Breaking News

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ವಿಶೇಷ ಅಭಿಯಾನ ಚಾಲನೆ

ಬ್ಯಾಡಗಿ: ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಜರುಗಿದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಅಭಿಯಾನಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲತಾ ತಬರೆಡ್ಡಿ ಚಾಲನೆ ನೀಡಿದರು. ಈ ಸಮಯದಲ್ಲಿ ಮಾತನಾಡಿದ ಅವರು,

ಗ್ರಾಮೀಣ ಪ್ರದೇಶದಲ್ಲಿ ವಿವಿಧ ನರೇಗಾ ಯೋಜನೆಯ ಕಾಮಗಾರಿಗಳನ್ನು ನಿರ್ಮಿಸಿ ಕೊಳ್ಳಲು ಅವಕಾಶಗಳಿದ್ದು, ಗ್ರಾಮಸ್ಥರು ಇಂತಹ ಯೋಜನೆಗಳಿಂದ ವೈಯಕ್ತಿಕ ಹಾಗೂ ಗ್ರಾಮದ ಅಭಿವೃದ್ದಿ ಸಾದ್ಯ. ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರು ತೋಟಗಾರಿಕೆ, ಜಾನುವಾರು ಮನೆ, ಕಾಲುವೆ, ಬದು ನಿರ್ಮಾಣ ಸೇರಿದಂತೆ ಹತ್ತು ಹಲವು ಕಾಮಗಾರಿಗಳನ್ನು

ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಈಗ ಸೋಕ್ ಪಿಟ್ (ಬಚ್ಚಲು ಗುಂಡಿ) 17 ಸಾ.ರೂ, ಪೌಷ್ಟಿಕ ತೋಟ ನಿರ್ಮಾಣ 2397, ಅಣಬೆ ಶೆಡ್‍ಗೆ 95 ಸಾ.ರೂ.ವೆಚ್ಚಕ್ಕೆ ಅವಕಾಶವಿದೆ ಕಲ್ಪಿಸಿದೆ ಎಂದರು. ಈ ಸಂದರ್ಭದಲ್ಲಿ ತಾ.ಪಂ ನರೇಗಾ ಯೋಜನೆಯ ಮಾಹಿತಿ ಸಂಯೋಜಕ ಶಾನವಾಜ್ ಚಿಣಗಿ, ಗ್ರಾಮಸ್ಥರಾದ ಬಸಪ್ಪ ಜ್ಯೋತಿ, ಈರನಗೌಡ ಗೌಡ್ರ, ನಿಂಗಪ್ಪ ಯಲಿಗಾರ, ಶಾಂತವ್ವ ಹರಿಹರ, ದ್ಯಾಮಪ್ಪ ಮಲ್ಲಾಡದ ಉಪಸ್ಥಿತರಿದ್ದರು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.