Breaking News

ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ

ಬಾಗಲಕೋಟೆ : ಕರ್ನಾಟಕ ಪ್ರದೇಶ ಕುರುಬರ ಸಂಘ ಮಹಿಳಾ ಘಟಕವನ್ನು ಸಂಘಟನಾ ಸಭೆಯು ಇಂದು ಬಾಗಲಕೋಟೆ ನಗರದ ಶ್ರೀ ಭರಮೇಶ್ವರ ದೇವಸ್ಥಾನದಲ್ಲಿ ಯಶಸ್ವಿಯಾಗಿ ನಡೆಯಿತು.ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪ್ರಭಾವತಿ ಕೆ ಆರ್ ರವರ ಅಧ್ಯಕ್ಷತೆಯಲ್ಲಿ ಬಾಗಲಕೋಟೆ ಜಿಲ್ಲೆಯ ಸಿದ್ದಮ್ಮ ಪಾಟೀಲ್, ಕಲಾವತಿ ಆರ್ ಕಾಮತ್, ಕಸ್ತೂರಿ ಲಯದಗುಂದಿ , ಕಮಲಾಕ್ಷಮ್ಮ ಎಚ್ ಗೌಡರ , ಸವಿತ ಪರಶುರಾಮ್ ಅಮರಗೊಂಡ, ಲಕ್ಷ್ಮಿಭಾಯಿ ಪಾಟೀಲ್, ಕಸ್ತೂರಿ ಹೆರಕಲ್ ರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಕಾರ್ಯಕ್ರಮ ದಲ್ಲಿ ಪ್ರಮುಖವಾಗಿ ಶ್ರೀಮತಿ ಮಲ್ಲಿಕಾ ಘಂಟಿ ಯವರು ವಿಶ್ರಾಂತ ಕುಲಪತಿ , ಶ್ರೀಮತಿ ಬಾಯಕ್ಕ ಮೇಟಿ (ಗಂಗೂಬಾಯಿ)ಕಾರ್ಯಧ್ಯಕ್ಷರು. ಕ. ಪ್ರ. ಕು. ಸಂಘ ಮಹಿಳಾ ಘಟಕ, ಶ್ರೀಮತಿ ರಾಧ ಅವಿನಾಶ್ ಜಿ. ಎಸ್.ಸಹ ಸಂಘಟನಾ ಕಾರ್ಯದರ್ಶಿ. ಕ.ಪ್ರ. ಕು.ಸಂ.ಮಹಿಳಾ ಘಟಕ. ಶ್ರೀಮತಿ ಮಹಾದೇವಿ ಕೆ ಕಂಬಳಿ, ಜಂಟಿ ಕಾರ್ಯದರ್ಶಿ ಕ. ಪ್ರ. ಕು. ಸಂ. ಮ. ಘಟಕ.ಕುಮಾರಿ ಮಮತಾ ಭಂಗಿ. ಪ್ರೊಫೆಸರ್ ಮತ್ತು ಸಂಚಾಲಕರು, ಕ. ಪ್ರ. ಕು. ಸಂ. ಮಹಿಳಾ ಘಟಕ ಹಾಗೂ ಬಾಗಲಕೋಟೆ ಜಿಲ್ಲಾ ಕುರುಬ ಸಂಘದ ನಿರ್ದೇಶಕರು, ಸಮುದಾಯದ ಮುಖಂಡರು ಮಹಿಳೆಯರು ಭಾಗವಹಿಸಿದ್ದರು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.