
ಅಮೀನಗಡ : ಸಮೀಪದ ಕಲ್ಲಗೋನಾಳ ಸರಕಾರಿ ಕಿರಿಯ ಶಾಲೆಯಲ್ಲಿ ಇಂದು BB News ಸುದ್ದಿವಾಹಿನಿ ಸಹಯೋಗದಲ್ಲಿ ಈ ಅಭಿಯಾನ ಕೈಗೊಂಡಿದೆ ಹುನಗುಂದ – ಇಲಕಲ್ಲ ತಾಲೂಕಿನಲ್ಲಿರುವ ಎಲ್ಲಾ ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಕನ್ನಡ ಶಾಲೆಗಳ ಉಳಿವಿಗಾಗಿ ಕನ್ನಡ ಭಾಷೆಯ ಉಳಿವಿಗಾಗಿ ಈ ಅಭಿಯಾನ ಕೈಗೊಡಿದ್ದು ಬಹಳ ಖುಷಿಯಾಗಿದೆ,ಇಲ್ಲಿನ ಎಲ್ಲಾ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ಶ್ರೀ ಸಂಗನಗೌಡ ಬಸನಗೌಡ ಗೌಡರ,ಅವರು ಬಹಳ ಸಹಕಾರ ನೀಡಿದ್ದಾರೆ,ಮಕ್ಕಳ ದಾಖಲಾತಿ ಕೂಡ ಗ್ರಾಮದಿಂದ ಯಾರು ಹೊರಗಡೆ ಶಾಲೆಗೆ ಹೋಗಿಲ್ಲ ಅಂತಹ ಉತ್ತಮ ಶಿಕ್ಷಣವನ್ನು ಇಲ್ಲಿ ನೀಡುತ್ತಿದ್ದೇವೆ ಎಂದು ಶಾಲಾ ಶಿಕ್ಷಕರಾದ ಶ್ರೀ ರಘು ಕುರಿ ಅವರು ಮಾತನಾಡಿದರು, ಸಂಧರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಿ,ಎಲ್, ಕೋಲಕಾರ ಅವರು ಕನ್ನಡ ಭಾಷೆಯು ಸ್ವಂತ ತ್ರ ಪೂರ್ವದಲ್ಲಿ ಅದು ಮೈಸೂರು ಕರ್ನಾಟಕ ,ಮೈಸೂರು ರಾಜ್ಯ ಇತ್ತು ಕ್ರೀ,ಪು, ೬,ನೇ ಶತಮಾನದಲ್ಲಿ ಈ ಕನ್ನಡ ಭಾಷೆ ರೂಡಿಯಲ್ಲಿ ಇತ್ತು, ಹೀಗಾಗಿ ಇಂದಿನ ದಿನಮಾನದಲ್ಲಿ ಅವರ ಅವರ ಉದ್ಯೋಗ ಹಾಗೂ ಅನುಕೂಲ ಸಲುವಾಗಿ ನಮ್ಮ ಭಾಷೆ ಮರೆ ಮಾಚಿ ಬೇರೆ ಬೇರೆ ಭಾಷೆ ಕಲಿತು ಕನ್ನಡ ಮರೆಯುತ್ತಿದ್ದಾರೆ ಅದರಿಂದ ಯಾವಾಗಲು ಪಾಲಕರು ಮಕ್ಕಳಿಗೆ ಎಷ್ಟೇ ಶಿಕ್ಷಣ ಕೊಟ್ಟರೂ ಸಹ ಮೊದಲು ಕನ್ನಡ ಹಾಗೂ ಕನ್ನಡ ಭಾಷೆಯ ಬಗ್ಗೆ ಗೌರವ ಇರಲಿ ಎಂದರು, ನಂತರ ಮಾತನಾಡಿದ ಗ್ರಾಂ,ಪ,ಸದಸ್ಯರಾದ ಶ್ರೀ ನಿಂಗನಗೌಡ ಗೌಡರ ಅವರು ಮಯೂರವರ್ಮನ ಕಾಲದಿಂದ ಅನೇಕ ಅರಸು ಮನೆತನಗಳು ಈ ಕನ್ನಡ ಭಾಷೆಯಲ್ಲಿ ನಮ್ಮ ರಾಜ್ಯವನ್ನು ಆಳಿದ್ದಾರೆ ಕನ್ನಡ ಭಾಷೆಗೆ ಅದರದೇ ಆದ ಪ್ರಾತೀನಿತ್ಯ ಇದೆ, ಬೆಳಗಾವಿ ಯಾವಾಗಲು ಕರ್ನಾಟಕದ ಅವಿಬಾಜ್ಯ ಅಂಗ ಎಂದರು,

ಅನೇಕ ಜನ ಕನ್ನಡ ಹೋರಾಟಗಾರರು ಶ್ರಮಿಸುತ್ತಿದ್ದಾರೆ, ಇಲ್ಲಿನ ಈ ಶಾಲೆಯ ಅಧ್ಯಕ್ಷರು ಶಾಲೆಗೆ ಬೇಕಾದ ಎಲ್ಲಾ ಅನುಕೂಲಕರ ಸೌಲಭ್ಯಗಳನ್ನು ನೀಡಿದ್ದಾರೆ, ಅಲ್ಲದೆ ಗ್ರಾಮದಲ್ಲಿ ಉತ್ತಮವಾಗಿ ಶಿಕ್ಣಣ ವ್ಯವಸ್ಥೆ ರಘು ಸರ್ ಮಾಡಿದ್ದಾರೆ, ಈಗ ಕೋಲಕರ ಸರ್ ಬಂದಿದ್ದಾರೆ,ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ನಾನು ಕೈ ಜೊಡಿಸುತ್ತೇನೆ ಎಂದರು,ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಿ,ಎನ್,ಕೋಲಕರ,ಶಾಲೆಯ SDMC ಅಧ್ಯಕ್ಷ ಶ್ರೀ ಸಂಗನಗೌಡ ಬಸನಗೌಡ ಗೌಡರ,ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ನಿಂಗನಗೌಡ ಬಸನಗೌಡ ಗೌಡರ, ಹುಲಿಗಿನಾಳ ಗ್ರಾಮದ ಶಾಲೆಯ SDMC ಅಧ್ಯಕ್ಷ ಶ್ರೀ ಬೈಲಪ್ಪ ಮಣ್ಣೆರಳ ಹಾಗೂ ಪತ್ರಕರ್ತ ಹನಮಂತ ಹಿರೇಮನಿ ಶಿಕ್ಷಕರಾದ ರಘವೇಂದ್ರ ಕುರಿ ಹಾಗೂ ಮುದ್ದು ಮಕ್ಕಳು ಪಾಲ್ಗೊಂಡಿದ್ದರು.
