ಅಮೀನಗಡ : ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ದಿ ಪುರುಷರ ತಾನ ಸಿದ್ದನಕೊಳ್ಳದಲ್ಲಿ ಸುಮಾರು ಆರುನೂರು ವರ್ಷಕ್ಕೂ ಅಧಿಕ ಮಹಿಮೆ ಹೊಂದಿದ ಲಿಂಗಸೂರು ತಾಲೂಕಿನ ಅಂಕಲಿಮಠದ ಪವಾಡ ಪುರುಷ ಶ್ರೀ ಗುರು ಅಡವೀಶ ನೀರುಪಾಧೀಶ್ವರರ ಮಹಿಮೆಯನ್ನು ಹಾಗೂ ಅವರ ಅನೇಕ ಪವಾಡಗಳನ್ನು ಸಾರುವ ಉತ್ತರ ಕರ್ನಾಟಕದ ಮಹಾ ಮಹಿಮರಾದ ಇವರ ಜೀವನಾಧಾರಿತ ಚಿತ್ರ ಪೊಜ್ಯರ ಮಹಿಮೆಯ ಸಾರುವ ಆಧ್ಯಾತ್ಮಿಕ ಚಿತ್ರವೇ ಈ “ಭಾವೈಕ್ಯ ಬ್ರಹ್ಮ. ಎಂದು ಚಿತ್ರದ ನಾಯಕ ಮಾಸ್ಟರ್ ಆನಂದ ಸುದ್ದಿಗಾರರೊಂದಿಗೆ ಚಲನಚಿತ್ರದ ವಿಷೇಶತೆ ಕುರಿತು ಹಂಚಿಕೊಂಡರು,
ಅಂಜನಾದ್ರಿ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ಈ ಚಲನಚಿತ್ರದ ನಿರ್ಮಾಪಕ ವಿಜಯಕುಮಾರ ಗದ್ದಿ ಅವರು ಮಾತನಾಡಿ ಈ ಚಿತ್ರ ಇಂದಿನ ವೈಜ್ಞಾನಿಕತೆ ಎಷ್ಟೇ ಮುಂದು ವರೆದರೂ ಸಹ ಜನರಲ್ಲಿ ಇಂದಿಗೂ ಭಕ್ತಿ, ಭಾವ ,ಕಡಿಮೆ ಆಗಿಲ್ಲ ಇಂದಿಗೂ ಪವಾಡಗಳನ್ನು ಮಾಡುವ ಮಹಾ ಶರಣರು ಇದ್ದಾರೆ, ವೈಜ್ಞಾನಿಕತೆಯ ಇಂದಿನ ಈ ನಾಡಲ್ಲಿ , ಧೈವ ಶಕ್ತಿ ಕುರಿತು ಉತ್ತಮ ಆಧ್ಯಾತ್ಮಕ ಚಲನಚಿತ್ರ ಮೂಡಿಬರುತ್ತಿದೆ.
ಅಲ್ಲದೇ ಡಾ!! ಶಿವಕುಮಾರ ಸ್ವಾಮೀಜಿ ಈ ಚಲನಚಿತ್ರದಲ್ಲಿ ವಿಷೇಶ ಪಾತ್ರದಲ್ಲಿ ಕಾಣಿಸಲಿದ್ದಾರೆ, ಈ ಚಿತ್ರದ ಶೂಟಿಂಗ್ ಬೆಂಗಳೂರು, ರಾಯಚೂರು, ಬಾಗಲಕೋಟೆ,ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯಲಿದೆ ಎಂದರು. ಈ ಚಿತ್ರೀಕರಣದ ಪೊಜಾ ಕಾರ್ಯಕ್ರಮದಲ್ಲಿ ನಿರ್ಪಾಪಕ,ವಿಜಯಕುಮಾರ ಗದ್ದಿ, ನಾಯಕ ನಟ ಮಾಸ್ಟರ ಆನಂದ ಡಾ!! ಶಿವಕುಮಾರ್ ಸ್ವಾಮೀಜಿ, ಚಿತ್ರದ ನಾಯಕ ನಟಿ,ನಯನಾ,ಪೋಷಕ ಪಾತ್ರದಲ್ಲಿ ವಾಣಿಶ್ರೀ,ಅಂಜಕಪ್ಪ ಹಾಗೂ ಛಾಯಾಗ್ರಹಣ ಸಿದ್ದಾರ್ಥ,ಬೈರವ,ಮಂಜುನಾಥ, ಸಹಪಾತ್ರ ಶಿವಕುಮಾರ, ಚಂಗಳಿ, ಪ್ರಕಾಶ ರೆಡ್ಡಿ, ನೀಲಪ್ಪ ಮಡಿವಾಳರ,ನಾಯಕ ನಟ ಪ್ರವೀಣ್ ಎಸ್ ಪತ್ರಿ,ಮಂಜುನಾಥ ಅಳ್ಳೂರು, ಅಪೂರ್ಣ , ಮಂಜುನಾಥ, ಮಹಾಂತೇಶ, ಮುಂತಾದವರು ಉಪಸ್ಥಿತಿ ಇದ್ದರು.
ವರದಿ: ಶ್ರೀಮತಿ ಶೀಲಾ,ಎಸ್,ಸುಂಕದ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News