
ಬೆಳಗಾವಿ : ಉತ್ತರ ಕರ್ನಾಟಕ ದ, ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ ದೇವಿ ಲಕ್ಷಾಂತರ ಭಕ್ತರ ಕುಲ ದೇವತೆ ಕಳೆದ ಕರೋನಾ ಲಾಕಡೌನ್ ನಲ್ಲಿ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿಲ್ಲ ಸುಮಾರು ತಿಂಗಳಿಂದ ದರ್ಶನ ಬಂದ್ ಆದ ಪ್ರಯುಕ್ತ ನೂರಾರು ಸಣ್ಣಪುಟ್ಟ ಅಂಗಡಿಕಾರು,ಉಧ್ಯಮಿದಾರರು,ಲಕ್ಷಾಂತರ ರೂಪಾಯಿ ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ,ಪ್ರತಿ ದಿನ ಸರಾಸರಿ ಲಕ್ಷಾಂತರ ಜನ ಈ ದೇವಿಯ ದರ್ಶನ ಪಡೆಯಲು ರಾಜ್ಯ ಹಾಗೂ ಹೊರ ರಾಜ್ಯದಿಂದ ಭಕ್ತರು ಬರುತ್ತಾರೆ ,ಇದರಿಂದ ಸಾವಿರಾರು ನಿರುದ್ಯೋಗ ಯುವಕರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ, ಕಳೆದ ೨ ವರ್ಷ ಲಾಕಡೌನ್ ಸಾವಿರಾರು ಕೂಲಿ ಕೆಲಸಗಾರರು ,ವ್ಯಾಪಾರಿಗಳು ಬಿದಿಗೆ ಬಿದ್ದಿದ್ದಾರೆ. ಈಗ ಈ ಎಲ್ಲಾ ಭಕ್ತರಿಗೆ ಒಂದು ಸಿಹಿ ಸುದ್ದಿ ಇಂದು ಬೆಳಗಾವಿ ಜಿಲ್ಲಾ ಅಧಿಕಾರಿಗಳು ಇಂದಿನಿಂದ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ದೇವಸ್ಥಾನ ಓಪನ್ ಮಾಡಲು ಸೂಚನೆ ನೀಡಿದ್ದಾರೆ,
ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಬಿದ್ದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲಾಧಿಕಾರಿಗಳು ಈಗ ಮತ್ತೊಂದು ಆದೇಶವನ್ನು ಹೊರಡಿಸಿದ್ದಾರೆ.

ನಿನ್ನೆಯ ದಿನ ಜಿಲ್ಲಾಧಿಕಾರಿಗಳು ಸವದತ್ತಿ ಯಲ್ಲಮ್ಮ ದೇವಿ,ದೇವಸ್ಥಾನ ಹೊರತುಪಡಿಸಿ ಉಳಿದ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದರು. ಆದ್ರೆ ಭಕ್ತರ,ಮತ್ತು ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದು ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲೆಯ ಎಲ್ಲ ಪ್ರಮುಖ ದೇವಸ್ಥಾನಗಳು ಭಕ್ತರ ದರ್ಶನಕ್ಕೆ ಲಭ್ಯವಾಗಿವೆ. ಆದರೆ ಕರೋನಾ ಮುಂಜಾಗ್ರತಾ ಕ್ರಮವನ್ನು ಭಕ್ತರು ಕಡ್ಡಾಯವಾಗಿ ಪಾಲಿಸಿ ಅಂತರ ಕಾಯ್ದುಕೊಂಡು ಕರೋನ ಕಟ್ಟಿ ಹಾಕಲು ಎಲ್ಲರೂ ಜಾಗೃತಿ ಮೂಡಿಸಬೇಕು ಇಲ್ಲವಾದರೆ ಮತ್ತೆ ಕರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಮತ್ತೆ ಕಂಡು ಬಂದರೆ ದರ್ಶನ ಭಾಗ್ಯ ಬಂದ್ ಇದರಿಂದ ಎಷ್ಟು ವ್ಯಾರಿಗಳ ಬದುಕು ಬರಡಾಗುತ್ತದೆ ಎಂಬುದನ್ನು ಭಕ್ತರು ಅರ್ಥ ಮಾಡಿಕೊಂಡು ಅಮ್ಮನ ಗುಡ್ಡಕ್ಕೆ ಬರುವ ಎಲ್ಲಾ ಭಕ್ತರು ಮುಂಜಾಗ್ರತವಾಗಿ ಕರೋನ ನಿಯಮಗಳನ ಪಾಲಿಸಿ ಇದು BB News ಕಳಕಳಿ ,