ಇಲಕಲ್ಲ : ಇಂದು ನಗರದ ಆರ್ ವೀರಮಣಿ ಸಭಾಭವನ ದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಕ್ಷೇತ್ರದ ಹಾಗೂ ವಾಯುವ್ಯ ಪದವೀಧರರ ಕ್ಷೇತ್ರದ ಚುನಾವಣೆ ಯ ಪ್ರಚಾರ ಸಭೆಯು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಅಧ್ಯಕ್ಷತೆಯಲ್ಲಿ ನಡೆಯಿತು.

ವಾಯುವ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಪ್ರಕಾಶ ಬಾ ಹುಕ್ಕೇರಿ ಅವರು ಹಾಗೂ ವಾಯುವ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಸುನೀಲ ಸಂಕ ಅವರು ಭಾಗವಹಿಸಿ ಮತಯಾಚನೆ ಮಾಡಿದರು. ಕಾರ್ಯಕ್ರಮದಲ್ಲಿ ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗಂಗಾಧರ ದೊಡ್ಡಮನಿ ಅವರು,

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಶಾಂತಕುಮಾರ್ ಸುರಪುರ ಅವರು,ದಲಿತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾದ
ಶ್ರೀ ಶರಣಪ್ಪ ಆಮದಿಹಾಳ ಅವರು, ಪ್ರಗತಿ ಪರ ರೈತರಾದ ಶ್ರೀ ಚನ್ನಪ್ಪಗೌಡ ನಾಡಗೌಡ ಅವರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ರಹಿಮಾನಸಾಬ ದೊಡ್ಡಮನಿ ಅವರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ ಬಿಜ್ಜಳ, ಅವರು ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಶ್ರೀ ಮಹಾಂತೇಶ ನರಗುಂದ, ಅವರು ತಾಲೂಕು ಪಂಚಾಯತ ಮಾಜಿ ಉಪಾಧ್ಯಕ್ಷರಾದ ಶ್ರೀ ಶಂಕ್ರಪ್ಪ ನೇಗಲಿ ಅವರು, ವಿ ಎಮ್ ನಿರ್ದೇಶಕರಾದ ಶ್ರೀ ಶಿವಾನಂದ ಕಂಠಿ ಅವರು,

ಪುರಸಭೆ ಅಧ್ಯಕ್ಷರಾದ ಶ್ರೀ ಶರಣು ಬೆಲ್ಲದ ಅವರು, ನಿವೃತ್ತಿ ಪ್ರಾಚಾರ್ಯರಾದ ಶ್ರೀ ಶಿವಾನಂದ ಮುಚಖಂಡಿ ಅವರು, ಶ್ರೀ ಅಮರೇಶ ನಾಗೂರ ಅವರು ಮಾತನಾಡಿದರು. ಸಭೆಯಲ್ಲಿ ಪದವೀಧರರ ಕ್ಷೇತ್ರದ ಮತದಾರರು,ಶಿಕ್ಷಕರ ಕ್ಷೇತ್ರದ ಮತದಾರರು ಜಿಲ್ಲಾ ಪಂಚಾಯತ ಮಾಜಿ ಸದಸ್ಯರು, ಮಾಜಿ ತಾಲೂಕು ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು, ನಗರಸಭೆ ಸದಸ್ಯರು, ಪುರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಯುವ ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು, ಉಪಸ್ಥಿತರಿದ್ದರು.
