Breaking News

ಸೇವಾ ಮತ್ತು ಸಮರ್ಪನಾ ಅಭಿಯಾನದಡಿ ೨೦ ದಿನ ಸ್ವಚ್ಚತಾ ಕಾರ್ಯ ಕೈಗೊಂಡ ಶೂಲೇಭಾವಿ ಭಾಜಪ ಕಾರ್ಯಕರ್ತರು,

ಅಮೀನಗಡ : ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಯಾದ ಮಾನ್ಯ ನರೇಂದ್ರ ಮೋದಿ ಅವರ ೭೧ ನೇ ಹುಟ್ಟು ಹಬ್ಬದ ಸಂಭ್ರಮವನ್ನು ಗ್ರಾಮದ ಪುರಾತನ ಐತಿಹಾಸಿಕ ಶಿವ ದೇವಾಲಯದಲ್ಲಿ  ಹುನಗುಂದ ತಾಲೂಕಿನ OBC ಘಟಕದ ಅಧ್ಯಕ್ಷರಾದ ನಾಗೇಶ ಗಂಜಿಹಾಳ ಅವರ ನೇತೃತ್ವದಲ್ಲಿ ಇಂದು ಶಿವಾಲಯದಲ್ಲಿ ಮಹಾ ರದ್ರಾಭಿಶೇಖ ಪೂಜಾ ಕಾರ್ಯಕ್ರಮ ನಡೆಯಿತು ,ಪಕ್ಷದ ಮುಖಂಡು ಹಾಗೂ ಕಾರ್ಯಕರ್ತರು ದೇವಾಲಯದ ಸುತ್ತ ಕಸ ಕಿತ್ತು ಪುರಾತನ ಕಲ್ಯಾಣಿ ( ಪುಷ್ಕರಣಿ) ಯನ್ನು ಸ್ವಚ್ಚ ಮಾಡಿದರು,

ಪುಷ್ಕರಣಿ ಸ್ವಚ್ಚಗೊಳಿಸುತ್ತಿರುವ ಕಾರ್ಯಕರ್ತ ನಾಗೇಶ ಗಂಜಿಹಾಳ, ಹಾಗೂ ಯಮನೂರ ಹುಲ್ಯಾಳ

ಕನಿಷ್ಟ ೨೦ದಿನಗಳ ಕಾಲ ಈ ಸೇವಾ ಮತ್ತು  ಸಮರ್ಪನಾ ಅಭಿಯಾನ ಈಗ ಪ್ರಾರಂಭವಾಗಿದ್ದು ಇಂದು ಇದಕ್ಕೆ ಚಾಲನೆ ನೀಡಲಾಗಿದೆ,ಗ್ರಾಮದ ಹಲವಾರು ದೇವಸ್ಥಾನಗಳು ಮಂದಿರ,ಮಸೀದಿಗಳು,ಆಸ್ಪತ್ರೆ, ಶಾಲೆ ಹೀಗೆ ಹಲವಾರು ಕಡೆ ನಮ್ಮ ಪಕ್ಷದಿಂದ ಸ್ಚಚ್ಚತಾ ಕಾರ್ಯ ನಡೆಯುತ್ತಿದ್ದು,ಈ ಅಭಿಯಾನದಲ್ಲಿ ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದುರು.

ನಮ್ಮ ಹೆಮ್ಮೆಯ ನಾಯಕ ಪ್ರಧಾನಿ ಅವರಿಗೆ ಆ ಶೂಲೇಶ್ವರ ಇನ್ನೂ ಹೆಚ್ಚಿನ ಆಯುಷ್ಯ,ಆರೋಗ್ಯ, ಶಕ್ತಿಯನ್ನು ನೀಡಲಿ ಎಂದು ಆ ಶಿವನಲ್ಲಿ ನಮ್ಮ ಪ್ರಾರ್ಥನೆ, ಎಂದು ನಾಗೇಶ ಗಂಜಿಹಾಳ ಹೇಳಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಗ್ಯಾನಪ್ಪ ಗೋನಾಳ ,ಶ್ರೀ ಜಗದೇಶ ಪಾಟೀಲ,ಪಕ್ಷದ ಹಿರಿಯ ಮುಖಂಡರಾದ ಶ್ರೀ ಹನಮಂತಗೌಡ ಬೇವೂರು,ಶ್ರೀ ಹನಮಂತ ಸರಗಂಟಿ, ಶ್ರೀ ರಾಮಚಂದ್ರ ನೆಮ್ಮದಿ, ಶ್ರೀ ಶಂಕ್ರಪ್ಪ ನಿ, ಮಾಡಬಾಳ,ಕೃಷ್ಟಾ ಬಂಗಾರಿ,


ಮುರಳೀಧರ ಮಾಂಡ್ರೆ,ನಿಂಗಪ್ಪ ಹಣಗಿ, ಯಮನೂರ ಹುಲ್ಯಾಳ,ಆನಂದ ಮೊಕಾಶಿ
ಶಿವುಕುಮಾರ ಅಂಬಿಗೇರ,ಪಾಂಡುಸಾಬ ಸಾಲಮನಿ,ಯಮನೂರ ಬಾರಕೇರ
,ರಾಜಶೇಖರ ಆರಿ,ಸುರೇಶ ಜವಳಿ.ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.ಶಿವಾಲಯದಲ್ಲಿ ಎಲ್ಲಾ ಕಾರ್ಯಕರ್ತರು ಹಾಗೂ ಬಂದ ಭಕ್ತರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

About vijay_shankar

Check Also

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಗುಡೂರ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿಗೆ ಕೊನೆ ಎಂದು? ವಯಸ್ಕರ ಮಕ್ಕಳೆ ಟಾರ್ಗೆಟ್ !

ಅಮೀನಗಡ : ಸಮೀಪದ ಗುಡೂರು ಎಸ್,ಸಿ ಗ್ರಾಮದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ವಿಚಿತ್ರ ಎಂದರೆ ಈ ದುಶ್ಚಟಕ್ಕೆ ವಯಸ್ಕರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.