Breaking News

ಉತ್ತರ ಕೊರಿಯಾ ಸರ್ವಧಿಕಾರಿ ಕಿಮ್ ಜಾಂಗ್‌ ಉನ್‌ ನಿಧನ? ಶೀಘ್ರದಲ್ಲೇ ಘೋಷಣೆ ಸಾಧ್ಯತೆ?

ಒಂದೊಮ್ಮೆ ಉನ್‌ ಸತ್ತಿರುವುದು ನಿಜವಾಗಿ­ದ್ದರೂ ಅವರ ಉತ್ತರಾಧಿಕಾರಿ ನೇಮಕವಾದ ಬೆನ್ನಲ್ಲೇ ಸಾವಿನ ಸುದ್ದಿ ಘೋಷಿಸುವ ಸಾಧ್ಯತೆಗಳಿವೆ. 36 ವರ್ಷದ ಕಿಮ್‌ ಜಾಂಗ್‌ ಉನ್‌ ಕಳೆದ ಕೆಲವು ತಿಂಗಳಿಂದ ಸಾರ್ವಜನಿಕ­ವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಗೆ ತೀವ್ರ­ತರದ ಆರೋಗ್ಯ ಸಮಸ್ಯೆಗಳಿದ್ದು ಇತ್ತೀಚೆಗೆ ಕೋಮಾಗೆ ಜಾರಿದ್ದಾರೆಯೇ ಹೊರತು ಸತ್ತಿಲ್ಲ ಎಂದು ದ.ಕೊರಿಯಾದ ಅಧ್ಯಕ್ಷರಿಗೆ ರಾಜಕೀಯ ಕಾರ‍್ಯದರ್ಶಿ­ಯಾಗಿದ್ದ ಚಾಂಗ್‌ ಸಾಂಗ್‌ ಮಿನ್‌ ಹೇಳಿಕೆ ನೀಡಿದ್ದರು. 

ಪಿಯಾಂಗ್‌ಯಾಂಗ್‌: ಉತ್ತರ ಕೊರಿ­ಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು ಕೋಮಾಗೆ ಜಾರಿದ್ದಾರೆಂಬ ವರದಿಗಳ ಮಧ್ಯೆಯೇ ಅವರು ಮೃತಪಟ್ಟಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಸರ್ವಾ­­ಧಿಕಾರಿ ವ್ಯವಸ್ಥೆ ಇರುವಂತಹ ಉತ್ತರ ಕೊರಿಯಾ ಆಡಳಿತ ಈ ವಿಚಾರದಲ್ಲಿಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಒಂದೊಮ್ಮೆ ಉನ್‌ ಸತ್ತಿರುವುದು ನಿಜವಾಗಿ­ದ್ದರೂ ಅವರ ಉತ್ತರಾಧಿಕಾರಿ ನೇಮಕವಾದ ಬೆನ್ನಲ್ಲೇ ಸಾವಿನ ಸುದ್ದಿ ಘೋಷಿಸುವ ಸಾಧ್ಯತೆಗಳಿವೆ. 36 ವರ್ಷದ ಕಿಮ್‌ ಜಾಂಗ್‌ ಉನ್‌ ಕಳೆದ ಕೆಲವು ತಿಂಗಳಿಂದ ಸಾರ್ವಜನಿಕ­ವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಗೆ ತೀವ್ರ­ತರದ ಆರೋಗ್ಯ ಸಮಸ್ಯೆಗಳಿದ್ದು ಇತ್ತೀಚೆಗೆ ಕೋಮಾಗೆ ಜಾರಿದ್ದಾರೆಯೇ ಹೊರತು ಸತ್ತಿಲ್ಲ ಎಂದು ದ.ಕೊರಿಯಾದ ಅಧ್ಯಕ್ಷರಿಗೆ ರಾಜಕೀಯ ಕಾರ‍್ಯದರ್ಶಿ­ಯಾಗಿದ್ದ ಚಾಂಗ್‌ ಸಾಂಗ್‌ ಮಿನ್‌ ಹೇಳಿಕೆ ನೀಡಿದ್ದರು. ಇದಾದ ಬಳಿಕ ಪತ್ರಕರ್ತ­ರೊಬ್ಬರು ಕಿಮ್‌ ಸತ್ತಿದ್ದು, ಉದ್ದೇಶಪೂರ್ವಕ­ವಾಗಿಯೇ ಅದು ಅಂತಾರಾಷ್ಟ್ರೀಯ ಸಮುದಾಯದಿಂದ ಮುಚ್ಚಿಡುತ್ತಿದೆ ಎಂದು ಹೇಳಿದ ಬೆನ್ನಲ್ಲೇ ಸಾವಿನ ಸುದ್ದಿ ಹರಿದಾಡುತ್ತಿದೆ.

ಸಹೋದರಿಗೆ ಚುಕ್ಕಾಣಿ!
ಕಿಮ್‌ ಜಾಂಗ್‌ ಉನ್‌ ಅನಾರೋಗ್ಯಕ್ಕೆ ಒಳಗಾದ ಬಳಿಕ ಅವರ ಸಹೋದರಿ ಕಿಮ್‌ ಯೋ ಜಾಂಗ್‌ ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡು­ತ್ತಿದ್ದು ಅವರೇ ಮುಂದಿನ ಸರ್ವಾಧಿಕಾರಿ ಎಂದು ಘೋಷಣೆಯಾಗುವ ಸಾಧ್ಯತೆ ಇದೆ. 2011ರಿಂದಲೂ ಉ.ಕೊರಿ­ಯಾದ ಸರ್ವಾಧಿಕಾರಿಯಾಗಿರುವ ಉನ್‌ ಅಮೆರಿ­ಕದ ವಿರುದ್ಧ ಅಣ್ವಸ್ತ್ರ ಪ್ರಯೋಗಕ್ಕೂ ಹಿಂದೆ-­ಮುಂದೆ ನೋಡಲ್ಲ ಎಂದು ಗುಟುರು ಹಾಕಿ­ದ್ದರು.

ಮಾತೆತ್ತಿದರೆ ನ್ಯೂಕ್ಲಿಯರ್‌ ಬಾಂಬ್‌ ಹಾಕ್ತೇವೆ, ಕ್ಷಿಪಣಿ ದಾಳಿ ನಡೆಸುತ್ತೇವೆ ಎಂದು ಅಬ್ಬರಿಸುತ್ತಿದ್ದ ಕಿಮ್‌ ಅವರ ಹುಚ್ಚುತನದ ನಿರ್ಧಾರ­ಗಳಿಂದ ಕೆಲವು ವರ್ಷಗಳ ಹಿಂದೆ ಮೂರನೇ ಮಹಾಯುದ್ಧ ನಡೆಯಲಿ­ದೆಯೇ ಎಂಬ ಭೀತಿ ಉಂಟಾಗಿತ್ತು. ಆದರೆ ಸಿಂಗಾಪುರ­ದಲ್ಲಿ 2018ರಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿಅಮೆರಿಕ ಅಧ್ಯಕ್ಷ ಟ್ರಂಪ್‌ ಹಾಗೂ ಕಿಮ್‌ ಜಾಂಗ್‌ ಉನ್‌ ಪರಸ್ಪರ ಮುಖಾಮುಖಿ­ಯಾಗಿ ಭಿನ್ನಾ­ ಭಿಪ್ರಾಯ ಶಮನಗೊಳಿಸಲು ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದರು. ಈ ಮೂಲಕ ಯುದ್ಧ ಕಾರ್ಮೋಡದ ಆತಂಕಕ್ಕೆ ತೆರೆ ಎಳೆಯಲಾಗಿತ್ತು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.