ಇಲಕಲ್ಲ: ಭಿನ್ನಮತ ದಮನಕ್ಕೆ ಸರಕಾರ ಈಡಿ ಹಾಗೂ ಇತರ ಏಜೆನ್ಸಿಗಳನ್ನು ಅಸ್ತ್ರವಾಗಿ ದುರ್ಬಳಕೆ ಮಾಡುವುದನ್ನು ನಿಲ್ಲಿಸಬೇಕೆಂದು ಕೋರಿ ಇಂದು ಇಲಕಲ್ಲ ನಗರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಇಂದು ಪ್ರತಿಭಟನೆ ಮಾಡಿದರು.

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಸರಕಾರವನ್ನು ವಿರೋಧಿಸುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಘಟನೆಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಇತರ ಸರಕಾರಿ ಏಜೆನ್ಸಿಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಇಡಿ ನಡೆಸಿರುವ ದಾಳಿಗಳೂ ಇದರ ಮುಂದುವರಿದ ಭಾಗವೆಂಬುದು ಸ್ಪಷ್ಟವಾಗಿದೆ. ಈ ದಾಳಿ ಮತ್ತು ಶೋಧನೆಗಳು ಏಜೆನ್ಸಿಯು ಸ್ವತಂತ್ರವಾಗಿ ಕಾರ್ಯಾಚರಿಸುತ್ತಿಲ್ಲ, ಬದಲಾಗಿ ಆರೆಸ್ಸೆಸ್ ಮತ್ತು ಬಿಜೆಪಿಯ ಅಸ್ತ್ರವಾಗಿ ಕಾರ್ಯಾಚರಿಸುತ್ತಿದೆ ಎನ್ನುವುದನ್ನು ತೋರಿಸುತ್ತಿದೆ.

ಆರೆಸ್ಸೆಸ್ ನ ಜನವಿರೋಧಿ ಸಿದ್ಧಾಂತದ ವಿರುದ್ಧ ರಾಜಿಯಿಲ್ಲದ ನಿಲುವು ಹೊಂದಿರುವ ಕಾರ್ರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬೇಟೆಯಾಡಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಮುಸ್ಲಿಮರು ಸೇರಿದಂತೆ ಮೂಲೆಗೆ ತಳ್ಳಲ್ಪಟ್ಟ ಎಲ್ಲಾ ಸಮುದಾಯಗಳ ಸಬಲೀಕರಣಕ್ಕಾಗಿ ದುಡಿಯುವ ಸಂಘಟನೆಯಾಗಿದೆ, ಸಾರ್ವಜನಿಕರ ದೇಣಿಗೆಯನ್ನು ಆಧರಿಸಿರುವ ಸಂಘಟನೆಯಾಗಿ ಅದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ಸರಕಾರಿ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಈಡಿ ಅತ್ಯಂತ ಕನಿಷ್ಟ ಹಣಕಾಸಿನ ಮೂಲ ಮತ್ತು ವ್ಯವಹಾರಗಳನ್ನು ಹೊಂದಿರುವ ಗುಂಪುಗಳ ಹಿಂದೆ ಓಡುತ್ತಿದೆ. ಆರೆಸ್ಸೆಸ್ ಮತ್ತು ಬಿಜೆಪಿಯ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುತ್ತಿರುವ ದೊಡ್ಡ ಕಾರ್ಪೊರೇಟ್‌ಗಳು, ರಾಜಕೀಯ ಗುಂಪುಗಳು ಮತ್ತು ಎನ್.ಜಿ.ಒಗಳನ್ನು ಈಡಿ ಮುಟ್ಟಲೂ ಭಯಪಡುತ್ತಿದೆ. ಬಿಜೆಪಿ ಪಕ್ಷವು ಎಲೆಕ್ಟೋರಲ್ ಬಾಂಡ್ ನೆಪದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಶೇಖರಿಸಿಟ್ಟಿದ್ದು, ಸ್ವತಂತ್ರ ಏಜೆನ್ಸಿಯೆಂದು ಕರೆದುಕೊಳ್ಳುವ ಈಡಿ ಆ ಪಕ್ಷದ ವಿರುದ್ಧದಾಳಿ, ತನಿಖೆ ಅಥವಾ ಕ್ರಮವನ್ನು ಕೈಗೊಳ್ಳದಿರುವುದು ಅದರ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಯನ್ನು ಮೂಡಿಸಿದೆ.

ಕೇಂದ್ರ ಸರಕಾರದ ಅನತೆಯಂತೆ ಇಡಿ ಸಂಸ್ಥೆ ಹಾಗೂ ಆರ್,ಎಸ್,ಎಸ್ ಕಾರ್ಯ ನಿರ್ವವಹಿಸಿ ,PFI ಸಂಘಟನೆಯನ್ನು ಮೂಲೆ ಗುಂಪು ಮಾಡುತ್ತಿವೆ,ಇದು ಸಂವಿಧಾನದ ವಿರೋಧಿ ಚಟುವಟಿಕೆಯಾದೆ ಎಂದು PFI ಸಂಘಟನೆಯ ಕಾರ್ಯಕರ್ತರು ಇಂದು ಇಲಕಲ್ಲ ತಾಲೂಕಿನಲ್ಲಿ ಪ್ರತಿಭಟನೆ ಮಾಡಿ ರಾಷ್ಟಪತಿಗಳಿಗೆ ತಹಶಿಲ್ದಾರರ ಮೂಲಕ ಮನವಿ ಮಾಡಿದರು, ಈ ಸಂಧರ್ಭದಲ್ಲಿ ಸಂಘಟನೆಯ ಪ್ರಮುಖರಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇಲಕಲ್ಲ ಘಟಕದ ಅಧ್ಯಕ್ಷರಾದ ರಿಯಾಜ್ ಮೆಹಬೂಬ್ ಸಾಬ್ ಭನ್ನು ಉಪಾಧ್ಯಕ್ಷರು ಮಹಮ್ಮದ್ ರಫೀಕ್ ನದಾಫ್ ರಂಜಾನ್ ಕಡಿವಾಳ ರಿಯಾಜ್ ಬಂಗಾರಗುಂಡ ಮಹಮ್ಮದ್ ಹಸನ್ ಭಾಗವಾನ್, ಜಿಲಾನಿ ಜೋಪ ದಾರ ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತಿ ಇದ್ದರು. ವರದಿ : ಮುಸ್ತಾಪ್ ಮಾಸಾಪತಿ