
ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಕಳೆದ ಒಂದು ತಿಂಗಳಿಂದ ನಗರದ ಜನತೆ ಸೇರಿದಂತೆ ಸುತ್ತ ಹಳ್ಳಿಗಳಿಂದ ನಗರದ ಕುರಿ ಹಾಗೂ ಧನದ ಸಂತೆ ಮತ್ತು ಕಾಯಿಪಲ್ಯ ಮಾರುಕಟ್ಟೆಗೆ ಬರುವ ಸಾರ್ವಜ ನಿಕರಿಗೆ,ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ ನಂತರನೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನಂ ಪ್ರತಿ ಸಾವಿರ ಗಡಿ ದಾಟುತ್ತಿವಿ ಇತ್ತ ಸಾವಿನ ಸಂಖ್ಯೆ ದಿನಂ ಪ್ರತಿ ೨೦೦ ಕ್ಕೂ ಹೆಚ್ಚು ವರದಿಗಳು ಬರುತ್ತಿವೆ,ಇದನ ತಡೆಗಟ್ಟಲು ನಗರದ ಪಟ್ಟಣ ಪಂಚಾಯತಿ

ಮುಖ್ಯಾಧಿಕಾರಿ ಶ್ರೀ ಜಿ,ಪಿ,ಚೌಕಿಮಠ ಅವರ ಮಾರ್ಗದರ್ಶನದಲ್ಲಿ ಹಾಗೂ ಆಡಳಿತ ಮಂಡಳಿಯ ಸೂಚನೆಯಂತೆ ನಗರದಲ್ಲಿ ಪ್ರತಿ ವಾಡ್೯ ಸ್ಯಾನಿಟೇಜರ್ ಸಿಂಪಡನೆ ಮಾಡಲಾಯಿತು. ಅಲ್ಲದೆ ಸ್ವಚ್ಚತಾ ಕಾರ್ಯ ಹಾಗೂ ಜನತೆಗೆ ಕಡ್ಡಾಯ ಮಾಸ್ಕ್ ಧರಿಸಲು ಸೂಚಿಸಲಾಗಿದೆ.

ಬೆಳಗಿನ ಜಾವ ೬ ಗಂ,ಯಿಂದ ೧೦,ಗಂಟೆಯ ವರೆಗೆ ಸಾರ್ವಜನಿಕರಿಗೆ ಮಾರುಕಟ್ಟೆ ಹಾಗೂ ಇತರೆ ವಯಕ್ತಿಕ ಕೆಲಸ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ,ಇದನ್ನೆ ಬಂಡವಾಳ ಮಾಡಿಕೊಂಡು ಅನಾವಶ್ಯಕ ಬೈಕ್ ತಗೊಂಡು ಸುತ್ತಾಡುವ ಪುಂಡರ ಹುಟ್ಟು ಅಡಗಿಸಲು ನಗರದ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ರಸ್ತೆಗೆ ಇಳಿದು ಅನೇಕ ವಾಹನ ಸವಾರರಿಗೆ ದಂಡ ಹಾಕಿ ಕೆಲವು ವಾಹನ ಸೀಜ್ ಮಾಡಲಾಗಿದೆ ಎಂದರು. ಅಲ್ಲದೆ ಕೋವಿಡ್ ೨ನೇ ಭಾರಿ ಬೀಕರವಾಗಿದ್ದು ಸಾರ್ವಜನಿಕರು ಈ ಬಗ್ಗೆ ಯಾರು ಉದಾಸೀನ ಮಾಡಬಾರದು, ರಾಜ್ಯದಲ್ಲಿ ಇವತ್ತು ಬೆಳವಣಿಗೆ ನಾವೆಲ್ಲರೂ ನೋಡುತ್ತಿದ್ದಿರಿ ಇದನ ನಾವುಗಳು ಒಗ್ಗಟ್ಟಾಗಿ ಎದುರಿಸಬೇಕು.

ಸೋಂಕು ಹರಡದಂತೆ ತಾವು ಇವತ್ತಿನ ಪರಿಸ್ಥಿತಿಯನ್ನು ನೋಡಿದಿರಿ ಸಾಧ್ಯವಾದಷ್ಟು ಈ ಮದುವೆ,ಸಭೆ,ಸಮಾರಂಭ, ಜಾತ್ರೆ,ಧಾರ್ಮಿಕ ಕಾರ್ಯಕ್ರಮಗಳನ ಯಾರೂ ಮಾಡಬಾರದು ನಾವು ಇದಕ್ಕಿಂತ ಮುಂದಿನ ದಿನಮಾನದಲ್ಲಿ ತಜ್ಞರು ಹೇಳುವ ಪ್ರಕಾರ ೩ನೇ ಅಲೆ ಏಳುವ ಮೊದಲು ಇದನ ಸಾರ್ವಜನಿಕ ಅಂತರ ಹಾಗೂ ವಯಕ್ತಿಕ ಸಂರಕ್ಷಣೆಗೆ ನಾವು ಗಮನ ಕೊಡಬೇಕು ಎಂದುದರು,ಜನತೆಗೆ ದಂಡ ಹಾಕುವುದು ನಮ್ಮ ಉದ್ದೇಶ ಅಲ್ಲ ಸರಕಾರದ ಕೋವಿಡ್ ನಿಯಮಗಳನ್ನು ಯಾರು ಉಲ್ಲಂಘನೆ ಮಾಡದೇ ಈ ಮಹಾ ಮಾರಿ ಕರೋನ ವಿರುದ್ದ ನಾವು ನಿವೆಲ್ಲರೂ ಜಾಗೃತಿಯನ್ನು ಮೂಡಿಸಬೇಕು ನಗರದ ಸ್ವಚ್ಚತೆಗೆ ಗಮನ ಕೊಡಿ,ಕಡ್ಡಾಯ ಮಾಸ್ಕ್ ಧರಿಸಿ ,ಅನಾವಶ್ಯಕ ಹೊರಗಡೆ ಬರಬಾರದು ಎಂದು

ಈ BB News ಮೂಲಕ ಮುಖ್ಯಾಧಿಕಾರಿ ಶ್ರೀ ಜಿ,ಪಿ,ಚೌಕಿಮಠ ಹಾಗೂ ಸಮೂದಾಯ ಸಂಘಟನೆಯ ಅಧಿಕಾರಿ ಡಿ,ಧೂಳಪ್ಪ ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು, ಈ ನಿಯಮ ಹಾಗೂ ನಮ್ಮ ಮನವಿಯನ್ನು ಉಲ್ಲಂಘನೆ ಮಾಡಿದವರು ಯಾರೇ ಆಗಲಿ ಎಷ್ಟೇ ಪ್ರಭಾವಿ ಆಗಿದ್ದರು ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ಖಡಕ್ ಮಾರ್ನಿಂಗ್ ಮಾಡಿದರು.
ವರದಿ: ಕುಮಾರ : M,D,ಮಾಸಾಪತಿ.