
ಗೋವಾ : ಇಂದು ಗೋವಾದ ಕಲ್ಲಂಗುಟ್ ಬಿಚ್ ನಲ್ಲಿ ಬೃಹತ್ ಹೋಟೆಲ್ ಉಧ್ಯಮಿದಾರರಾದ ಶ್ರೀ ಮುರಳಿ ಮೋಹನ್ ಶಟ್ಟಿ ಅವರಿಗೆ Indian Journalist Union Dehali ಹಾಗೂ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಮತ್ತು BB News ಚಾನಲ್ ಸಹಯೋಗದೊಂದಿಗೆ ಇಂದು ” ಸಮಾಜ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ಇಂದು ಪ್ರಧಾನ ಮಾಡಲಾಯಿತು. ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ Indian Journalist Union ರಾಷ್ಟ್ರೀಯ ಮಂಡಳಿ ನಿರ್ದೇಶ ಶ್ರೀ ವೈ,ಜಿ,ಬ್ಯಾಡಗಿ,ಹಾಗೂ & BB News Channal Propetur ಶ್ರೀ ಡಿ,ಬಿ,ವಿಜಯಶಂಕರ್ ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಏಕನಾಥ ಭಾವೆಕರ ಅವರು ಮುರಳಿ ಮೋಹನ್ ಶಟ್ಟಿ ಅವರ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿ ಇಂದು ಅವರನ್ನು BB NEES ಚಾನಲ್ ಅವರು ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದ ಅಡಿಯಲ್ಲಿ ಒಬ್ಬ ನಿಜವಾದ ಸಮಾಜ ಸೇವಕನನ್ನು ಗುರುತಿಸಿ ಈ ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿ ನೀಡಿದ್ದು ಗೋವಾದ ಇಡೀ ಕನ್ನಡಿಗರಿಗೆ ಸಂದ ಗೌರವ ಇದಾಗಿದೆ, ಅತ್ಯಂತ ಕಠಿಣ ಶ್ರಮ ಜೀವಿ, ಸಾಕಷ್ಟು ಬಡವರಿಗೆ ಸಹಾಯ ಮಾಡಿದ ಮುರಳಿ ಮೋಹನ ಶಟ್ಟಿ ಅವರು ನಿಜವಾಗ್ಲು ಈ ಸಮಾಜದ ರತ್ನ ಎಂದರೆ ತಪ್ಪಾಗಲಾರದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ BB NEWS ಪ್ರೋಫ್ರೈಟರ್ ಡಿ,ಬಿ ವಿಜಯಶಂಕರ್ ಅವರು ಕರ್ನಾಟಕದ ಒಬ್ಬ ಕನ್ನಡದ ಯುವಕ ಮುರಳಿ ಮೋಹನ್ ಶಟ್ಟಿ ಭಂಟ್ ಸಮಾಜದ ಒಂದು ಹುಲಿ ,ಇಡೀ ಗೋವಾ ರಾಜ್ಯದಲ್ಲಿ ಒಬ್ಬ ಬೆಸ್ಟ್ ಹೋಟೆಲ್ ಉಧ್ಯಮಿಯಾಗಿ ೧೦ ಹೋಟೆಲ್ ರೆಸ್ಟೋರೆಂಟ್ ಗಳನ್ನು ನಡೆಸುತ್ತಿದ್ದಾರೆ. ಸುಮಾರು ೪೦೦ ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ, ಸದಾ ಎಲೆ ಮರೆಯ ಕಾಯಿಯಂತೆ ಹಗಲು-ರಾತ್ರಿ ಕಾಯಕ ಮಾಡಿ ಮುಂದೆ ಬಂದವರು, ಬಡವರ ಮಕ್ಕಳಿಗೆ ಹಾಗೂ ಗೋವು ಶಾಲೆಗೆ ಕ್ರೀಡಾ ಪಟುಗಳಿಗೆ ಸದಾ ಬೆಂಬಲಿಸಿ,ಆರ್ಥಿಕ ಸಹಾಯ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ೧೯೯೨ರಲ್ಲಿ ಕೇವಲ ೮೦೦ ರೂಪಾಯಿ ಸಂಭಳಕ್ಕಾಗಿ ಕೆಲಸಕ್ಕೆ ಸೇರಿ ಇಂದು ೧೦ ಹೊಟೇಲ್ ರೆಸ್ಟೊರೆಂಟ್ ಮಾಲೀಕರಾಗಿ ,ಕನ್ನಡ ಸಂಘಟನೆಯ ಅಧ್ಯಕ್ಷರಾಗಿ ಸಮಾಜ ಸೇವೆ ಮಾಡುತ್ತಿರುವ ಶ್ರೀಯುತರಿಗೆ ನಮ್ಮ ಚಾನಲ್ ಪ್ರಶಸ್ತಿ ನಡಿಗೆ ಆಧಕರ ಕಡೆಗೆ ಅಭಿಯಾನದ ಅಡಿಯಲ್ಲಿ ಹಾಗೂ Indian journalist Union ಸಹಯೋಗದೊಂದಿಗೆ ಮುರಳಿ ಮೋಹನ್ ಶಟ್ಟಿ ಅವರಿಗೆ ರಾಷ್ಟ್ರೀಯ ಸಮಾಜ ಸೇವಾರತ್ಮ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಒಬ್ಬ ನಿಜವಾದ ಸಾಧಕನನ್ನು ಗುರುತಿಸಿದ್ದೇವೆ ಎಂದು ಹೆಮ್ಮೆ ಎನಿಸುತ್ತಿದೆ ಎಂದರು. ನಂತರ ಮಾತನಾಡಿದ ಪದ್ಮಕುಮಾರ,ನಾಯರ್,ಶೀತಲ್ ಚೌಡನ್ನವರ,ಬಸವರಾಜ್ ಇಂಗಳಹಳ್ಳಿ,ಹನಮಂತಪ್ಪ ರಡ್ಡಿ, ಸುದೇಶ ಶಿರೋಢಕರ,ಅಗರವಾಲ,ಶಂಭು ವೀರಪ್ಪ ಶಟ್ಟರ ರಾಘವ ಶಟ್ಟಿ ಸೇರಿದಂತೆ ಪ್ರತಿಯೊಬ್ಬರೂ ಮುರಳಿ ಮೋಹನ್ ಶಟ್ಟಿ ಅವರ ಪ್ರಾಮಾಣಿಕ ಸಮಾಜ ಸೇವೆಗೆ ಸಂದ ಗೌರವ ಇದಾಗಿದೆ,ಅವರು ಇಂದಿನ ಯುವಕರಿಗೆ ಧಾರಿದೀಪ,ಹಾಗೂ ದೇವರ ಸಮಾನರು ಎಂದು ಕೊಂಡಾಡಿದರು. ಈ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಪಾದಕ ಶ್ರೀ ವೈ,ಜಿ, ಬ್ಯಾಡಗಿ ಅವರು ಅನೇಕ ಜನ ಉದ್ಯೋಗ ಹರಿಸಿ ಗೋವಾದ ಕಡೆ ಬಂದ ಕನ್ನಡಿಗರಿಗೆ ಕನ್ನಡ ಸಂಘಟನೆ ಮೂಲಕ ಎಲ್ಲರನ್ನು ಒಗ್ಗುಡಿಸಿ ಸದಾ ಸಮಾಜದ ಇಳಿತಿಗೆ ತೆರೆ ಮರೆ ಹಿಂದೆ ಕೆಲಸ ಮಾಡಿ ಇಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಮುರಳಿ ಮೋಹನ್ ಶಟ್ಟಿಅವರ ಸಮಾಜ ಮುಖಿ ಕೆಲಸ ಹೀಗೆ ಸಾಗಲಿ ಎಂದರು . ಈ ಪ್ರಶಸ್ತಿ ಪ್ರದಾನ ಸರಳ ಸಮಾರಂಭದ ಕಾರ್ಯಕ್ರಮದಲ್ಲಿ ಶ್ರೀ ವೈ,ಜಿ,ಬ್ಯಾಡಗಿ, ಶ್ರೀ ಡಿ,ಬಿ, ವಿಜಯಶಂಕರ್, ಶ್ರೀ ಏಕನಾಥ ಭಾವೆಕರ, ಶ್ರೀ ಮುರಳಿ ಮೋಹನ್ ಶಟ್ಟಿ, ಮಾತೃಶ್ರೀ ರತ್ಮಮ್ಮ ಶಟ್ಟಿ, ಬಸವರಾಜ ಇಂಗಳಳ್ಳಿ ,ರಾಘವ ಶಟ್ಟಿ, ಅಂಬುಲಾಕ್ ರಂಗ್ರೇಜಿ,ಸುದೇಶ ಶಿರೋಢಕರ,ಅಗರವಾಲ, ಶೀತಲ್,ಔಡನ್ನವರ, ಹನಮಂತಪ್ಪ ರಡ್ಡಿ, ಹನಮಂತ ಹಿರೇಮನಿ, ಶಂಭು ಶಟ್ಟರ ಅನೇಕ ಕನ್ನಡ ಸಂಘಟನೆಗಳ ಅಧ್ಯಕ್ಷರು, ಪಧಾದಿಕಾರಿಗಳು ಭಾಗವಹಿಸಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು. ಈ ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿಯನ್ನು ಹಿರಿಯ ಸಂಪಾದಕರಾದ ವೈ,ಜಿ,ಬ್ಯಾಡಗಿ, ಡಿ,ಬಿ,ವಿಜಯಶಂಕರ್ ,ಉದ್ಘಾಟಕರಾದ ಏಕನಾಥ ಭಾವೆಕರ,ಅವರು ಪ್ರಶಸ್ತಿ ಪ್ರಧಾನ ಮಾಡಿದರು.