ಕೊರೊನಾ ಎರಡನೇ ಅಲೆಯ ಭೀಕರತೆಯ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ವಿಧಿಸಿದ್ದು ಸರ್ಕಾರದ ಮಾರ್ಗಸೂಚಿಯಂತೆ ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ಅಮೀನಗಡ, ಪಟ್ಟಣದ, ಸೂಳೇಭಾವಿ ಗ್ರಾಮದ, ಮುಸ್ಲಿಮರು ಇಂದು (ಶುಕ್ರವಾರ) ಸರಳವಾಗಿ ಈದ್ ಉಲ್ ಫಿತರ್ ಆಚರಿಸಿದ್ದಾರೆ.

ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು, ಬಟ್ಟೆಗೆ ಅತ್ತರ್ ಹಾಕಿ ಮನೆಯಲ್ಲಿ ಮಾಡಿದ ಸಿಹಿ ಸವಿದು ಎಲ್ಲಾ ಮುಸ್ಲಿಮರು ಒಟ್ಟಾಗಿ ಈದ್ ನಮಾಜ್ ಮುಗಿಸಿ, ಪ್ರವಚನ ಕೇಳಿ ಪರಸ್ಪರ ಆಲಿಂಗಿಸಿ, ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಬಳಿಕ ಮನೆಯಲ್ಲಿ ಮಾಡಿದ ಸಿಹಿ ಹಂಚಿ, ಸಂಬಂಧಿಕರು, ಸ್ನೇಹಿತರ ಮನೆಗೆ ಸೌಹಾರ್ದ ಭೇಟಿ ನೀಡುವುದು. ಈ ರೀತಿ ಪ್ರತಿ ವರ್ಷ ರಂಜಾನ್ ಹಬ್ಬವನ್ನು ಮುಸ್ಲಿಮರು ಆಚರಿಸುತ್ತಿದ್ದರು. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಮುಸ್ಲಿಮರು ಮನೆಯಲ್ಲೇ ಹಬ್ಬ ಆಚರಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಈದ್ಗ, ಮಸೀದಿಗಳಿಗೆ ತೆರಳಲಿಲ್ಲ. ಸರಳವಾಗಿ ಆಚರಿಸಿದ್ದಾರೆ.

ಸೆಮಿ ಲಾಕ್ಡೌನ್‌ನಿಂದಾಗಿ ಬಾಗಲಕೋಟೆ ಯಲ್ಲಿ ರಂಜಾನ್ ಸಂಭ್ರಮಾಚರಣೆ ಕಳೆಗುಂದಿತ್ತು. ಅಮೀನಗಡದ ಜಾಮಿಯಾ ಮಸೀದ್, ಮದಿನಾ, ನೂರಾನಿ, ಅತ್ತಾರ, ನೂರಲಕುದಾ, ಬಿಲಾಲ ಮಸೀದ್ ಮುಂತಾದವುಗಳಿಗೆ, ಕೇವಲ ಐದು ಜನರಿಗೆ ಅವಕಾಶ ಕಲ್ಪಿಸಲಾಯಿತು, ಇನ್ನೊ ಅನೇಕ ಮುಸ್ಲಂ ಭಾಂದವರು ತಮ್ಮ ತಮ್ಮ ಮನೆಯಲ್ಲೇ ರಂಜಾನ್ ನಮಾಜ್ ಸಲ್ಲಿಸಿದರು. ಮುಸ್ಲಿಮರು ಸರಕಾರದ ನಿಯಮ ಪಾಲಿಸಿ ಮನೆಯಲ್ಲೇ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.

ಈ ಸರಳ ರಂಜಾನ್ ಹಬ್ಬಕ್ಕೆ ಅನೇಕ ಹಿಂದೂ ಮುಖಂಡರು ಶುಭ ಕೋರಿದರು ಹಾಗೂ ಈ ಸರಳ ರಂಜಾನ್ ಹಬ್ಬ ಆಚರಣೆಗೆ ಯಾವ ಅಡೆ ತಡೆ ಇಲ್ಲದೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲಾಯಿತು ಎಂದು ಅಮೀನಗಡ ನಗರದ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಜ್ಮೀರ್ ಮುಲ್ಲಾ ಹಾಗೂ ಸೊಳೇಭಾವಿ ಗ್ರಾಮದ ಅಲ್ಪಸಂಖ್ಯಾತರ ಮುಖಂಡ ರೈಮನಸಾಬ ದೊಡಮನಿ ತಿಳಿದರು.
ವರದಿ : ಮುಸ್ತಾಫ್ ಮಾಸಾಪತಿ