ಕೂಡಲಸಂಗಮ : ಹುನಗುಂದ ತಾಲೂಕಿನ ಖಜಗಲ್ಲ ಗ್ರಾಮಕ್ಕೆ ಇಂದು ತಹಶಿಲ್ದಾರ ಬಸವರಾಜ ನಾಗರಾಳ ಬೇಟಿ ನೀಡಿ ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಕರೆ ನೀಡಿದರು, ಹೊಸ ೨೮ ಶಡ್ಡ್ ನಿರ್ಮಾಣ ಮಾಡಿ ಅಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ನೀಡುವುದಾಗಿ ತಿಳಿಸಿದರು ಇದಕ್ಕೆ ಪ್ರತಿ ಕ್ರಿಯಿಸಿದ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯರ ಬಾಲಪ್ಪ ಕಾಳಗಿಯವರು ಪ್ರಸಕ್ತ ೨೦೦೭/ ೦೮ನೇ ಸಾಲಿನಲ್ಲಿ ಖಜಗಲ್ಲ ಗ್ರಾಮ ಸಂಪೂರ್ಣ ಮುಳುಗಡೆ ಆಗಿತ್ತು ಆಗ ಹೊಸ ಪ್ಲಾಟ್ ನಲ್ಲಿ ಮುಳುಗಡೆ ಮನೆ ನಿರ್ಮಾಣ ಗೊಂಡು ೧೦/ ೧೨ ವರ್ಷ ಕಳೆದರೂ ಇನ್ನೂ ಹಕ್ಕು ಪತ್ರ ಕೊಡುವ ಪ್ರಯತ್ನ ಯಾವ ಶಾಸಕರೂ ಮಾಡಿಲ್ಲ.
ಜನರೂ ಕೊಡ ಮನೆ ಹಕ್ಕು ಪತ್ರ ಪಡೆದಿಲ್ಲ ಕಾರಣ ಇಲ್ಲಿಯ ವರೆಗೆ ಅಲ್ಲಿ ರಸ್ತೆ ಇಲ್ಲ, ನೀರಿನ ವ್ಯವಸ್ಥೆ ಇಲ್ಲ ,ವಿದ್ಯುತ್ ಇಲ್ಲ ಇಡಿ ಮನೆಗಳು ಜಾಲಿಮುಳು ಕಂಟಿಗಳಿಂದ ಮುಚ್ಚಿ ಹೊಗಿವೆ ಈ ಬಗ್ಗೆ ಯಾವ ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ ಪ್ಲಡ್ ಬಂದಾಗ ಮಾತ್ರ ಅಧಿಕಾರಿಗಳು, ಶಾಸಕರು ಇತ್ತ ಬರುವ ಬದಲು ನಮ್ಮ ಗ್ರಾಮದ ಜನತೆಗೆ ಶಾಶ್ವತ ಮೂಲ ಸೌಲಭ್ಯ ಒದಗಿಸಲು ತಹಶಿಲ್ದಾರ ಬಸವರಾಜ ಅವರಿಗೆ ಮನವಿ ಮಾಡಿಕೊಂಡರು, ಇದಕ್ಕೆ ಸ್ಪಂದಿಸಿದ ತಹಶಿಲ್ದಾರ ಬಸವರಾಜ ಅವರು ಮೊದಲು ನೀವು ಮನೆಗಳ ಹಕ್ಕು ಪತ್ರ ತೆಗೆದುಕೊಳ್ಳುವ ಪ್ರಯತ್ನ ಮಾಡಿ ಅದಕ್ಕೆ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತಿನೆ .ಮನೆ ಹಕ್ಕು ಪತ್ರ ಪಡೆದ ಮೇಲೆ ಅಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆಗೆ ಹೇಳಿ ಮೂಲಭೂತ ಸೌಕರ್ಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು ಈಗ ಪ್ಲಡ್ ಬರುತ್ತಿದ್ದು ನಿಮ್ಮ ಸುರಕ್ಷೆತೆಗಾಗಿ ೨೮ ಶಡ್ ನಿಮಾರ್ಣ ಮಾಡಿದ್ದು ತಮ್ಮ ತಮ್ಮ ಸುರಕ್ಷಿತೆ ನೋಡಿಕೊಂಡು ಅಲ್ಲಿಗೆ ತೆರಳಲು ಮನವಿ ಮಾಡಿಕೊಂಡರು ,ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಂ,ಪಂ, ಮಾಜಿ, ಸದಸ್ಯರ ಬಾಲಪ್ಪ ಕಾಳಗಿ ರಾಮಣ್ಣ ನಂದಿಕೇಶ್ವರ,ಹನಮಂತ ಮಂಖನಿ,ಮುದಿಯಪ್ಪ ವಾಲಿಕಾರ,ರಾಮಪ್ಪ ಕೊಪ್ಪದ,ಬಸಪ್ಪ ಮಂಖನಿ,ಪರಸಪ್ಪ ಮಾಗಿ,ಸುರೇಶ ಲಘಮಣ್ಣನವರ,ಮುತ್ತಪ್ಪ ಭಾವಿಕಟ್ಟಿ,ಮಲ್ಲಪ್ಪ ಕೊಪ್ಪದ,ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತಿ ಇದ್ದರು. ಗ್ರಾಮ,ಪಂ,ಅಭಿವೃದ್ಧಿ ಅಧಿಕಾರಿ ಬಸವರಾಜ ಹುದ್ದಾರ, ಗ್ರಾಮ ಲೆಕ್ಕಾಧಿಕಾರಿ ಎಸ್,ಆರ್ ಪಾಟೀಲ ಇದ್ದರು. ವರದಿ- ಮಂಜುನಾಥ