
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಭಾರತೀಯ ಜನತಾ ಪಕ್ಷದ ತಾಲೂಕಿನ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ ಅವರ ಸಾರಥ್ಯದಲ್ಲಿ ಅಪ್ಪು ಅವರ ಎಲ್ಲಾ ಅಭಿಮಾನಿಗಳಿಂದ ಕರ್ನಾಟಕದ ಯುವರತ್ನ ದಿ: ಡಾ: ಪುನಿತರಾಜಕುಮಾರ ಅವರ ೪೭ ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಇಂದು ಶೂಲೇಭಾವಿ ಗ್ರಾಮದ ಭಾವೈಕ್ಯತಾ ಮಹಾದ್ವಾರದ ಮುಂದೆ ಅದ್ದೂರಿಯಾಗಿ ಕೆಕ್ ಮಾಡಿ ಅವರ ಭಾವಚಿತ್ರಕ್ಕೆ ಪುಸ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಕಾಯಿತು.

ಈ ಸರಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗೇಶ ಅವರು ಶೂಲೇಭಾವಿ ಗ್ರಾಮವೆಂದರೆ ಕಲಾವಿದರನ್ನು ಗೌರವಿಸು ತವರೂರು ಹೀಗಾಗಿ ಅವರ ಹುಟ್ಟು ಹಬ್ಬ ಹಾಗೂ ಅವರ ಸಾಮಾಜಿಕ ಸೇವೆ ನೋಡಿ ಇಡೀ ಕರ್ನಾಟಕ ಅಪ್ಪು ಅವರನ್ನು ಮನೆ ಮಗನಂತೆ ಅಂದು ಶೋಕಾಚರಣೆ ಮಾಡಿತ್ತು ಅಂತಹ ಮಹಾನ್ ಕಲಾವಿದನ ನೆನಪಿಗಾಗಿ ಇಂದು ಈ ಸರಮಂಜರಿ ಕಾರ್ಯಕ್ರಮ ಹಮ್ಮಿಕೊಂಡಿದೆ ಇದಕ್ಕೆ ಮೂಲ ಕಾರಣ ನಮ್ಮ ನೀಲಪ್ಪ ಪೂಜಾರಿ ಅವರು ಎಲ್ಲಾರಿಗೂ ಕರೆ ಮಾಡಿ ಒಗ್ಗೂಡಿಸಿ ಈ ಕಾರ್ಯಕ್ರಮ ಮಾಡಲಾಗಿದೆ.

ಇದಕ್ಕೆ ಎಲ್ಲಾ ನಮ್ಮ ಸ್ನೇಹಿತರು ಸಹಕಾರ ನೀಡಿದ್ದಾರೆ,ಈ ವೇದಿಕೆ ಮೂಲಕ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಈರಯ್ಯ ಲೂತಿಮಠ ಶ್ರೀ ಈರಪ್ಪ ಫರಾಳದ,ಶ್ರೀ ಆನಂದ ಮೊಕಾಶಿ,ಶ್ರೀ ಮಹಾಂತೇಶ ಕರಡಿ,ಶ್ರೀ ರಾಘವೇಂದ್ರ ಪೂಜಾರಿ,ಶ್ರೀ ಶ್ರೀಧರ ನೀರಂಜನ ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ಡಿ,ಬಿ ವಿಜಯಶಂಕರ,ಉಪಸ್ಥಿತಿ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ನವಿಲುಕವಿ ಶ್ರೀಹರಿ ಧೂಪದ ಅವರು ನೇರವೇರಿಸಿದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News