ಧಾರವಾಡ: ಕರಗದ ಪ್ಲಾಸ್ಟಿಕ್ ತಿಂದು, ಮಣ್ಣಿನಲ್ಲಿ ಸುಲಭವಾಗಿ ಕರಗಬಲ್ಲ ವಸ್ತುವನ್ನಾಗಿ ಪರಿವರ್ತಿಸುವ ಹುಳುವನ್ನು ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪತ್ತೆ ಮಾಡಿದ್ದಾರೆ. ಶೀತಲ್ ಕೆಸ್ತಿ ಎಂಬ ವಿದ್ಯಾರ್ಥಿ ತನ್ನ ಮಾರ್ಗದರ್ಶಕರಾದ ಡಾ.ಸಿ.ಟಿ.ಶಿವಶರಣ ಅವರ ನೆರವಿನಿಂದ ಈ ಹುಳುವನ್ನು ಪತ್ತೆ ಮಾಡಿದ್ದಾರೆ. ಸಾಮಾನ್ಯವಾಗಿ ಬೇಳೆ, ಅಕ್ಕಿಯಲ್ಲಿ ಕಂಡುಬರುವ ‘ರೈಸ್ ಮೌತ್ ಲಾರ್ವಾ’ ಹೆಸರಿನ ಚಿಟ್ಟೆಯಾಗುವ ಹುಳು, ಪ್ಲಾಸ್ಟಿಕ್ ತಿಂದು ಜೀರ್ಣಿಸಿಕೊಳ್ಳುವ ಅಪರೂಪದ ಸಂಗತಿ ಇವರ ಪ್ರಯೋಗಾಲಯದಲ್ಲಿ ದೃಢಪಟ್ಟಿದೆ. …
Read More »