ಚೆನ್ನೈ : ಗಾನ ಗಾರುಡಿಗ ದೇಶದ ಹಿರಿಯ ಹಾಡುಗಾರ ಬಾಲಸುಬ್ರಹ್ಮಣ್ಯಂ ಹಾಡು ಮುಗಿಸಿದ್ದಾರೆ .
ಬಾಲಸುಬ್ರಹ್ಮಣ್ಯಂ ಅವರ ಪುತ್ರ ಚರಣ್ ಅವರು ಮಾಧ್ಯಮಗಳಿಗೆ ಈ ವಿಷಯವನ್ನು ತಿಳಿಸಿದರು .
ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕಳೆದ 52 ದಿನಗಳ ಹಿಂದೆ ಕೋರೋನಾ ಚಿಕಿತ್ಸೆಗೆಂದು ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದರು .
ವಿದೇಶದ ಪ್ರಖ್ಯಾತ ಗಾಯಕರಲ್ಲಿ ಒಬ್ಬರಾಗಿದ್ದ ಬಾಲಸುಬ್ರಹ್ಮಣ್ಯ ಕಳೆದ 3 ದಶಕಕ್ಕೂ ಅಧಿಕ ಕಾಲದಿಂದ ದೇಶದ ಹದಿನಾರು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ದೇಶದ ಜನ ಮನಗಳ ,ಮನೆಗಳಲ್ಲಿ ತನ್ನದೇ ಆದ ಸ್ಥಾನ
ಗಳಿಸಿಕೊಂಡಿದ್ದ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ .
ಕಳೆದ 3 ದಶಕಕ್ಕೂ ಅಧಿಕ ಕಾಲದಲ್ಲಿ ದೇಶದ ಬಹುತೇಕ ಎಲ್ಲ ಭಾಷೆಗಳ 185 ನಾಯಕ ನಟರುಗಳ ಹಾಡಿಗೆ ಅವರು ಧ್ವನಿ ನೀಡಿದ್ದರು.
ಕನ್ನಡ ತಮಿಳು ತೆಲುಗು ಮಲೆಯಾಳಿ ಸೇರಿದಂತೆ ಹಲವಾರು ಭಾಷೆಗಳ ಹಲವಾರು ಚಿತ್ರಗಳಲ್ಲಿಯೂ ಸಹ ಅವರು ನಟಿಸಿ ಸೈ ಎನಿಸಿಕೊಂಡಿದ್ದರು.
ಚಿಕಿತ್ಸೆಗೆಂದು ಆಸ್ಪತ್ರೆ ಸೇರಿದ್ದ ಅವರ ಆರೋಗ್ಯಕ್ಕಾಗಿ ದೇಶಾದ್ಯಂತ ಅವರ ಅಭಿಮಾನಿಗಳು ದಿನನಿತ್ಯ ಪ್ರಾರ್ಥನೆ ಮಾಡುತ್ತಿದ್ದರು .ತಮಿಳುನಾಡು ಮುಖ್ಯಮಂತ್ರಿ, ಆರೋಗ್ಯ ಸಚಿವರು, ಎಸ್ ಪಿ ಬಿ ಅವರ ಕುಟುಂಬದ ಸದಸ್ಯರು, ಹಲವು ನಟ ನಟಿಯರು ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ತಿಳಿದು ಬಂದಿದೆ.