
ಅಮೀನಗಡ: ಸಮೀಪದ ಶೂಲೇಭಾವಿ ಗ್ರಾಮದಲ್ಲಿ ಇಂದು ಶ್ರೀ ಹುಲಿಗೇಮ್ಮ ದೇವಿ ದೇವಸ್ಥಾನದಲ್ಲಿ ಸಂತಾನ ನಾಗದೇವತೆ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಯಿತು,ನಿನ್ನೆಯಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು ,ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಕೃಷ್ಣಪ್ಪ ಹನಮಂತಪ್ಪ ಕತ್ತಿ(ಶಿಕ್ಷಕರು) ಮತ್ತು ಕುಟುಂಬ ಸದಸ್ಯರಿಂದ ಇಂದು ಬ್ರಾಹ್ಮಿಮಹೂರ್ತದಲ್ಲಿ ಶ್ರೀ ಹುಲಿಗೆಮ್ಮದೇವಿಗೆ ವಿಶೇಷ ಪಂಚಾಮೃತ ಅಭಿಷೇಕ,ಮಹಾ ಪೂಜೆ ಮತ್ತು ವಿಶೇಷ ಅಲಂಕಾರ ಜರುಗಿತು.

ಅಮ್ಮನವರಿಗೆ ದೀಪಾರಾಧನೆ ಮತ್ತು ವಿಶೇಷ ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿತು, ನಿನ್ನೆಯ ದಿನ ನಾಗದೇವರಿಗೆ ಜಲಾದಿವಾಸ,ಧಾನ್ಯದಿವಾಸ,ಪುಷ್ಪಾದಿವಾಸ,ಮತ್ತು ಶಯನಾದಿವಾಸ ಮಾಡಲಾಯಿತು.ಇಂದು ಬ್ರಾಹ್ಮಿ ಮುಹೂರ್ತದಲ್ಲಿ ದೇವಿಗೆ ವಿಶೇಷ ಅಭಿಷೇಕ, ಮಹಾ ಪೂಜಾ ಸೇವಾ, ನಂತರ ಘಣಹೋಮ,ನವಗ್ರಹ ಹೋಮ,ದೇವಿ ಹೋಮ,ನಾಗದೇವತಾ ಹೋಮ

.ನಾಗದೇವರಿಗೆ ಪ್ರಾಣಪ್ರತಿಷ್ಠಾನ ಮಾಡಲಾಯಿತು.ನಂತರ ನಾಗದೇವರಿಗೆ ವಿಶೇಷ ಕಳಶಾಭಿಷೇಕ,ಅಲಂಕಾರ ಪೂಜಾ,ಘಣಹೋಮದ ಪೂರ್ಣಾಹುತಿ ಮಾಡಿದರು.ಶ್ರೀ ಬನಶಂಕರಿ ದೇವಸ್ಥಾನದ ಲಲಿತಾ ಸಹಸ್ರನಾಮ ತಂಡದಿಂದ ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರು.

ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.ಈ ಎಲ್ಲಾ ಕಾರ್ಯಕ್ರಮಗಳು ಶ್ರೀ ಪಿತಾಂಬರ ಸ್ವಾಮಿಗಳು ದೇವಾಂಗಮಠ,ಶ್ರೀ ಮಂಜುನಾಥ ಮುಂಡಾಸದ(ಅರ್ಚಕರು) ಶ್ರೀ ವಿರೇಶ ಕಣಗಿ,ಶ್ರೀ ಬಸವರಾಜ ಜನಿವಾರದ ಇವರ ಮಾರ್ಗದರ್ಶನದಲ್ಲಿ ನಡೆಯಿತು

.ಈ ಎಲ್ಲಾ ಕಾರ್ಯಕ್ರಮಗಳ ಸೇವಾಕರ್ತರು:- ಶ್ರೀ ಕೃಷ್ಣಪ್ಪ ಹನಮಂತಪ್ಪ ಕತ್ತಿ(ಶಿಕ್ಷಕರು) ಹಾಗೂ ಸಹ ಕುಟುಂಬ ಪರಿವಾರದವರು ತಮ್ಮ ಸ್ವಂತ ಖರ್ಚಿನಲ್ಲಿ ಈ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಂತಾನ ಪ್ರಾಪ್ತಿಗಾಗಿ ಹರಿಕೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಖ್ಯಾತ ವಾಸ್ತು ತಜ್ಙರಾದ ಶ್ರೀ ಗಣೇಶ ಕಮ್ಮಾರ ಅವರು ಉಚಿತವಾಗಿ ವಾಸ್ತುಪ್ರಕಾರ ಪಿರಾಮಿಡ್ ಹಾಕಿ ನಾಗದೇವತೆ ಶಕ್ತಿಯನ್ನು ಹಾಗೂ ಶ್ರೀ ಹುಲಿಗೇಮ್ಮದೇವಿ ಶಕ್ತಿಯನ್ನು ಹೆಚ್ಚಿಸಿದರು . ಈ ಸಂದರ್ಭದಲ್ಲಿ ಸೇವಾ ಸಮಿತಿ ವತಿಯಿಂದ ಗಣೇಶ ಅವರಿಗೆ ಸನ್ಮಾನ ಮಾಡಿ ಪೂಜಾ ಫಲ ಪ್ರಸಾದ ನೀಡಿ ಅಭಿನಂದಿಸಿದರು .

ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಸಮಿತಿಯ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಕುರಿ ಹಾಗೂ ಹಿರಿಯರಾದ ಶ್ರೀ ಸಂಗಪ್ಪ ತೋಟದ,ಶ್ರೀ ಹನಮಂತ ಆಲೂರು,ಶ್ರೀ ಮಹಾಂತೇಶ ಹುಲ್ಯಾಳ,ಶ್ರೀ ರೋಮಣ್ಣ ಜನಿವಾರದ, ಶ್ರೀ ಯಲ್ಲಪ್ಪ ಆಲೂರ, ಶ್ರೀ ಶಂಕರ ಎಚ್ ಕತ್ತಿ ಶಿಕ್ಷಕರು,ಹಾಗೂ ಕತ್ತಿ ಯವರ ಕುಟುಂಬದ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.