ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಹದಿ ಹರೆಯದವರಿಗೆ ಉತ್ಸಾಹ, ಹುರುಪನ್ನು ತುಂಬುವ ಹಬ್ಬಗಳ ಪೈಕಿ ಬಹುಶಃ ಮಂಚೂಣಿಯಲ್ಲಿ ನಿಲ್ಲುತ್ತದೆ ಬಣ್ಣದ ಹಬ್ಬ. ಈ ಸುಂದರ ಬಣ್ಣಗಳ ಹಬ್ಬವು ರಂಗು ರಂಗಾದ ವಾತಾವರಣವನ್ನು ಸೃಷ್ಟಿಸಿ ಆಡುವವರಲ್ಲಿ ಮತ್ತೇರಿಸುತ್ತದೆ. ಕೊರೊನಾ ತಡೆಗೆ ಬಹುತೇಕ ಹಬ್ಬಗಳು ಸಾಂಪ್ರದಾಯಕ್ಕೆ ಮಾತ್ರ ಸೀಮಿತವಾಗಿದ್ದು ಏ.೧೪ ಮತ್ತು ೧೫ರಂದು ನಡೆಯುವ ಬಣ್ಣದಾಟವೂ ಸಹ ಸಂಪ್ರದಾಯ ಮಾತ್ರ ನೆನಪಿಸುವಂತಿರಲಿ ಎಂದು ಪಿಎಸ್‌ಐ ಎಂ.ಜಿ.ಕುಲಕರ್ಣಿ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಬಣ್ಣದಾಟದ ಶಾಂತಿ ಸಭೆಯಲ್ಲಿ PSI ಎಂ.ಜಿ.ಕುಲಕರ್ಣಿ ತಿಳಿಸಿದರು. ದೇಶದಲ್ಲಿ ಕೊರೊನಾ ೨ನೇ ಅಲೆ ಹೆಚ್ಚಾಗಿದೆ. ಅಲ್ಪ ಆಯ ತಪ್ಪಿದರೂ ಸಮುದಾಯಕ್ಕೆ ಒಕ್ಕರಿಸುವ ಅಪಾಯ ಬಂದೊದಗಿದೆ. ಇಂತಹ ಅವಧಿಯಲ್ಲಿ ಹಬ್ಬಗಳು ಸಾಂಪ್ರದಾಯಿಕವಾಗಿ ನಡೆಯುವಂತಾಗಬೇಕು ಎಂದರು.
ಯುಗಾದಿ ನಿಮಿತ್ತ ನಡೆಯುವ ಬಣ್ಣದಾಟ ಮನೆ ಸದಸ್ಯರು ಹಾಗೂ ಮನೆ ಆವರಣದೊಳಗೆ ಸೀಮಿತವಾಗಿರಲಿ. ಜಾತ್ರೆ, ಉತ್ಸವಗಳು ಪೂಜೆ ಹಾಗೂ ಅಭಿಷೇಕಕ್ಕೆ ಮಾತ್ರವಿರಲಿ. ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಸರಕಾರದ ನಿಯಮ ಎನ್ನುವ ಬದಲಾಗಿ ನಮ್ಮ ಜೀವ ಕಾಪಾಡಿಕೊಳ್ಳಲು ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸೋಣ ಎಂದು ಹೇಳಿದರು.

ಸಭೆಯಲ್ಲಿ ಅಮೀನಗಡದ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಜ್ಮೀರ ಮುಲ್ಲಾ, ಪಪಂ ಸದಸ್ಯ ಗುರುನಾಥ ಚಳ್ಳಮರದ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಹಾಸೀಂಪೀರ ಫಿರಜಾದೆ, ಅಮರೇಶ ಮಡ್ಡಿಕಟ್ಟಿ, ಡಿ.ಪಿ.ಅತ್ತಾರ, ಪಪಂ ಸದಸ್ಯ ವಿಜಯಕುಮಾರ ಕನ್ನೂರ, ಮಹಾಂತೇಶ ಹಿರೇಮಠ, ಪರಶುರಾಮ ಪುರ್ತಗೇರಿ, ಮತ್ತು ಸುತ್ತಮುತ್ತಲಿನ ಸಮಸ್ತ ನಾಗರಿಕರು ಉಪಸ್ಥಿತಿ ಇದ್ದರು.
ವರದಿ : ಮುಸ್ತಾಪ್ ಮಾಸಾಪತಿ