
ಬೆಂಗಳೂರು(ನ.15): ಮಾದಕ ವಸ್ತು ಪ್ರಕರಣ ಸಂಬಂಧ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ತಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆಹಾಗೂ ಸಿಹಿ ಕೊಡಿಸುವಂತೆ ರಗಳೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಜೈಲಿನಲ್ಲಿ 50 ದಿನಗಳಿಂದ ಇದ್ದೇವೆ. ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಈಗಲಾದರೂ ಪೋಷಕರನ್ನು ಭೇಟಿಯಾಗಲು ಅವಕಾಶ ಕೊಡಿ’ ಎಂದು ಅಧಿಕಾರಿಗಳಿಗೆ ನಟಿಯರು ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಮನವಿಯನ್ನು ನಯವಾಗಿ ತಿರಸ್ಕರಿಸಿದ ಅಧಿಕಾರಿಗಳು, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೊರಗಿನವರ ಸಂದರ್ಶನವನ್ನು ರದ್ದುಪಡಿಸಲಾಗಿದೆ ಎಂದಿದ್ದಾರೆ.
ಡ್ರಗ್ಸ್ ಮಾಫಿಯಾ: ಡ್ರಗ್ಗಿಣಿಯರ ಜೊತೆ ನಂಟು, ಮತ್ತೊಬ್ಬ ಕಿಂಗ್‌ಪಿನ್‌ಗಾಗಿ ಶೋಧ
ಈ ಮಾತಿನಿಂದ ಮತ್ತಷ್ಟು ಕ್ರುದ್ಧರಾದ ನಟಿಯರು, ‘ನಮಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಹಾಗೂ ಸಿಹಿಯನ್ನು ಕೊಡಿಸಿ’ ಎಂದು ಪಟ್ಟು ಹಿಡಿದು ರಾದ್ಧಾಂತ ಮಾಡಿದ್ದಾರೆ. ಕೊನೆಗೆ ಅಧಿಕಾರಿಗಳು, ಜೈಲಿನಲ್ಲಿ ಹಬ್ಬಕ್ಕೆ ಸಿಹಿ ಮಾಡಿಸಲಾಗುತ್ತದೆ ಎಂದು ಶಾಂತಗೊಳಿಸಿದ್ದಾರೆ ಎನ್ನಲಾಗಿದೆ. ಕರೋನ ಸಲುವಾಗಿ ಯಾರ ಬೇಟಿಗೂ ಅವಕಾಶ ಇಲ್ಲ ಎಂದು ಖಡಕ್ಕಾಗಿ ಹೇಳಿದ ನಂತರ ಸೊಪ್ಪೆ ಮುಖ ಮಾಡಿಕೊಂಡು ಸುಮ್ಮನಾದರು ಎಂದು ತಿಳಿದು ಬಂದಿದೆ, ಈ ಡ್ರಗ್ಸ್ ಜಾಲದ ಕಿಂಗ್ ಪಿನ್ ಗಾಗಿ ತಿರ್ವ ಶೋಧ ಮಾಡುತ್ತಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಐವತ್ತೊಂದು ದಿನಗಳಿಂದ ಜೈಲು ಹಕ್ಕಿಗಳಾಗಿರು ಡ್ರಗ್ಸ್ ಗೀನಿಯರು ಸಧ್ಯಕ್ಕೆ ಬಿಡುಗಡೆ ಭಾಗ್ಯ ಕನಸಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News