ಅಮೀನಗಡ: ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದ ಶ್ರೀ ಕಾಳಿಕಾದೇವಿ,ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಂದ ರಾಷ್ಟ್ರಧ್ವಜ ತಯಾರಿಸುತ್ತಿದ್ದಾರೆ. ಕೇಂದ್ರ ಸರಕಾರದ ಆದೇಶದಂತೆ ಭಾರತದ ಪ್ರತಿಯೊಬ್ಬ ನಾಗರಿಕರು ದೇಶ ಭಕ್ತರು,ದೇಶಾಭಿಮಾನಿಗಳು ಐದು ದಿನಗಳ ಕಾಲ ಅವರ ಅವರ ಮನೆಯ ಮೇಲೆ ನಮ್ಮ ಹೆಮ್ಮಯ ರಾಷ್ಟ್ರ ಧ್ವಜ ರಾರಾಜೀಸಬೇಕು. ಎಂದು ಪ್ರತಿ ತಾಲೂಕಿನ ವಿವಿಧ ಮಹಿಳಾ ಸಂಘಗಳು,ನಹಿಳಾ ಒಕ್ಕೂಟಗಳಿಗೆ ರಾಷ್ಟ್ರ ಧ್ವಜ ತಯಾರಿಸುವ ಕೆಲಸ ನೀಡಿದ್ದು ಪ್ರತಿ ಗ್ರಾಮ ಸಣ್ಣ ಪಂಚಾಯತಿಗೆ ೫೦೦ ರಾಷ್ಟ್ರ ಧ್ವಜ ನೀಡುಲು


ತಿರ್ಮಾಣಿಸಿದ್ದು ಇದರ ಕಾರ್ಯ ಸೂಳೇಭಾವಿಯ ಶಾದಿ ಮಹಲ್ ನಲ್ಲಿ ಮಹಿಳೆಯರು ಎಲ್ಲರೂ ಈ ರಾಷ್ಟ್ರ ಧ್ವಜ ನಿರ್ಮಾಣ ಕಾರ್ಯದಲ್ಲಿ ತೋಡಗಿದ್ದಾರೆ. ಈ ಬಗ್ಗೆ BB News ನೊಂದಿಗೆ ಮಾತನಾಡಿದ ಶ್ರೀಮತಿ ಶಿವಲಿಲಾ ಹರಗಬಲ್ಲ ನಾವು ದುಡಿಮೆ ಮತ್ತು ಹಣಕ್ಕಾಗಿ ಕೆಲಸ ಮಾಡುತ್ತಿಲ್ಲ ನಮ್ಮ ಮಹಿಳಾ ಒಕ್ಕೂಟದ ಸದಸ್ಯರು ಹಗಲು-ರಾತ್ರಿ ಎನ್ನದೆ ನಿರಂತರವಾಗಿ ರಾಷ್ಟ್ರಧ್ವಜಗಳ ತಯಾರಿಕೆಯಲ್ಲಿ ತೋಡಗಿದ್ದೇವೆ,ಭಾರತದ ಪ್ರತಿಯೊಬ್ಬ ನಾಗರಿಕರು ಈ ವರ್ಷದ ೭೫ನೇ ಸ್ವಾತಂತ್ರ್ಯೋ ತ್ಸವನ್ನು ಅದ್ದೂರಿಯಾಗಿ ಪ್ರತಿಯೊಬ್ಬರ ಮನೆಯ ಮೇಲೆ ಧ್ವಜಾ ಹಾರಿಸಿ ತೋರಿಸಬೇಕು ಎಂದರು.
ನಂತರ ಮಾತನಾಡಿದ ಶ್ರೀಮತಿ ಮಹಾದೇವಿ ಎಚ್ ಆಲೂರು ಅವರು ನಾವೆಲ್ಲರೂ ಹಗಲು-ರಾತ್ರಿ ಈ ಹೋಲಿದ ತ್ರೀವರ್ಣ ಧ್ವಜಕ್ಕೆ ಅಶೋಕ ಚಕ್ರದ ಸಿಂಬಾಲ್ ಹಾಕಿ ಧ್ವಜ ತಯಾರಿ ಮಾಡುತ್ತಿದ್ದೇವೆ ತಾವೆಲ್ಲರೂ ತಮ್ಮ ಮನೆಯ ಮೇಲೆ ಈ ಧ್ವಜಾರೋಹಣ ಮಾಡಿ ಇದಕ್ಕೆ ಗೌರವ ನೀಡಬೇಕು ಎಲ್ಲೆಂದರಲ್ಲಿ ಇದನ್ನು ಬಿಸಾಡಬೇಡಿ ಎಂದರು,ಇಲ್ಲಿಗೆ ಬೇಟಿ ನೀಡಿದ ತಾಲೂಕ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮ್ಯಾಗೇರಿ ಅವರು ಧ್ವಜಗಳನ್ನು ನೋಡಿ ಮೆಚ್ವುಗೆ ವ್ಯಕ್ತಪಡಿಸಿ ೧೦,೦೦೦ ಸಾವಿರ ಚಕ್ ನೀಡಿದರು.
ಆದಷ್ಟು ಬೇಗ ಕೆಲಸ ಮಾಡಿ ಕೋಡಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಲೆಕ್ಕಧಿಕಾರಿಗಳು ಹಾಗೂ NRLM ಹಾಗೂ ಶ್ರೀಮತಿ ಅರೀಫಾ ಅತ್ತಾರ ಹಾಗೂ ಶ್ರೀಮತಿ ಸಾವಿತ್ರಿ ಗೌಡರ್ ಶ್ರೀಮತಿ ಕವಿತಾ ಭರಿಗಿ CS.ಉಪಸ್ಥಿತರಿದ್ದರು.
