Breaking News

ಇಂಗಳಗಿ ಗ್ರಾಮದ ಶ್ರೀ ಯಂಕಣ್ಣ ಆಲಿ,ಅವರಿಗೆ ಸಂಗಣ್ಣಗೌಡ ಅವರಿಂದ ರಾಜ್ಯ ಪ್ರಶಸ್ತಿ ಪ್ರಧಾನ,

ಬಾಗಲಕೋಟ ಜಿಲ್ಲೆಯಲ್ಲಿ ಶೇ.70 ಪಿಕೆಪಿಎಸ್‌ಗಳು ಲಾಭದಲ್ಲಿದ್ದು, ಅತ್ಯುತ್ತಮ ಸಾಧನೆಯ ದಾಖಲೆ ಹೊಂದಿವೆ. ಸಾಲದ ವಸೂಲಾತಿ ಮತ್ತು ವ್ಯವಹಾರ ಅಭಿವೃದ್ಧಿ ಮೂಲಕ ಲಾಭದತ್ತ ಸಾಗಲು ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ತರಬೇತಿಗಳು ಅವಶ್ಯಕ. ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಗಣಕಯಂತ್ರಗಳನ್ನು ಅಳವಡಿಸಲಾಗಿದೆ.

ಪ್ರತಿಯೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಆಧುನಿಕ ಬ್ಯಾಂಕಿಂಗ್‌ ವ್ಯವಸ್ಧೆಗೆ ಅನುಗುಣವಾಗಿ ಸನ್ನದುಗೊಳಿಸಿದರೆ ಕೇವಲ ಕೃಷಿ ಕ್ಷೇತ್ರವನ್ನಲ್ಲದೇ ಇತರ ವ್ಯಾಪಾರಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವತ್ತ ಸಂಘಗಳು ಗಮನ ಹರಿಸಲು ಸಾಧ್ಯವಾಗುತ್ತದೆ.

ಇಂತಹ ಸಂಘ,ಸಂಸ್ಥೆಯ ಸಾಲಿನಲ್ಲಿ ಬಾಗಲಕೋಟೆ ತಾಲೂಕಿನ ಬೈರಮಟ್ಟಿ ಗ್ರಾಮದ ಸಂಘದ ಮುಖ್ಯ ಕಾರ್ಯದರ್ಶಿ ಯಂಕಣ್ಣ ಆಲಿ ಅವರ ಅನೇಕ ವಿಚಾರಗಳು ಹಾಗೂ ಸಂಘಕ್ಕೆ ಇತರೆ ಆದಾಯ ತರುವ ಅನೇಕ ಲಾಭದ ವಿವಿಧ ಉದ್ಯಮ ಸ್ಥಾಪಿಸಲು ಚಿಂತನೆ ನಡೆದಿದೆ ಆದರೆ ಸಂಘದ ಕಾರ್ಯಾಲಯ ಚಿಕ್ಕದಿರುವ ಕಾರಣ ಹೊಸ ಜಾಗದ ಸಲುವಾಗಿ ಈಗಾಗಲೇ ಶಾಸಕರು, ಜಿಲ್ಲಾಧಿಕಾರಿ, ಸ್ಥಳಿಯ ಪಂಚಾಯತ್ ಆಡಳಿತ ಮಂಡಳಿಯ ಅವರಿಗೆ ಮನವಿ ಸಲ್ಲಿಸಲಾಗಿದೆ, ಇವರ ಕಾರ್ಯ ಚಟುವಟಿಕೆ ಆಡಳಿತ ಮಂಡಳಿಯ ಸಹಕಾರ ಇಂದು ಸಂಘ ಅತೀ ವೇಗವಾಗಿ ಬೆಳೆಯುತ್ತಿರುವ ಕಾರಣ ಅವರ ಸೇವೆ ಗುರುತಿಸಿ ಕಳೆದ ವಾರ ನಮ್ಮ ಪತ್ರಿಕೆಯಲ್ಲಿ ಬಾಗಲಕೋಟೆ ತಾಲೂಕಿನ ಬೈರಮಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ

ಮುಖ್ಯ ಕಾರ್ಯನಿರ್ವಾಹಕರಾದ ಯಂಕಣ್ಣ ಆಲಿ ಅವರ ಪ್ರಾಮಾಣಿಕ ಸೇವೆ ಪರಿಗಣಿಸಿ ಇಂದು ಬಾಗಲಕೋಟೆ ಜಿಲ್ಲೆಯ ಕರ್ನಾಟಕ ಪತ್ರಕರ್ತರ ಸಂಘ,ಹಾಗೂ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ ದೆಹಲಿ, ಹಾಗೂ ನಮ್ಮ ಪತ್ರಿಕೆಯ ಸಹಯೋಗದಲ್ಲಿ ಇಂದು ಪ್ರಸಕ್ತ ೨೦೨೦ನೇ ಸಾಲಿನ “ಅತ್ಯುತ್ತಮ ಕಾರ್ಯನಿರ್ವಾ ಹಕ, ರಾಜ್ಯ ಪ್ರಶಸ್ತಿ ನೀಡಿ ಯಂಕಣ್ಣ ಆಲಿ ಅವರನ್ನು ಸಂಘದ ರಾಷ್ಟ್ರೀಯ ಸದಸ್ಯರಾದ ಸಂಗಣ್ಣಗೌಡ ಗೌಡರ,ಹಾಗೂ ಸಣ್ಣ ಪತ್ರಕೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ದಾನಯ್ಯಸ್ವಾಮಿ ಹಿರೇಮಠ ಹಾಗೂ ಕ,ಪ,ಸಂ,ಜಿಲ್ಲಾ ಅಧ್ಯಕ್ಷ ಡಿ,ಬಿ,ವಿಜಯಶಂಕರ್,ಸಂಘದ ಅಧ್ಯಕ್ಷ ಶಿವಪುತ್ರಪ್ಪ ,

ಕಮತಗಿ,ಶರಣಪ್ಪ ಬಳೂತಿ,ಹಾಗೂ ವೆಂಕಟೇಶ ಕಲಕರ್ಣಿ, ಸಂಗಪ್ಪ ಹಾವರಗಿ, ಗುರಬಸಪ್ಪ ವಡ್ಡರಕಲ್ಲ,ಚನ್ನಬಸಪ್ಪ ನೆರೆಗಲ್ಲ,ರಾಮಣ್ಣ ಬಳೂಲದ, ಅವರ ಸಮ್ಮೂಖದಲ್ಲಿ ಪ್ರಶಸ್ತಿ ನೀಡಿ ಗೌರವ ಮಾಡಲಾಯಿತು,ಹಾಗೂ ಸಂಘದ ಸಿಬ್ಬಂದಿ ಸೇರಿದಂತೆ ಅನೇಕ ಹಿರಿಯರು, ಉಪಸ್ಥಿತಿ ಇದ್ದರು,
೨೦೧೩ ರಿಂದ ಸಂಘದಲ್ಲಿ ಕಾರ್ಯದರ್ಶಿಯಾಗಿ ಜನಮನ ಗೆದ್ದ ಯಂಕಣ್ಣ ಆಲಿ ಅವರ ಕಾರ್ಯದಕ್ಷತೆ, ಹಾಗೂ ಅವರ ಪ್ರಾಮಾಣಿಕ ಸೇವೆಯ ಫಲವಾಗಿ ಪ್ರಶಸ್ತಿ ಒಲಿದು ಬಂದಿದೆ ಎಂದು ವೆಂಕಟೇಶ,ಕುಲಕರ್ಣಿ ತಿಳಿಸಿದರು, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈ ಜೊಡಿಸಲು ವಿನಂತಿಸಲಾಯಿತು, ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಕಮತಗಿ,ಉಪಾಧ್ಯಕ್ಷ ಶರಣಪ್ಪ,ಬಳೂಲದ,ಅವರಿಗೆ ನಮ್ಮ ಪತ್ರಿಕೆಯ ಬಳಗದಿಂದ ಗೌರವ ಸನ್ಮಾನ ಮಾಡಲಾಯಿತು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.