
ಇಲಕಲ್ಲ; ಗ್ರಾಮ ಪಂಚಾಯತಿ ಎಂದರೆ ಸಾರ್ವಜನಿಕ ರಂಗದಲ್ಲಿ ಹೆಸರು ಕೇಳಿದರೆ ಭ್ರಷ್ಟಾಚಾರದ ಕೊಂಪೆ,ಅಸಮರ್ಥ ಆಡಳಿತಗಾರಿಂದ ಗ್ರಾಮಗಳ ಅಭಿವೃದ್ಧಿ ಶೂನ್ಯ,ಇಡೀ ಗ್ರಾಮ ಇಂದು ರಾಜ್ಯದ 576 ಗ್ರಾಮ ಪಂಚಾಯತಿಗಳಲ್ಲಿ ಶೇಖಡಾ: 300 ಗ್ರಾಮ ಪಂಚಾಯತಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹಾಳು ಕೊಂಪೆಯಾಗಿವೆ. ಗ್ರಾಮದ ಅಭಿವೃದ್ಧಿ ಬಗ್ಗೆ ಒಂದೆ ಪಂಚಾಯತಿ ಸದಸ್ಯರಿಂದ ವಯಕ್ತಿಕ ರಾಜಕೀಯ ಪಕ್ಷಗಳ ತಿಕ್ಕಾಟದಲ್ಲಿ ಇಂದು ಗ್ರಾಮಗಳು ಅಭಿವೃದ್ಧಿಯಿಂದ ಕುಂಠಿತವಾಗಿವೆ, ಹಲವಾರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕೂಡ ವಿವಿಧ ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಅಮಾನತುಗೊಂಡು ತನಿಖೆಯನ್ನು ಎದುರಿಸುತ್ತಿದ್ದಾರೆ, ಇಂತಹ ಭ್ರಷ್ಟ ಅಧಿಕಾರಿಗಳ ಸಾಲಿನಲ್ಲಿ ಇನ್ನೂ ಕೆಲವೊಂದು ಅಧಿಜಾರಿಗಳು ಎಷ್ಟೇ ಪ್ರಾಮಾಣಿಕತಿಂದ ಸಾರ್ವಜನಿಕ ರಂಗದಲ್ಲಿ ಹಗಲು – ರಾತ್ರಿ ಕೆಲಸ ಮಾಡಿದರೂ ಸಹ ಒಮ್ಮೊಮ್ಮೆ ಜನ ಕೆಲವು ಸುಳ್ಳು ಆರೋಪಗಳಲ್ಲಿ ಅಧಿಕಾರಿಯನ್ನು ಸಿಲುಕಿಸಲು ನೋಡುತ್ತಾರೆ. ಇಂತಹ ಸಾಲಿನಲ್ಲಿ ಇಲಕಲ್ಲ ತಾಲ್ಲೂಕಿನ ಗುಡೂರು ಎಸ್,ಸಿ, ಗ್ರಾಮದ ಆಡಳಿತ ಅಧಿಕಾರಿ ಶೌಖತ್ಅಲಿ ಮುರನಾಳ ಅವರು ಕೇವಲ ಈ ಪಂಚಾಯತಿಗೆ ಬಂದು ಐದೇ ತಿಂಗಳಲ್ಲಿ ಸಾರ್ವಜನಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ಮುರನಾಳ ಅವರು ಪ್ರತಿ ವಾರ್ಡಿನ ಸ್ವಚ್ಚತೆ ಹಾಗೂ ಚರಂಡಿ ,ಬಿದಿ ದೀಪ,ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಜನತೆಗೆ ತೊಂದರೆ ಆಗದಂತೆ ಪಂಚಾಯತಿ ಸಿಬ್ಬಂದಿಗಳಿಗೆ ಕಟ್ಟು ನಿಟ್ಟಾಗಿ ಆದೇಶ ಮಾಡಿದ್ದಾರೆ. ಸುಮಾರು ತಿಂಗಳಿಂದ ಸಾರ್ವಜನಿಕರು ವಿವಿಧ ಮನೆ ಉತಾರ, ಕಂಪ್ಯೂಟರ್ ಉತಾರ, ,ಖಾಲಿ ಪ್ಲಾಟ್ ದಾಖಲೆಗಳ ಸಲುವಾಗಿ ಅಲೆದಾಡಿ ಸುಸ್ತಾಗಿದ್ದ ಜನತೆ ಇಂದು ನೀರಾಂತಕವಾಗಿ ದಿನದ ಯಾವದೇ ಸಮಯದಲ್ಲಿ ಅಭಿವೃದ್ಧಿ ಅಧಿಕಾರಿ ಪಂಚಾಯತಿಯಲ್ಲಿ ಸಿಗುವುದರಿಂದ ತಕ್ಷಣ ಎಲ್ಲಾ ದಾಖಲೆ ಪಡೆಯುತ್ತಿದ್ದಾರೆ. ಇದರಿದ ಇಂತಹ ಅಧಿಕಾರಿಯ ಕಾರ್ಯಕ್ಷಮೆತೆ ಹಾಗೂ ಧಕ್ಷತೆಯಿಂದ ಕಾರ್ಯ ನಿರ್ವಹಿಸುವ ಶಖತ್ ಅಲಿ ಅವರ ಬಗ್ಗೆ ಜನ ಉತ್ತಮ ಪ್ರಶೌಂಸೆ ವ್ಯಕ್ತಪಡಿಸಿದ್ದಾರೆ. ಗ್ರಾಮದ ಪ್ರತಿ ವಾರ್ಡಿನ ಸಿಸಿ ರಸ್ತೆ, ಹದಗೆಟ್ಟ ರಸ್ತೆಗಳ ಮಾಹಿತಿ ಸಂಗ್ರಹಿಸಿ ಗ್ರಾಮದ ಸಮಗ್ರ ಅಭಿವೃದ್ಧಿ ಬಗ್ಗೆ ಎಲ್ಲಾ ಸದಸ್ಯರು ಒಗ್ಗಟ್ಟಿನ ಮಂತ್ರ ಘೋಸಿಸಿದ್ದಾರೆ. ಯಾವುದೆ ಒಂದು ಗ್ರಾಮದ ಅಭಿವೃದ್ಧಿಯ ಹಿಂದೆ ಒಬ್ಬ ಪ್ರಾಮಾಣಿಕ ಅಧಿಕಾರಿಯ ಕಾರ್ಯ ಕ್ಷಮೆತೆ ಅಡಗಿರುತ್ತದೆ. ಜನತೆ ಬರಿ ಅವರ ಸಣ್ಣ ಸಣ್ಣ ತಪ್ಪುಗಳನ್ನೆ ಎತ್ತಿ ಮಾನ ಹರಣ ಮಾಡುವುದಕಿಂತ ಸಾರ್ವಜನಿಕ ರಂಗದಲ್ಲಿ ಗ್ರಾಮದ ಅಭಿವೃದ್ಧಿ ಬಗ್ಗೆ ಅಧಿಕಾರಿಯ ಚಿಂತನೆಗಳು ಹೇಗಿವೆ,ಅವರು ಬಂದ ನಂತರ ಗ್ರಾಮದಲ್ಲಿ ಬದಲಾವಣೆ ಏನಾಗಿದೆ,ಪ್ರಜ್ಞಾವಂತ ನಾಗರಿಕರು ಈ ಬಗ್ಗೆ ಚಿಂತನೆ ಮಾಡಬೇಕು. ಗ್ರಾಮಗಳ ಸಮಗ್ರ ಅಭಿವೃದ್ಧಿ ಬರೀ ಅಧಿಕಾರಿ ಹಾಗೂ ಸದಸ್ಯರಿಂದ ಸಾಧ್ಯವಿಲ್ಲ ಇದಕ್ಕೆ ಸ್ವತಹ ಸಾರ್ವಜನಿಕರು ಗ್ರಾಮ ಸಭೆಗಳಲ್ಲಿ ಸಲಹೆ ಸೂಚನೆ ನೀಡಿ,ಪ್ರತಿ ವಾರ್ಡಿನ ಅಭಿವೃದ್ಧಿಗೆ ಸಹಕಾರ ನೀಡಿದಾಗ ಮಾತ್ರ ಗ್ರಾಮಗಳು ಸ್ವಚ್ಚ ನಗರವಾಗಿ ಅಭಿವೃದ್ಧಿ ಹೊಂದುತ್ತವೆ, ಈ ನಿಟ್ಟಿನಲ್ಲಿ ಗುಡೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೌಖತ್ ಅಲಿ ಅವರು ಈ ಗ್ರಾಮದಲ್ಲಿ ಹೊಸ ಬದಲಾವಣೆಯ ಅಭಿವೃದ್ದಿಯನ್ನು ಜನರಲ್ಲಿ ಮೂಡಿಸಿದ್ದಾರೆ.ಪ್ರತಿ ಮನೆಗೂ ನಳ,ಶೌಚಾಲಯ, ಜನತೆ ಹಾಗೂ ಎಲ್ಲಾ ಸದಸ್ಯರು ಇವರಿಗೆ ಸಹಕಾರ ನೀಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕೈ ಜೊಡಿಸಿ ಬಯಲು ಶೌಚಾಲಯ ಮುಕ್ತ ಗ್ರಾಮ ಹಾಗೂ ಅಭಿವೃದ್ಧಿಯಲ್ಲಿ ತಾಲೂಕಿನ ನಂಬರ್ ಒನ್ ಗ್ರಾಮ ಪಂಚಾಯತಿ ಮಾಡಲು ಶೌಖತ್ಅಲಿ ಅವರು ಕನಸು ಕಂಡಿದ್ದಾರೆ. ಇಷ್ಟು ವರ್ಷಗಳಲ್ಲಿ ಈಗ ಒಬ್ಬ ನಿಷ್ಟಾವಂತ ಅಭಿವೃದ್ಧಿ ಅಧಿಕಾರಿ ಈ ಗ್ರಾಮಕ್ಕೆ ಬಂದಿದ್ದಾರೆ, ಇವರಿಂದ ಜನತೆ ಕೆಲಸ ಪಡೆದು ಮಾದರಿ ಗ್ರಾಮ ಮಾಡಲು ನಮ್ಮ BB News ಬಯಸುತ್ತದೆ .



ಹೊಳೆಯುವ ರಸ್ತೆಗೆ ರಾತ್ರಿ ಸೋಲಾರ ಲೈಟ್
ಹೀಗೆ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಗನ್ನು ನೋಡಲು ನಮ್ಮ BB News ಚಾನಲ್ ವೀಕ್ಷಣೆ ಮಾಡಿ.
ವರದಿ : ಬಸವರಾಜ್ ತುಂಬರಮಟ್ಟಿ. ಪೊನ್ ನಂ: 8050585047