Breaking News

ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ್ ಅರ್ಪಿಸುವ “ಪ್ರಾಮಿಸ್ ,ಚಿತ್ರೀಕರಣ ಮುಕ್ತಾಯ


  • ವಿಜಯಪುರ : ಮಲಗೊಂಡ ಫಿಲಂ ಎಂಟ್ರಟೈನ್ ಮೆಂಟ್ಸ್ ಅರ್ಪಿಸುವ, ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಪತ್ರಿಕೆಯ ಸಹಯೋಗದಲ್ಲಿ, ಮಾದೇವಿ ಟಿ ಮಲಗೊಂಡ ನಿರ್ಮಾಣದಲ್ಲಿ,ನಟ ವಿಶ್ವಪ್ರಕಾಶ ಮಲಗೊಂಡ ನಾಯಕ ನಟನಾಗಿ ಅಭಿನಯಿಸುತ್ತಿರುವ 6ನೇ ಚಿತ್ರ “ಪ್ರಾಮಿಸ್” ಚಿತ್ರವು
    ಸತತ 10 ದಿನಗಳ ಕಾಲ ಉತ್ತರ ಕರ್ನಾಟಕದ ಸಿಂದಗಿ,ವಿಜಯಪುರ,ಇಂಚಗೇರಿ , ಸುತ್ತಮುತ್ತ ಚಿತ್ರೀಕರಣ ನಡೆಸಿ ಸುಕ್ಷೇತ್ರ ಇಂಚಗೇರಿ ಮಠದಲ್ಲಿ ಮುಕ್ತಾಯಗೊಂಡಿತು.
    ಈ ಸಂದರ್ಭದಲ್ಲಿ ಇಂಚಗೇರಿ ಮಠ ಪೀಠಾಧಿಪತಿ ಶ್ರೀ ಸ ಸ ರೇವಣಸಿದ್ಧೇಶ್ವರ ಮಹಾರಾಜರಿಗೆ ಪ್ರಾಮಿಸ್ ಚಿತ್ರತಂಡದಿಂದ ಸನ್ಮಾನಿಸಲಾಯಿತು. ನಂತರ ಅವರು ಚಿತ್ರತಂಡಕ್ಕೆ ಆಶೀರ್ವದಿಸಿ ಚಿತ್ರವು ಯಶಸ್ವಿಯಾಗಲಿ ಎಂದು ಹಾರೈಸಿದರು.
    ನಂತರ ಮಾತನಾಡಿದ ಹಿರಿಯ ಪತ್ರಿಕೋದ್ಯಮಿ ಟಿ. ಕೆ .ಮಲಗೊಂಡ ಅವರು ಪ್ರಾಮಿಸ್ ಚಿತ್ರವು ಸಂಪೂರ್ಣವಾಗಿ ಯುವ ಉತ್ಸಾಹಿಗಳಿಂದ ನಿರ್ಮಾಣವಾಗುತ್ತಿರುವ ಚಿತ್ರವಾಗಿದ್ದು, ಅತ್ಯುತ್ತಮ ಸಾಮಾಜಿಕ ಸಂದೇಶವನ್ನು ಹೊಂದಿದೆ. ಈ ಚಿತ್ರವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿ, ಎಲ್ಲ ಯುವಕರ ಜನಪ್ರಿಯತೆ ಹೆಚ್ಚಾಗಲಿ ಎಂದು ಶುಭಕೋರಿದರು. ಈ ಸಂದರ್ಭದಲ್ಲಿ ಹಿರಿಯ ಪತ್ರಿಕೋದ್ಯಮಿ ಟಿ ಕೆ ಮಲಗೊಂಡ, ನಿರ್ಮಾಪಕಿ ಮಾದೇವಿ ಟಿ ಮಲಗೊಂಡ, ಚಿತ್ರದ ನಾಯಕ ನಟ ವಿಶ್ವಪ್ರಕಾಶ ಟಿ ಮಲಗೊಂಡ, ಹಿರಿಯ ಕಲಾವಿದ ಸಂತೋಷ ಉಪ್ಪಿನ, ನಿರ್ದೇಶಕ ಲಕ್ಕಿ ಎಸ್ ವಿ, ಮಲ್ಲಿಕಾರ್ಜುನ ಪತ್ತಾರ, ಪವನ್ ಬೂದಿಹಾಳ, ಹನಮಂತ ಐಹೊಳೆ, ಸಿದ್ದು ತಳ್ಳೊಳ್ಳಿ, ಸಚಿನ್ ತಳ್ಳೊಳ್ಳಿ, ಮತ್ತಿತರರು ಉಪಸ್ಥಿತರಿದ್ದರು.
    ಪ್ರಾಮಿಸ್ ಚಿತ್ರದಲ್ಲಿ ನಾಯಕ ನಟನಾಗಿ ವಿಶ್ವಪ್ರಕಾಶ ಟಿ ಮಲಗೊಂಡ, ನಾಯಕಿಯಾಗಿ ಸಾನ್ವಿ, ತಂದೆ ಪಾತ್ರದಲ್ಲಿ ಹಿರಿಯ ಕಲಾವಿದ ಸಂತೋಷ ಉಪ್ಪಿನ, ತಾಯಿ ಪಾತ್ರದಲ್ಲಿ ಮಂಜುಳಾ ಹಿಪ್ಪರಗಿ, ಸ್ನೇಹಿತರಾಗಿ ಲಕ್ಕಿ ಎಸ್ ವಿ, ಪ್ರಿಯಾಂಕ, ಯೋಗಿರಾಜ ಮುಳಗೆ, ಮಲ್ಲು ಎನ್ ವಿ, ನಟಿಯ ಅಣ್ಣನ ಪಾತ್ರದಲ್ಲಿ ವೀರೇಶ್ ರಾಯಚೂರು, ಸಹ ಕಲಾವಿದರಾಗಿ ದತ್ತಾತ್ರೇಯ ಹಿಪ್ಪರಗಿ, ವೀರೇಶ ಎಸ್ ಎಚ್, ಪೃಥ್ವಿ ನಾಯಕ, ಸಿದ್ದು ತಳ್ಳೋಳ್ಳಿ ಸೇರಿದಂತೆ ಇನ್ನಿತರರು ಅಭಿನಯಿಸಿದ್ದಾರೆ. ಲಕ್ಕಿ ಎಸ್ ವಿ ನಿರ್ದೇಶನದಲ್ಲಿ, ರವಿ ಕುಂಟೋಜಿ ಛಾಯಾಗ್ರಹಣ, ಸಂಕಲನ ವಿಕ್ಕಿ, ಸಹಕಾರ ನಿರ್ದೇಶಕ ಪವನ್ ಕುಮಾರ್ ಬೂದಿಹಾಳ, ಸಹ ನಿರ್ದೇಶಕ ಮಲ್ಲು ಎನ್ ವಿ, ಸುಧಾ ಹಾದಿಮನಿ, ಪ್ರೊಡಕ್ಷನ್ಸ್ ಹೆಡ್ ಸಿದ್ದು ತಳ್ಳೋಳ್ಳಿ, ಮೇಕಪ್ ವೀರೇಶ್, ಪೋಸ್ಟರ್ ಡಿಸೈನ್ ಸುಭಾಷ್ ಅರಸ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ ವೀರೇಶ್ ಹಂಡಗಿ, ಹರೀಶ್ ಅರಸು, ಉಮೇಶ್ ಕೆ ಎನ್, ಸೇರಿದಂತೆ ಇನ್ನಿತರರು ತಂಡದಲ್ಲಿದ್ದಾರೆ.

ವರದಿ:ಡಾ.ಪ್ರಭು ಗಂಜಿಹಾಳ
ಮೊ-9448775346

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.