Breaking News

ಡಾ. ಬಿ.ಆರ್. ಅಂಬೇಡ್ಕರ್‌ ಅವರಿಗೆ ಊಟ ಬಡಿಸಿದ್ದ ಬೆಳಗಾವಿ ಸಿದ್ದವ್ವ ಇನ್ನಿಲ್ಲ

ಬೆಳಗಾವಿ, (ಜುಲೈ.31): ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬೆಳಗಾವಿಗೆ ಬಂದಾಗ ಅವರನ್ನ ತಮ್ಮ ಮನೆಯಲ್ಲಿ ಇರಿಸಿಕೊಂಡು ಉಟೋಪಚಾರ ಮಾಡಿದ್ದ 95ವರ್ಷ ವಯಸ್ಸಿನ ವಯೋವೃದ್ಧೆ ಸಿದ್ಧವ್ವ ಮೇತ್ರಿ(95) ಕೊನೆಯುಸಿರೆಳೆದಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ಧವ್ವ, ಇವತ್ತು (ಶುಕ್ರವಾರ) ಬೆಳಿಗ್ಗೆ ತಮ್ಮ ನಿವಾಸ ಕಂಗ್ರಾಳಿ ಗಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
1939ರಲ್ಲಿ ಬೆಳಗಾವಿಗೆ ಆಗಮಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದ ಸಿದ್ಧವ್ವ, ಊಟದ ವ್ಯವಸ್ಥೆ ಮಾಡಿದ್ದರು.

ಇದರಿಂದ ತೀವ್ರ ಸಂತೋಷಗೊಂಡ ಅಂಬೇಡ್ಕರ್ ಅವರು, ನಿಮ್ಮಂತ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿ, ಸಮಾಜದಲ್ಲಿ ಬೆಳೆಯಬೇಕೆಂದು ಸಲಹೆ ನೀಡಿದ್ದರು. ಇದರಿಂದ ತೀವ್ರ ಪ್ರಭಾವಿತಳಾಗಿದ್ದ ಸಿದ್ಧವ್ವ, ಜೀವಿತ ಅವಧಿಯಲ್ಲಿ ಅಂಬೇಡ್ಕರ್ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

About vijay_shankar

Check Also

ಬಾಗಲಕೋಟೆ ನಗರದಲ್ಲಿ ಭೋವಿ ಗುರು ಕುಟೀರ ,ಸಮಾವೇಶ ಸಿ,ಎಂ ಸಿದ್ದರಾಮಯ್ಯನವರಿಂದ ಉದ್ಘಾಟನೆ

ಬಾಗಲಕೋಟೆ : ಬಾಗಲಕೋಟೆ:ನವನಗರದಲ್ಲಿ ಭೋವಿ ಜನಾಂಗದ ಗುರು ಕುಟೀರವನ್ನು ಹಾಗೂ ಶ್ರೀ ಶರಣಬಸವ ಸ್ವಾಮಿಗಳ ಗದ್ದುಗೆ ಶಿಲಾನ್ಯಾಸ ಭೋವಿ ಸಮಾಜದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.