್ಞಾನ ಶಿಕ್ಚಕರಾಗಿ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಓಡಿಸ್ಸಾದ ಭುವನೇಶ್ವರ ಕ್ಕೆ ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಕರೆದುಕೊಂಡು ಹೋದ ದಿಟ್ಟ ಹಾಗೂ ಛಲಗಾರ, ಒಬ್ಬ ವಿಜ್ಞಾನ ಶಿಕ್ಷಕನಾಗಿ ಈ ಸಾಹಿತ್ಯದ ಕಡೆ ಬಂದಿದ್ದೆ ಒಂದು ರೋಚಕ.

ಸುಮಾರು ೬ ಕೃತಿಗಳನ್ನು ಬರೆದಿದ್ದಾರೆ. ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ. ಇಂತಹ ಉತ್ತಮ ಶಿಕ್ಷಕರು ನಮ್ಮ ಮಧ್ಯ ಗೆಳೆಯರ ಬಳಗದಲ್ಲಿ ಇದ್ದದ್ದು ಸಂತಸವಾಗಿದೆ, ಆ ಭಗವಂತ ಯೋಗೇಶ ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಕೋರಿದರು.

ಹೋಟೆಲ್ ಉದ್ದೆಮಿ ಅಶೋಕ ಶಿರಿಯಾನ ಅವರಿಂದ ಯೋಗೇಶ ಅವರಿಗೆ ಶುಭಾಶಯ ಕೋರಿದರು.


ಜಗದೇಶ ಬಿಸಲದಿನ್ನಿ, ಅಮರೇಶ ಮಡ್ಡಿಕಟ್ಟಿ ,ನಾಗರಾಜ್ ತೆವರ, ಮಾತನಾಡಿ ಜನ್ಮ ದಿನದ ಶುಭಾಶಯ ಕೋರಿದರು. ಈ ಸರಳ ಹುಟ್ಟು ಹಬ್ಬದ ಸಂಭ್ರಮದಲ್ಲಿ ತಾ,,ಪಂ, ಸದಸ್ಯರಾದ ಶ್ರೀ ತುಕಾರಾಮ್ ಪವಾರ್, ಅಶೋಕ ಶಿರಿಯಾನ, ಶ್ರೀ ಎಸ್,ಜಿ, ಶಾಂತಗೇರಿ, ಕಿರಣ ಕಾಳಗಿ, ಸಿದ್ದು ಹೊಸಮನಿ, ಅನೇಕ ಆತ್ಮೀಯ ಗೆಳೆಯರ ಬಳಗ ಉಪಸ್ಥಿತಿ ಇದ್ದರು.

ಎಸ್ ಜಿ ಶಾಂತಗೇರಿ ಅವರಿಂದ ಯೋಗೇಶ ಅವರಿಗೆ ಶುಭಾಶಯ ಕೋರಿದರು.
ಜಗದೇಶ ಬಿಸಲದಿನ್ನಿ ಅವರಿಂದ ಯೋಗೇಶ ಅವರಿಗೆ ಶುಭಾಶಯ ಕೋರಿದರು.
ಡಿ,ವಿ ಪಾಟೀಲ ಅವರಿಂದ ಯೋಗೇಶ ಅವರಿಗೆ ಶುಭಾಶಯ ಕೋರಿದರು.

ಯೋಗೇಶ ಅವರಿಗೆ ೫೫ ನೇ ಜನ್ಮ ದಿನದ ಶುಭಾಶಯ ಕೋರಿದ ಕ್ಷಣ

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.