
ಶ್ರೀ ಲಕ್ಷ್ಮಣ್ಣ ಮಂತ್ರಿ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಇಲಕಲ್ಲ ತಾಲೂಕಿನ ಗುಡೂರು ಎಸ್,ಸಿ, ಗ್ರಾಮ ಪಂಚಾಯತಿಯಿಂದ ಆಯ್ಕೆ ಯಾದರು, ಉಪ ಚುನಾವಣೆಯಲ್ಲಿ ಎಸ,ಆರ್,ಎನ್,ಇ, ಫೌಂಡೇಶನ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದರು, ವಾರ್ಡ ೦೮ ರ ಎಲ್ಲಾ ಫೌಂಡೇಶನ್ ಕಾರ್ಯಕರ್ತರು ಶ್ರಮ ವಹಿಸಿ ಲಕ್ಷಣ್ಣ ಮಂತ್ರಿ ಅವರಿವೆ ಗೆಲುವು ತಂದು ಕೊಟ್ಟಿದ್ದಕ್ಕಾಗಿ ಫೌಂಡೇಶನ್ ಸಂಸ್ಥಾಪಕ/ ಅಧ್ಯಕ್ಷರಾದ ಶ್ರೀ ಎಸ್,ಆರ್,ನವಲಿ ಹಿರೇಮಠ ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಸಲಿಂ ಜರತಾರಿ, ಶಫೀಕ್ ಇಟಗಿ, ಶ್ರೀ ಶಶಿ ಮ್ಯಾಗೇರಿ ಶ್ರೀ ಮಹಾಂತೇಶ ಕುಂಬಾರ ಮತ್ತಿತರರು ಈ ವಿಜಯೋತ್ಸವದಲ್ಲಿ ಭಾಗವಹಿಸಿ SRNE ಫೌಂಡೇಶನ್ ವತಿಯಿಂದ ಮತದಾರರಿಗೆ ಧನ್ಯವಾದ ಹೇಳಿದರು.