ವಾಷಿಂಗ್ಟನ್, ಆ.೨೮- ಕೊರೊನಾ ಸೋಂಕಿತರ ಪೈಕಿ ಅಗ್ರಸ್ಥಾನದಲ್ಲಿರುವ ಅಮೆರಿಕದಲ್ಲಿ ಕಳೆದ ಒಂದು ವಾರದಿಂದೀಚೆಗೆ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಸರಾಸರಿ ಶೇ. ೧೨ ರಷ್ಟು ಹೊಸ ಸೋಂಕಿನ ಪ್ರಮಾಣ ಕಡಿಮೆಯಾಗಿದೆ.
ಕೊರೊನಾ ಸೋಂಕಿನಿಂದ ಪ್ರತಿನಿತ್ಯ ಸಾವನ್ನಪ್ಪುತ್ತಿರುವವರ ಸಂಖ್ಯೆ ಸರಾಸರಿ ೯೦೦ ಮಂದಿ ಇದ್ದಾರೆ ಎಂದು ಜಾನ್ ಹಾಪ್ ಕಿನ್ ವಿಶ್ವವಿದ್ಯಾಲಯದ ಮಾಹಿತಿ ಬಹಿರಂಗ ಪಡಿಸಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಅಮೆರಿಕದ ರಾಜ್ಯಗಳಾದ ಅರಿಜೋನಾದಲ್ಲಿ ಶೇಕಡಾ ೩೬ರಷ್ಟು, ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ನಲ್ಲಿ ಶೇಕಡ ೨೯ರಷ್ಟು, ಫ್ಲಾರಿಡಾದಲ್ಲಿ ಶೇ.೨೬ ರಷ್ಟು ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ.
ಕಳೆದ ಒಂದು ವಾರದಿಂದ ಈಚೆಗೆ ವಿವಿಧ ರಾಜ್ಯಗಳಲ್ಲಿ ಕೊರೊನಾ ಹೊಸ ಪ್ರಕರಣಗಳು ಕಡಿಮೆಯಾಗುತ್ತಿರುವ ನಡುವೆಯೇ ಇಂಡಿಯಾನಾ ,ಉತ್ತರ ಡಕೋಟಾ, ಮಿಡ್ ವೆಸ್ಸ್,ಕಾನ್ಸಾಸ್ ವಿವಿಧ ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ.
ನಾರ್ಥ್ ಡಕೋಟಾ ದಲ್ಲಿ ಕಳೆದ ದಿನಗಳಲ್ಲಿ ಸರಾಸರಿ ಶೇಕಡ ೨೮ರಷ್ಟು ಹೊಸ ಪ್ರಕರಣಗಳೊಂದಿಗೆ ಒಂದು ಲಕ್ಷ ಮಂದಿಗೆ ಕಾಣಿಸಿಕೊಂಡಿದೆ ಅದೇರೀತಿ ನಾವು ಕನ್ಸಾಸ್ ನಲ್ಲಿ ದಾಖಲೆ ಪ್ರಮಾಣದ ಸೋಂಕಿನ ಪ್ರಕರಣಗಳು ದಾಖಲಾಗಿವೆ.
೪೪೧೦೯ ಹೊಸ ಪ್ರಕರಣ:
ನಿತ್ಯ ವಿಶ್ವದಲ್ಲಿ ದಾಖಲಾಗುತ್ತಿರುವ ಕೊರೊನಾ ಸೋಂಕಿತರ ಪೈಕಿ ಭಾರತ ಅಗ್ರಸ್ಥಾನದಲ್ಲಿದೆ .ಭಾರತದಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿದಿನ ಸರಾಸರಿ ೭೦ ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲುತ್ತಿದೆ.
ಅಮೆರಿಕದಲ್ಲಿ ಕಳೆದ ೨೪ ಗಂಟೆಗಳಲ್ಲಿ ೪೪ ೧೦೯ ಹೊಸ ಪ್ರಕರಣಗಳು ದಾಖಲಾಗಿದ್ದು ೧,೨೨೨ ಸಾವನ್ನಪ್ಪಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಅಮೆರಿಕದಲ್ಲಿ ಇದುವರೆಗೂ ೫೮ ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ೧ಕ್ಷದ ೮೦ ಸಾವಿರಕ್ಕೂ ಅಧಿಕ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಚಂಡಮಾರುತ ಅವಾಂತರ: ಒಂದೆಡೆ ಕೊರೊನಾ ಸಾವು ಮತ್ತು ಸೋಂಕಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಅಮೆರಿಕದ ವಿವಿಧ ರಾಜ್ಯಗಳಲ್ಲಿ ಚಂಡಮಾರುತ ಕಾಣಿಸಿಕೊಂಡು ಜನರು ಮತ್ತಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ ಗಂಟೆಗೆ ೧೫೦ ಕಿಲೋಮೀಟರ್ ವೇಗದಲ್ಲಿ ಗಾಳಿ ಬಿಸಲಿನಲ್ಲಿ ಸಮುದ್ರ ತೀರ ಪ್ರದೇಶದಲ್ಲಿರುವ ಜನರು ಸಮಸ್ಯೆಗೆ ಸಿಲುಕಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News