
ಬಾಗಲಕೋಟೆ: ಜಿಲೆಯಲ್ಲಿ ಮಹಾಲಿಂಗಯಾಯ ನಿಧಿ ಲಿಮಿಟೆಡ್ ಪೈನಾನ್ಸ್ ಹಾಗೂ ಎಮ್,ಎಸ್ ಡೌಲಪರ್ಸ್, ಹಾಗೂ ಮಾಲಿಂಗರಾಯ ಪೈನಾನ್ಸ್, ಹೀಗೆ ವಿವಿಧ ಹೆಸರುಗಳಿಂದ ರಾಜ್ಯದಲ್ಲಿ ಚೈನ್ ಸಿಸ್ಟಮ್ ರೀತಿಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ರೂಪದಲ್ಲಿ ತಮಗೆ ಲಾಭ ನೀಡುವುದಾಗಿ ಈ ಕಂಪನಿಯ ಸಂಸ್ಥಾಪಕ ಹಾಗೂ ಎಮ್,ಡಿ, ಮಹಾಳಿಂಗರಾಯ ಇವರು ಜನರಿಂದ ಹಗಲು ದರೋಡೆ ಮಾಡುತ್ತಿದ್ದಾರೆ.

ಇನ್ನೊಂದು ವಿಚಿತ್ರ ಎಂದರೆ ಈ ಮಹಾಲಿಂಗರಾಯ ನಿಧಿ ಲಿಮಿಟೆಡ್ ಪೈನಾನ್ಸ್ 19/02/2024 ರಲ್ಲಿ ಪ್ರಾರಂಭವಾಗಿ ಕೇವಲ 3 ತಿಂಗಳಲ್ಲಿ ಹಳ್ಳ ಹಿಡಿದಿದೆ, RBI ಗೈಡ್ ಯಾವ ನಿಯಮಗಳನ್ನು ಪಾಲಿಸದ ಕಾರಣ ಈ ಮಹಾಲಿಂಗರಾಯ ನಿಧಿ ಪೈನಾನ್ಸ್ ಅನುಮತಿ ರದ್ದು ಮಾಡಲಾಗಿದೆ. ವಿಪರ್ಯಾಸವೆಂದರೆ ಕೇವಲ 3 ತಿಂಗಳಲ್ಲಿ ಈ ಪೈನಾನ್ಸ್ ಆಗಲೆ 85 ಲಕ್ಷ ಹಣದ ವಹಿವಾಟು ನಡೆಸಿತ್ತು ,ಹಣ FD ,ಮಾಡಿದ ಹಾಗೂ ಪಿಗ್ಮಿ ತುಂಬಿದ ,ಎಸ್,ಬಿ ಖಾತೆಯಲ್ಲಿ ಹಣ ಜಮಾ ಮಾಡಿದ ಸಾರ್ವಜನಿಕರು ಈಗ ನಿತ್ಯ ಈ ಈ ಮಹಾಲಿಂಗರಾಯ ನಿಧಿ ಪೈನಾನ್ಸ್ ಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಹಣ ನೀಡಿ ಇನ್ನೂ ಸಾಕಷ್ಟು ಜನರಿಗೆ ಹಣ ವಾಪಾಸ್ ಮಾಡದೆ ತಲೆ ಮರಿಸಿಕೊಂಡು ತಿರುಗುತ್ತಿದ್ದಾರೆ. ಎಂದು ಕೇಳಿ ಬಂದಿದೆ.

ಈಗ MS ಡೌಲಪರ್ಸ್ ಎಂದು ಕಂಪನಿಗೆ ಜನ 1 ಲಕ್ಷ ಎಫ್,ಡಿ ಮಾಡಿದರೆ ಅವರನ್ನ ಗೋವ ರಾಜ್ಯಕ್ಕೆ ಉಚಿತ ಪ್ರವಾಸದ ಆಮಿಶ ಒಡ್ಡಲಾಗಿದೆ. ಅಲ್ಲದೆ ಅವರಿಗೆ ಪ್ರತಿ ತಿಂಗಳು 5000/ ಸಾವಿರ ಅವರ ಖಾತೆಗೆ ಜಮಾ ಮಾಡುತ್ತಾರಂತೆ, ಇದು ಹೇಗೆ ಸಾಧ್ಯ ಎಂದು ಎಮ್,ಡಿ ಮಹಾಲಿಂಗರಾಯ ಅವರನ್ನು ಕೇಳಿದರೆ, ಕಂಪನಿಯಿಂದ ನಾವು ಸಾರ್ವಜನಿಕರ ಹತ್ತಿರ ಯಾವುದೇ FD ಹಣ ಪಡಿಯಲ್ಲ ಅದನ್ನ ಸಾಲವೆಂದು ಪಡೆಯುತ್ತೇವೆ, ಅದನ್ನು ಲ್ಯಾಂಡ್, ಅಥವಾ ಶಾಫಿಂಗ್ ಸ್ಮಾರ್ಟ್ ಹಣ ಹೂಡಿಕೆ ಮಾಡಿ ಬಂದ ಲಾಭದಲ್ಲಿ ಅವರಿಗೆ ಹಣ ನೀಡುತ್ತೇವೆ. ಎಂದು ಹೇಳುತ್ತಿರುವ ಈ ಅಯೋಗ್ಯ ತಮ್ಮ ಕಂಪನಿ ಗೃಫ್ ಗಳಲ್ಲಿ ಬಣ್ಣ ಬಣ್ಣದ ಜಾಹೀರಾತು ಗಳನ್ನು ಹಾಕಿ ಜನರ ದಿಕ್ಕು ತಪ್ಪಿಸುತ್ತಿದ್ದಾನೆ.

ಈ ಮಹಾಲಿಂಗರಾಯ ತನ್ನದೆ ಆ್ಯಫ್ ಮೂಲಕ ಈ ಕಂಪನಿಗೆ ಹಣ ಹೂಡಿಕೆ ಮಾಡಿಸಿಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ. 1 ಲಕ್ಷ ರೂಪಾಯಿ ಈ ಕಂಪನಿಗೆ FD ಮಾಡಿದ ತಕ್ಷಣ ಅವರು ಗೋವಾ ಟ್ರೀಫ್ ಉಚಿತ ಪ್ರಯಾಣ ಎಲ್ಲಾ ಖರ್ಚ ವೆಚ್ಚವನ್ನು ಇವರೆ ಭರಿಸುತ್ತಾರಂತೆ, ಜನರಿಗೆ ಈ ರೀತಿ ಆಸೆ ಆಮಿಷ ಒಡ್ಡಿ ಕೋಟ್ಯಾತರ ರೂಪಾಯಿ ಅಕ್ರಮ ವರ್ಗಾವಣೆ ನಡೆದಿದೆ. ಈ ಕಂಪನಿ MD ಮಹಾಲಿಂಗರಾಯ ಸುಮಾರು 15,000 ಸಾವಿರ ಜನರಿಗೆ ಇದೆ ತರ ಕೆಲಸ ಕೊಟ್ಟಿರಬಹುದಾ ? ನಾನು ಕೆಲಸ ಕೊಟ್ಟಿದ್ದೇನೆ. ತಾವು ನಮ್ಮಲ್ಲಿ ಹಣ ಹಾಕಿ, ಪ್ರತಿ ತಿಂಗಳು ನೀವು ಇದ್ದಲೇ ನಿಮ್ಮ ಖಾತೆಗೆ 5000/ ಸಾವಿರ / 10,000 ಸಾವಿರ ಹಣ ಜಮಾ ಆಗುತ್ತದೆ. ಎಂದು ಹೇಳಲಾಗಿದೆ.
.
ಕೆಲವೆಇಗೆ ಹಣ ಕೂಡ ಜಮಾ ಮಾಡಲಾಗಿದೆ. ನಂತರ 5 ಲಕ್ಷ ಹಾಕಿದರೆ ಪ್ರತಿ ತಿಂಗಳು _10.000 ಸಾವಿರ, ಲಾಭ ( ಬಡ್ಡಿ ಹಣ ) ಜಮಾ ಮಾಡುತ್ತಾರೆಂತೆ ಈ ಬಗ್ಗೆ ಜನ ಎಚ್ಚರಿಕೆಯಿಂದ ಈ ಪ್ರಾಢ್ ಕಂಪನಿಯ ಬಗ್ಗೆ ಗಮನ ಹರಿಸಬೇಕೆಂದು ನಮ್ಮ ಸುದ್ದಿ ವಾಹಿನಿಯ ಕಳಕಳೆಯಾಗಿದೆ.
ಯಾದಗೇರಿ ಜಿಲ್ಲೆಯ ಸುರಪುರದಲ್ಲಿ ಈ ಮಹಾಲಿಂಗರಾಯ ನಿಧಿ ಪೈನಾನ್ಸ್ ಪ್ರಾರಂಭ ಮಾಡಲಾಗಿತ್ತು. ಇದೆ ತಾಲ್ಲೂಕಿನ ಕಕ್ಕೇರ ಗ್ರಾಮದ ನಿವಾಸಿ ಮಹಾಲಿಂಗರಾಯ. ಈತ ಈಗಾಗಲೇ ಯಾದಗೇರಿ, ವಿಜಯಪುರ, ರಾಯಚೂರು, ಬಾಗಲಕೋಟೆ, ಯಲ್ಲಿ ಸಕ್ರಿಯವಾಗಿ ಜನರ ದಿಕ್ಕು ತಪ್ಪಿಸಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡುವ ಕಾರ್ಯ ಭರದಿಂದ ಸಾಗಿದೆ, ಇದರಲ್ಲಿ ಈ ಕಂಪನಿಯ ಮಹಾಲಿಂಗರಾಯ, ಸಿದ್ದುಸಾ ಪೊತನಾಳ, ಹುಚ್ಚಪ್ಪ ವಡವಡಗಿ,ಸೋಮು ಇಟಗಿ,ಅಶೋಕ ಚಲವಾದಿ ಸೇರಿದಂತೆ ಒಂದು ಟಿಮ್ ಯಾವುದೆ ಕಾನೂನಿನ ಭಯ ಇಲ್ಲದೆ, RBI ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾನೆ.
ಗೋವ ರಾಜ್ಯದಲ್ಲಿ ಎಮ್ ಎಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ಸದಸ್ಯರೊಂದಿಗೆ ಗುಂಡು ತುಂಡಿನ ಪಾರ್ಟಿಯಲ್ಲಿ ಕಂಪನಿ MD ಮಹಾಲಿಂಗರಾಯ ಹಾಗೂ ಸಹಚರರು
ಸರಕಾರಕ್ಕೆ ತೆರಗೆ ವಂಚಿಸಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ಈ ಕಂಪನಿ ಯಾವ ರೀತಿ ಅನುಮತಿ ಪಡೆದಿದೆ. ಇದರ ವ್ಯಾಪ್ತಿ, ಹಣಕಾಸಿನ ಪ್ರಮಾಣ, ಎಲ್ಲವನ್ನು ತನಿಖೆ ಮಾಡಿ ಈ ಕಂಪನಿಯ ವಾಸ್ತವಿಕ ಸತ್ಯ ವಿಚಾರಿಸಲು ಅಮೀನಗಡ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಠಾಣೆಯ PSI ಶ್ರೀಮತಿ ಜ್ಯೋತಿ ವಾಲಿಕಾರ ಭರವಸೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ತನಿಖೆ ನಡೆಯಲಿದೆ ಎಂದು ಕಾದು ನೋಡಬೇಕಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News