ಕೊಪ್ಪಳ, ಸೆ.೦೨ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಕುರಿ-ಮೇಕೆ ಮತ್ತು ಜಾನುವಾರು ಸಂತೆಯು ಸೆಪ್ಟೆಂಬರ್ ೦೪ ರಿಂದ (ಶುಕ್ರವಾರದಿಂದ) ಆರಂಭವಾಗಲಿದೆ ಎಂದು ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ರೈತರು, ಕುರಿ-ಮೇಕೆ, ಜಾನುವಾರುಗಳ ಸಾಕಾಣಿಕೆದಾರರು, ವರ್ತಕರ ಹಿತದೃಷ್ಠಿಯಿಂದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಆಗಸ್ಟ್ ೨೮ ರಂದು ಕುರಿ-ಮೇಕೆ ಮತ್ತು ಜಾನುವಾರು ಸಂತೆ ಆರಂಭಿಸಲು ಅನುಮೋದನೆ ನೀಡಿದ್ದು, ಈ ಪ್ರಕಾರ ಸೆಪ್ಟೆಂಬರ್ ೦೪ ರಿಂದ ಕೂಕನಪಳ್ಳಿ ಉಪ ಮಾರುಕಟ್ಟೆ
ಪ್ರಾಂಗಣದಲ್ಲಿ ಕುರಿ-ಮೇಕೆ ಸಂತೆ ಹಾಗೂ ಗಿಣಿಗೇರಾ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಸಂತೆ ನಡೆಯಲಿದೆ.
ಕುರಿ-ಮೇಕೆ ಮತ್ತು ಜಾನುವಾರು ಸಾಕಾಣಿಕೆದಾರರು, ಖರೀದಿದಾರರು ಸಮಿತಿಯಿಂದ ಅಧಿಕೃತ ರಸೀದಿಗಳನ್ನು ಹೊಂದಿರುವುದು ಕುರಿ-ಮೇಕೆ ಮತ್ತು ಜಾನುವಾರುಗಳ ಮಾಲೀಕತ್ವವನ್ನು ದೃಢೀಕರಿಸುತ್ತದೆ. ಆದ್ದರಿಂದ ಮಾರಾಟಗಾರರು ಹಾಗೂ ಖರೀದಿದಾರರು ಉಪ ಮಾರುಕಟ್ಟೆ ಪ್ರಾಂಗಣದಲ್ಲಿಯೇ ವ್ಯವಹರಿಸಿ ಲಾಭ ಪಡೆದುಕೊಳ್ಳಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆರು ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News