
ಅಮೀನಗಡ : ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಬದಾಮಿ ಘಟಕದಿಂದ ಆಯೋಜನೆ ಮಾಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ಕೈಗೊಂಡಿದ್ದ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ಅಮೀನಗಡ ನಗೆರದ ಶ್ರೀ ಮಲ್ಲಪ್ಪ ಸಂಗಪ್ಪ ಮೂಲಿಮನಿ ಅವರಿಗೆ ಅತ್ಯುತ್ತಮ ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂದು ಅಮೀನಗಡ ನಗರದ ಶಿಕ್ಷಕರ ಬಳಗದಿಂದ ಈ ಪ್ರಶಸ್ತಿ ಸಿಕ್ಕಿದ್ದಕ್ಕಾಗಿ ಅಭಿನಂದನಾ ಪೂರ್ವಕವಾಗಿ ಗೌರವ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರು ಹಾಗೂ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹುನಗುಂದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಸಜ್ಜನ ಅವರು ಮಾತನಾಡಿ ಮಲ್ಲಪ್ಪ ಮೂಲಿಮನಿಯವರು ಬಹಳ ಸರಳ ಸಜ್ಜನಿಕೆ ವ್ಯಕ್ತಿಗಳು, ಅವರ ಈ ಶಿಕ್ಷಣ ವೃತ್ತಿ ರಂಗದಲ್ಲಿ ನಮಗೆ ಮಾರ್ಗದರ್ಶಕರು,ತಮ್ಮ ಜೀವನದ ಉದ್ದಕ್ಕೂ ಬಹಳ ಪ್ರಾಮಾಣಿಕವಾಗಿ, ದಕ್ಷತೆಯಿಂದ ಸೇವೆ ಮಾಡಿದ್ದಾರೆ. ಅವರಿಗೆ ಈ ಅತ್ಯುತ್ತಮ ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ಸಿಕ್ಕಿದ್ದು ಅವರ ಸಾರ್ಥಕ ಬದುಕಿಗೆ ಸಂಧ ಗೌರವವಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಆ ಭಗವಂತ ಹೆಚ್ಚಿನ ಆಯುಷ್ಯ,ಆರೋಗ್ಯ, ಕೊಟ್ಟು ಇನ್ ಕೆಲವೆ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಮೂಲಿಮನಿಯವರು ಈ ಶಿಕ್ಷಣ ರಂಗದಲ್ಲಿ ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಬಿಟ್ಟು ನಮಗೆ ಮಾರ್ಗದರ್ಶಕರಾಗಿದ್ದಾರೆ.

ಈ ಸಂದರ್ಭದಲ್ಲಿ ನಮ್ಮ ಅಮೀನಗಡ ಶಿಕ್ಷಕರ ಬಳಗದಿಂದ ಅಭಿನಂದನೆಗಳು ಎಂದರು. ಈ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜುನ ಸಜ್ಜನ ಶ್ರೀ ಜೆ,ಪಿ,ಚಳ್ಳಗಿಡದ ,ಶ್ರೀ ಎಸ್,ಐ ಸಣಕಲ್ಲ ಶ್ರೀ ಎಸ್,ಬಿ ಸಜ್ಜನ ,ಶ್ರೀ ಡಿ,ಎ ,ಸಜ್ಜನ ಶ್ರೀ ಜೆ,ಆರ್ ಹಂಡಿ ಶ್ರೀ ಅಶೋಕ ಎಮ್ಮಿ ಸಿ ಆರ್ ಪಿ ಶ್ರೀ ರಾಜಮೊಹಮ್ಮದ ( ದಿಲ್ಲು ) ದೊಡಮನನಿ ಶ್ರೀ ಗುರು ರಜಪೂತ, ಶ್ರೀ ಎಮ್,ವಿ ಪಾಟೀಲ ಶ್ರೀ ಎಸ್,ಎಸ್,ಖಾದ್ರಿ ಹಾಗೂ ಶ್ರೀ ಎಮ್,ಟಿ ರಂಗಾಪೂರ ಶ್ರೀ ಮಲ್ಲಿಕಾರ್ಜುನ ಕಂದಕೂರ ಸೇರಿದಂತೆ ಅನೇಕ ಗುರು ವೃಂದ ಉಪಸ್ಥಿತಿ ಇದ್ದರು.
ವರದಿ : ಕಿರಣರಾಜ್ ಎಮ್ ಕಾಳಗಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News